Home ದಾವಣಗೆರೆ ‘ಜೈ ಶ್ರೀ ರಾಮ್’ ಪ್ರೊಫೈಲ್.. ಅನುಮಾನ ಬಾರದಂತೆ ಕವರ್ ಅಪ್, STF ಬಲೆಗೆ ಬಿದ್ದ ಅರ್ಪಿತಾ ಸರ್ಕಾರ್: ಸ್ಫೋಟಕ ಸಂಗತಿ ಬಹಿರಂಗ
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

‘ಜೈ ಶ್ರೀ ರಾಮ್’ ಪ್ರೊಫೈಲ್.. ಅನುಮಾನ ಬಾರದಂತೆ ಕವರ್ ಅಪ್, STF ಬಲೆಗೆ ಬಿದ್ದ ಅರ್ಪಿತಾ ಸರ್ಕಾರ್: ಸ್ಫೋಟಕ ಸಂಗತಿ ಬಹಿರಂಗ

Share
STF
Share

ಕೋಲ್ಕತ್ತಾ / ಬರ್ಧಮಾನ್: ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಧಾರ್ಮಿಕ ಚೌಕಟ್ಟಿನ ಪ್ರೊಫೈಲ್ ಇಟ್ಟುಕೊಂಡು, ಹಿನ್ನೆಲೆಯಲ್ಲಿ ಪಾಕಿಸ್ತಾನ್ ಪ್ರೇರಿತ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಗಂಭೀರ ಆರೋಪದಡಿಯಲ್ಲಿ ಮಹಿಳೆಯೊಬ್ಬಳನ್ನು ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ (STF) ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ಬಂಧಿಸಿದೆ. ಬಂಧಿತ ಮಹಿಳೆಯನ್ನು ಅರ್ಪಿತಾ ಸರ್ಕಾರ್ ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಪಶ್ಚಿಮ ಬಂಗಾಳದ ಬುರ್ದ್ವಾನ್‌ನಲ್ಲಿ ಬಂಧನಕ್ಕೊಳಗಾಗಿದ್ದ ಜೈಶ್-ಎ-ಮೊಹಮ್ಮದ್ (JeM) ಶಂಕಿತ ಉಗ್ರ ಮೊಹಮ್ಮದ್ ಹಮೀಮ್ ಮೊಂಡಲ್‌ನ ನಿಕಟವರ್ತಿ ಹಾಗೂ ಗೆಳತಿ ಈ ಅರ್ಪಿತಾ ಸರ್ಕಾರ್. ಹಮೀಮ್ ಬಂಧನದ ಬಳಿಕ ಡಿಜಿಟಲ್ ಜಾಲ ಬೆನ್ನತ್ತಿದ ಎಸ್‌ಟಿಎಫ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅರ್ಪಿತಾಳನ್ನು ವಶಕ್ಕೆ ಪಡೆದಿದ್ದಾರೆ.

‘ಜೈ ಶ್ರೀ ರಾಮ್’ ಪ್ರೊಫೈಲ್.. ಅನುಮಾನ ಬಾರದಂತೆ ಕವರ್ ಅಪ್!

ಅರ್ಪಿತಾಳ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಬಯೋದಲ್ಲಿ (Bio) “ಜೈ ಶ್ರೀ ರಾಮ್” ಎಂದು ಬರೆಯಲಾಗಿದ್ದು, ಆಕೆಯ ಹೆಚ್ಚಿನ ಪೋಸ್ಟ್‌ಗಳು ಮತ್ತು ವೀಡಿಯೊಗಳು ಸಂಪೂರ್ಣವಾಗಿ ಧಾರ್ಮಿಕ ಹಾಗೂ ಪ್ರವಾಸದ ವಿಷಯಗಳ ಸುತ್ತವೇ ಕೇಂದ್ರೀಕೃತವಾಗಿದ್ದವು. ಸಾರ್ವಜನಿಕರಿಗಾಗಲಿ ಅಥವಾ ತನಿಖಾ ಸಂಸ್ಥೆಗಳಿಗಾಗಲಿ ತನ್ನ ಚಟುವಟಿಕೆಗಳ ಮೇಲೆ ಎಳ್ಳಷ್ಟೂ ಸಂಶಯ ಬಾರದಿರಲಿ ಎಂದೇ ಆಕೆ ಉದ್ದೇಶಪೂರ್ವಕವಾಗಿ ತನ್ನ ಪ್ರೊಫೈಲ್ ಅನ್ನು ಕವರ್ ಅಪ್ ಆಗಿ ಬಳಸಿದ್ದಳು ಎಂದು ಶಂಕಿಸಲಾಗಿದೆ.

ಹನಿ ಟ್ರಾಪ್ ಜಾಲದ ಬೆಚ್ಚಿಬೀಳಿಸುವ ತನಿಖೆ:

ತನಿಖೆಯ ವೇಳೆ ಅರ್ಪಿತಾ ಸರ್ಕಾರ್ ಪ್ರಮುಖ ರಾಜಕಾರಣಿಗಳು, ಜನಪ್ರತಿನಿಧಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ‘ಹನಿ ಟ್ರಾಪ್’ ನಡೆಸಲು ಯತ್ನಿಸುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಪಾಕಿಸ್ತಾನ್ ಮೂಲದ ಹ್ಯಾಂಡ್ಲರ್‌ಗಳ ಸೂಚನೆಯಂತೆ ಈಕೆಯು ಪ್ರಭಾವಿಗಳ ಮಾಹಿತಿ ಸಂಗ್ರಹಿಸುವ ಜಾಲದಲ್ಲಿ ಭಾಗಿಯಾಗಿದ್ದಳು ಎನ್ನಲಾಗಿದೆ. ಸದ್ಯ ಎಸ್‌ಟಿಎಫ್ ಅಧಿಕಾರಿಗಳು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದು, ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles