Home ಕ್ರೈಂ ನ್ಯೂಸ್ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಭೀಕರ ಆತ್ಮಹುತಿ ಬಾಂಬ್ ದಾಳಿ: 9 ಸಾವು, 18ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಭೀಕರ ಆತ್ಮಹುತಿ ಬಾಂಬ್ ದಾಳಿ: 9 ಸಾವು, 18ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

Share
ಪಾಕಿಸ್ತಾನ
Share

ಇಸ್ಲಾಮಾಬಾದ್: ಪಾಕಿಸ್ತಾನದ ವಾಯುವ್ಯ ಭಾಗದ ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದ ಸ್ವಾತ್ ಜಿಲ್ಲೆಯ ಕಬಾಲ್ ಪಟ್ಟಣದಲ್ಲಿ ಭೀಕರ ಆತ್ಮಹುತಿ ಬಾಂಬ್ ದಾಳಿ ನಡೆದಿದೆ. ಪೋಲಿಸ್ ಠಾಣೆಯ ಹೊರಭಾಗದಲ್ಲಿ ಶಾಂತಿ ರ‍್ಯಾಲಿ ನಡೆಯುತ್ತಿದ್ದ ವೇಳೆಯಲ್ಲೇ ಈ ಸ್ಫೋಟ ಸಂಭವಿಸಿದ್ದು, ಕನಿಷ್ಠ 7 ಜನರು ಸಾವನ್ನಪ್ಪಿದ್ದಾರೆ ಮತ್ತು 18ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಸ್ಥಳೀಯ ಶಾಂತಿ ರ‍್ಯಾಲಿ ಗುರಿಯಾಗಿಸಿ ದಾಳಿ:

ಸ್ಥಳೀಯ ಬುಡಕಟ್ಟು ಮಂಡಳಿಯಾದ ‘ಸ್ವಾತ್ ಅಮನ್ ಜಿರ್ಗಾ’ ಆಯೋಜಿಸಿದ್ದ ಶಾಂತಿ ರ‍್ಯಾಲಿ ಮುಕ್ತಾಯಗೊಳ್ಳುತ್ತಿದ್ದಂತೆ ಪೋಲಿಸ್ ಠಾಣೆಯ ಮುಖ್ಯ ಗೇಟ್ ಬಳಿ ದಾಳಿಕೋರ ತನ್ನಲ್ಲಿದ್ದ ಸ್ಫೋಟಕಗಳನ್ನು ಸ್ಫೋಟಿಸಿಕೊಂಡಿದ್ದಾನೆ. ಈ ಭಾಗದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಭದ್ರತಾ ಸವಾಲುಗಳ ವಿರುದ್ಧ ಸ್ಥಳೀಯ ಯುವಕರು ಮತ್ತು ಜನರು ಫಲಕಗಳನ್ನು ಹಿಡಿದು ಶಾಂತಿ ಮೆರವಣಿಗೆ ನಡೆಸುತ್ತಿದ್ದರು.

ಸ್ಥಳದಲ್ಲಿ ಹೆದರಿಕೆ ಮತ್ತು ರಕ್ಷಣಾ ಕಾರ್ಯಾಚರಣೆ:

ಸ್ಫೋಟದ ತೀವ್ರತೆಗೆ ಆ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಸಾರ್ವಜನಿಕರು ಭಯದಿಂದ ಓಡಲಾರಂಭಿಸಿದರು. ಸ್ಫೋಟದಿಂದಾಗಿ ಹಲವಾರು ವಾಹನಗಳು ಧ್ವಂಸಗೊಂಡಿವೆ. ಸ್ಥಳಕ್ಕಾಗಮಿಸಿದ ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.

ಸದ್ಯ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದು ತನಿಖೆ ಆರಂಭಿಸಿದ್ದು, ಇಲ್ಲಿಯವರೆಗೆ ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles