ಮೈಸೂರು: ಕುರ್ಕುರೆ ಪ್ಯಾಕೆಟ್ ಜೊತೆ ಉಚಿತವಾಗಿ ನೀಡಲಾಗಿದ್ದ ಪ್ಲಾಸ್ಟಿಕ್ ಆಟಿಕೆ ಬಾಲ್ ನುಂಗಿ 5 ವರ್ಷದ ಬಾಲಕನೊಬ್ಬ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಮುಕುಂದ್ ಮಯೂರ್ ಎಂದು ಗುರುತಿಸಲಾಗಿದೆ. ಈತ ತಂದೆ ಸಂತೋಷ್ ಹಾಗೂ ತಾಯಿ ಐಶ್ವರ್ಯ ದಂಪತಿಯ ಏಕೈಕ ಪುತ್ರನಾಗಿದ್ದ.
ಸಂಭವಿಸಿದ್ದು ಏನು?
ಕುರ್ಕುರೆ ಪ್ಯಾಕೆಟ್ ಒಳಗಿದ್ದ ಉಚಿತ ಪ್ಲಾಸ್ಟಿಕ್ ಬಾಲ್ ಜೊತೆ ಮಗು ಆಟವಾಡುತ್ತಿದ್ದಾಗ, ಆಕಸ್ಮಿಕವಾಗಿ ಅದನ್ನು ನುಂಗಿದ್ದಾನೆ. ಬಾಲ್ ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣವೇ ಕುಟುಂಬಸ್ಥರು ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರಾದರೂ, ಮಾರ್ಗಮಧ್ಯದಲ್ಲೇ ಮಗು ಕೊನೆಯುಸಿರೆಳೆದಿದೆ.
ಘಟನೆಯಿಂದ ಗೌರಿಪುರ ಗ್ರಾಮದಲ್ಲಿ ತೀವ್ರ ಶೋಕಾವೃತ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಪೊಲೀಸರು ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದು, ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.






Leave a comment