SUDDIKSHANA KANNADA NEWS/ DAVANAGERE/ DATE:17-11-2024
ದಾವಣಗೆರೆ: ಕಳಪೆ ಗುಣಮಟ್ಟದ ಟಾರ್ಪಲ್ ಮಾರಾಟ ಮಾಡಿದ್ದ ಸಂಸ್ಥೆ ಹಾಗೂ ಮಾರಾಟಗಾರರಿಗೆ ರೈತನಿಗೆ ಬಿಲ್ ಮೊತ್ತಕ್ಕೆ ಬಡ್ಡಿ ಸೇರಿಸಿ ನೀಡುವಂತೆ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮದ ರೈತ ನಟರಾಜ್ ಮುಂಬೈ ಮೂಲದ ಸಂಸ್ಥೆಯ ತಯಾರಿಕಾ ಟಾರ್ಪಲ್ನ್ನು ದಾವಣಗೆರೆ ಮಾರಾಟಗಾರರಿಂದ 2023 ರ ಮೇ 26 ರಂದು ರೂ. 1,00,027 ಮೌಲ್ಯದ ಟಾರ್ಪಲ್ ಖರೀದಿಸಿದ್ದರು.
ರೈತರಾದ ನಟರಾಜ್ ತಮ್ಮ ಜಮೀನಿನಲ್ಲಿ ನಿರ್ಮಿಸಿದ ಕೃಷಿ ಹೊಂಡದಲ್ಲಿ ನೀರನ್ನು ಸಂಗ್ರಹಿಸಲು ಟಾರ್ಪಲ್ ಖರೀದಿಸಿದ್ದು ತದನಂತರ ಕೃಷಿ ಹೊಂಡದಲ್ಲಿ ಸಂಗ್ರಹಿಸಿದ ನೀರು ಟಾರ್ಪಲಿನ ಕಳಪೆ ಗುಣ ಮಟ್ಟದಿಂದ ಸೋರಿ ಹೋಗುತ್ತಿರುವುದರಿಂದ ನವಂಬರ್ 12 ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಮುಂಬೈ ಮೂಲದ ಹಿಪೋ ಟೆಕ್ ಟೆಕ್ಸ್ಮಕೋ ಹೌಸ್ ಮೂಲದ ತಯಾರಿಕಾ ಸಂಸ್ಥೆ ವಿರುದ್ದ ರೂ.20,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊತ್ತ ರೂ.5,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದ್ದರು.
.
ರೈತರಿಗೆ ಹಣಕಾಸಿನ ಮತ್ತು ಮಾನಸಿಕ ತೊಂದರೆಯನ್ನು ಉಂಟು ಮಾಡಿದ್ದರಿಂದ ಸ್ಥಾನಿಕ ಮಾರಾಟಗಾರರು ಮತ್ತು ತಯಾರಕರು ಜಂಟಿಯಾಗಿ. ಟಾರ್ಪಲ್ ಮೊತ್ತ ರೂ.1,00,027/-ಗಳಿಗೆ ಶೇ 18%ರ ಬಡ್ಡಿಯೊಂದಿಗೆ ಖರೀದಿಸಿದ ದಿನಾಂಕದಿಂದ 3 ತಿಂಗಳ ಒಳಗಾಗಿ ಪಾವತಿಸಲು ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಬಿ.ಯು. ಗೀತಾ ಅವರು ಸಂಸ್ಥೆಗೆ ಆದೇಶಿಸಿದ್ದಾರೆ.