SUDDIKSHANA KANNADA NEWS/ DAVANAGERE/ DATE:08-06-2023
ದಾವಣಗೆರೆ: ಫೋನ್ ಪೇ ಬಹುತೇಕರು ನಗರ ಪ್ರದೇಶದಲ್ಲಿ ಬಳಕೆ ಮಾಡ್ತಾರೆ. ಇದನ್ನ ಬಳಸಿಕೊಂಡ ಕಾಲೇಜು ಸ್ಟೂಡೆಂಟ್ ಮಾಡಿದ್ದು ಮಾತ್ರ ಘನಘೋರ. ಅರ್ಜೆಂಟ್ ಕಾಲೇಜ್ ಫೀಸ್ ಕಟ್ಟಬೇಕು. ಬೇರೆಯವರು ನಿಮ್ಮ ಅಕೌಂಟ್ ಗೆ ಹಣ ಹಾಕ್ತಾರೆ. ಆ ಹಣವನ್ನು ಬಿಡಿಸಿಕೊಡಿ ಎಂದುಕೊಂಡ ಬಂದವ ತಂದಿಟ್ಟ ಫಜೀತಿ ಅಂತಿಂಥದ್ದಲ್ಲ. ಹಣ ಬಿಡಿಸಿಕೊಟ್ಟು, ಫೋನ್ ಪೇ (PHONE PAY) ಮಾಡಿದ ತಪ್ಪಿಗೆ ಪೊಲೀಸ್ (police) ಠಾಣೆ ಮೆಟ್ಟಿಲು ಹತ್ತುವಂತಾಯ್ತು ಆಪದ್ಭಾಂಧವನಿಗೆ.
ಆಶ್ಚರ್ಯ ಆದ್ರೂ ಸತ್ಯ. ಕಷ್ಟ ಎಂದರೆ ಮರಗುವ, ವಿದ್ಯಾರ್ಥಿಗಳೆಂದರೆ ಸಹಾಯ ಮಾಡುವ ಮನೋಭಾವ ಹೊಂದಿರುವವರು ಈಗಲೂ ಇದ್ದಾರೆ. ಒಂದು ರೂಪಾಯಿ ಪಡೆಯದೇ, ಕಾಲೇಜು ವಿದ್ಯಾರ್ಥಿಗೆ ಸಹಾಯ ಮಾಡಲು ಹೋಗಿ ಬೇಡದ ಉಸಾಬರಿ ಮೈಮೇಲೆ ಎಳೆದುಕೊಂಡ ಆಪದ್ಭಾಂಧವ ಸ್ಟೋರಿ ಇದು.
ಕಷ್ಟಕ್ಕೆ ಸಿಲುಕಿದವರು ಯಾರು…?
ಇವರ ಹೆಸರು ಕೆ. ಉಮೇಶ್. ದಾವಣಗೆರೆಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಾನು ಕಾಲೇಜು ವಿದ್ಯಾರ್ಥಿ. ನನ್ನ ಹೆಸರು ಸೋನಾ ನಾಯ್ಕ್ ಎಂದೇಳಿ ಪರಿಚಯಿಸಿಕೊಂಡಿದ್ದಾನೆ.ನಿಮ್ಮ ಅಕೌಂಟ್ ಗೆ 1ಲಕ್ಷದ 47 ಸಾವಿರ ರೂಪಾಯಿ ಹಾಕುತ್ತಾರೆ. ಆ ಹಣವನ್ನು ಬಿಡಿಸಿಕೊಡಿ ಎಂದು ಹೇಳಿದ್ದಾನೆ. ಬಾಲಕೃಷ್ಣ ಎಂಬಾತನು ಉಮೇಶ್ ಅವರ ಅಕೌಂಟ್ ಗೆ ಹಣ ಹಾಕಿದ್ದಾನೆ. ಆ ಬಳಿಕ ಎಟಿಎಂನಿಂದ 95 ಸಾವಿರ ರೂಪಾಯಿ
ಬಿಡಿಸಿಕೊಟ್ಟಿದ್ದಾರೆ. ಈ ಹಣ ತೆಗೆದುಕೊಂಡು ಹೋದ ಸೋನಾ ನಾಯ್ಕ್ ಉಳಿದ ಹಣವನ್ನು ಮಂಜುನಾಥ್ ಅವರ ಮೊಬೈಲ್ ನಂಬರ್ ಗೆ ಫೋನ್ ಪೇ (PhonePe) ಮಾಡುವಂತೆ ಹೇಳಿದ್ದಾನೆ.
ಫೋನ್ ಪೇ (PhonePe) ಮೂಲಕ ಹಣ:
ಅದರಂತೆ ಉಮೇಶ್ ಅವರು ಫೋನ್ ಪೇ (PhonePe) ಮೂಲಕ 52 ಸಾವಿರ ರೂಪಾಯಿಯನ್ನು ಮಂಜುನಾಥ್ ಅವರಿಗೆ ಕಳುಹಿಸಿದ್ದಾರೆ. ಬಳಿಕ ಬಾಲಕೃಷ್ಣರ ಸಂಪರ್ಕಕ್ಕೆ ಸೋನಾ ನಾಯ್ಕ್ ಸಿಕ್ಕಿಲ್ಲ. ತಾನು ಮೋಸ ಹೋಗಿರುವ ಅರಿವಾಗಿ ಚಿತ್ರದುರ್ಗ (CHITHRADURGA) ನಗರ ಪೊಲೀಸ್ (POLICE) ಠಾಣೆಗೆ ತೆರಳಿ ದೂರು ನೀಡಿದ್ದಾರೆ. ನಾನು ದಾವಣಗೆರೆಯ ಉಮೇಶ್ ಎಂಬುವವರ ಅಕೌಂಟ್ ಗೆ ಅಮೌಂಟ್ ಹಾಕಿರುವುದಾಗಿ ಹೇಳಿದ್ದಾನೆ. ಇಲ್ಲಿಂದ ಮತ್ತೊಂದು ಕಥೆ ಶುರುವಾಗಿ ಉಮೇಶ್ ಪೇಚಿಗೆ ಸಿಲುಕಿದ್ದಾರೆ. ತನ್ನದಲ್ಲದ ತಪ್ಪಿಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವಂತಾಯ್ತು. ಪೊಲೀಸರು ದಾಖಲೆ ಪರಿಶೀಲಿಸಿ ವಿಚಾರಣೆಗೆ ಕರೆದಾಗ ಬರುವಂತೆ ಹೇಳಿ ವಾಪಸ್ ಉಮೇಶ್ ಅವರನ್ನು ಕಳುಹಿಸಿಕೊಟ್ಟಿದ್ದಾರೆ.
ಚಿತ್ರದುರ್ಗ ಪೊಲೀಸರ ನೊಟೀಸ್ ನಲ್ಲೇನಿದೆ..?
ಇನ್ನು ಬಾಲಕೃಷ್ಣ ಎಂಬಾತ ಸೋನಾ ನಾಯ್ಕ್ ಎಂಬಾತನ ಮಾತು ಕೇಳಿ ಉಮೇಶ್ ರ ಅಕೌಂಟ್ ಗೆ 1 ಲಕ್ಷದ 47 ಸಾವಿರ ರೂಪಾಯಿ ಹಾಕಿದ್ದ. ಆದ್ರೆ, ಆಮೇಲೆ ಆಗಿದ್ದೇ ಬೇರೆ. ಮಂಜುನಾಥ್ ಮತ್ತು ಸೋನಾ ನಾಯ್ಕ್ ಇಬ್ಬರೂ ಸಹ ಕೈಗೆ ಸಿಕ್ಕಿಲ್ಲ. ಫೋನ್ ಮಾಡಿದರೆ ಸ್ವಿಚ್ ಆಫ್. ಬಾಲಕೃಷ್ಣ ಎಂಬುವವರಿಗೆ ಸೋನಾ ನಾಯ್ಕ್ ಸೈಟ್ ಇದೆ, ಇದಕ್ಕೆ ಮುಂಗಡ ಹಣ ಹಾಕಿ ಎಂದು ಹೇಳಿ ಹಣ ಪಡೆದಿದ್ದಾನೆ. ಹಣ ಕೈಗೆ ಸಿಕ್ಕ ಬಳಿಕ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗ ನಗರ ಪೊಲೀಸ್ (POLICE) ಠಾಣೆಯ ಸಹಾಯಕ ಉಪ ನಿರೀಕ್ಷಕರು ಕೆ. ಉಮೇಶ್ ಅವರಿಗೆ ಪೊಲೀಸ್ ನೊಟೀಸ್ ಕಳುಹಿಸಿದ್ದಾರೆ. ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ ನಿಮ್ಮ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ (POLICE) ಠಾಣೆಯಲ್ಲಿ ಡಿ ಪಿ ನಂ. 47/ 2023, ಸೆಕ್ಷನ್ ಅಡಿ ದೂರು ದಾಖಲಾಗಿದ್ದು, ಸದರಿ ದೂರು ಅರ್ಜಿಯ ವಿಚಾರಣೆಯ ಸಲುವಾಗಿ ನೀವುಗಳು ನೊಟೀಸ್ ತಲುಪಿದ ಕೂಡಲೇ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಯವರ ಮುಂದೆ ವಿಚಾರಣೆಗೆ ಸಹಕರಿಸಲು ಹಾಜರಾಗಲು ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.
ಠಾಣೆಗೆ ಹೋಗಿ ಬಂದ ಉಮೇಶ್:
ಈ ನೊಟೀಸ್ ಬರುತ್ತಿದ್ದಂತೆ ಕೆ. ಉಮೇಶ್ ಅವರು ಬಡಾವಣೆ ಪೊಲೀಸ್ (POLICE) ಠಾಣೆಗೆ ಹೋಗಿದ್ದಾರೆ. ಅಲ್ಲಿ ನಡೆದ ಘಟನೆ, ಎಟಿಎಂನಿಂದ ಹಣ ಬಿಡಿಸಿಕೊಂಡು ಬಂದಿದ್ದ ದಾಖಲೆ, ಫೋನ್ ಪೇ (PhonePe) ಮಾಡಿದ್ದ ಸ್ಕ್ರೀನ್ ಶಾಟ್ ನೀಡಿದ್ದಾರೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ನಾನು ಬಾಲಕೃಷ್ಣ ಎಂಬಾತನಿಗೆ ಕರೆಯೇ ಮಾಡಿಲ್ಲ, ಮೆಸೇಜ್ ಮಾಡಿಲ್ಲ. ಸೋನಾ ನಾಯ್ಕ್ ಹೇಳಿದ ಎಂದು ಅವರು ಅಮೌಂಟ್ ಹಾಕಿದ್ದಾರೆ ಎಂದು ಸವಿವರವಾಗಿ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಅಂಥದ್ದೇನೂ ಕೇಸ್ ಅಲ್ಲ ಇದು. ವಿಚಾರಣೆಗೆ ಕರೆದರೆ ಹೋಗಿ ಬನ್ನಿ ಎಂದು ಪೊಲೀಸರು ಹೇಳಿಕಳುಹಿಸಿದ್ದಾರೆ.
ಸಹಾಯ ಮಾಡುವ ಮುನ್ನ ಎಚ್ಚರ:
ಒಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಯೆಂಬ ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ಹೋಗಿ ಹಣವನ್ನೂ ಬಿಡಿಸಿಕೊಟ್ಟು ಮಾಡದ ತಪ್ಪಿಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವಂತಾಗಿದ್ದು ಮಾತ್ರ ವಿಪರ್ಯಾಸವೇ ಸರಿ. ಹಾಗಾಗಿ, ಹಣಕಾಸಿನ ವಿಚಾರ ಸೇರಿದಂತೆ ಬೇರೆಯವರಿಗೆ ಮೊಬೈಲ್ ಕೊಡುವಾಗ ಎಚ್ಚರ ವಹಿಸುವುದು ಒಳಿತು.
ನಿಮಗೆ ಪೋನ್ ಪೇ (PhonePe) ಮಾಡಿಸುತ್ತೇನೆ ಹಣ ಕೊಡಿ ಎಂದು ಪೋನ್ ಪೇ (PhonePe) ಮೂಲಕ ಹಣ ಹಾಕಿಸಿ ಪಡೆದು ಹೋದವನು ಒಬ್ಬ. ಇತ್ತ ನನಗೆ ಮೋಸ ಮಾಡಿದ್ದಾರೆ ಎಂದು ದೂರು ಕೊಟ್ಟವನೊಬ್ಬ.. ಸರ್ ಕಾಲೇಜು ಫೀಸ್ ಕಟ್ಟಬೇಕು ನಮ್ಮ ಅಣ್ಣಾ ಪೋನ್ ಪೇ(PhonePe) ಮಾಡುತ್ತಾರೆ ಹಣ ನೀಡಿ ಎಂದ. ಪೋನ್ ಪೇ (PhonePe) ಮುಖಾಂತರ ಹಣ ಬಂದಿದೆ ಎಂದು ಖಚಿತವಾದ ಮೇಲೆ ಎ ಟಿ ಎಂ ನಲ್ಲಿ ಆತನಿಗೆ ಹಣ ಬಿಡಿಸಿ ಕೊಟ್ಟರು. ಇದೀಗ ಒಬ್ಬ ವ್ಯಕ್ತಿ ನನಗೆ ಮೋಸ ಮಾಡಿದ್ದಾರೆ ಅಂತಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಕಷ್ಟದ ಸಮಯದಲ್ಲಿ ಎಟಿಎಂ ಗೆ ಹೋಗಿ ಹಣ ಬಿಡಿಸಿಕೊಟ್ಟ ಅಮಾಯಕ ಅಂಗಡಿ ಮಾಲೀಕನಿಗೆ ಪೊಲೀಸ್ ಇಲಾಖೆಯಿಂದ ವಿಚಾರಣೆಗೆ ಹಾಜರಾಗಲು ನೋಟಿಸ್ ಬಂದಿದೆ. ಅಪರಿಚಿತ ವ್ಯಕ್ತಿ ಗಳು ನಿಮ್ಮ ಬಳಿ ನಿಮಗೆ ಪೋನ್ಪೇ (PhonePe) ಮಾಡುತ್ತಾರೆ. ನಮಗೆ ಹಣ ನೀಡಿ ಎಂದರೆ ನೀಡದಿರುವಂತೆ ಸಾಮಾಜಿಕ ಕಾರ್ಯಕರ್ತ ಎಂ. ಜಿ. ಶ್ರೀಕಾಂತ್ ಮನವಿ ಮಾಡಿದ್ದಾರೆ.
Chitradurga Nagar Police Station Assistant Sub-Inspector K. Umesh has sent a police notice to him. You are hereby informed that against you in Chitradurga Nagar Police Station DP No. 47/ 2023, Sec A complaint has been filed and you are directed to appear before the investigating officer at Chitradurga Nagar Police Station as soon as you receive the notice for hearing the said complaint application. informed,
phonePe, phonePe problem
Comments 3