Home ದಾವಣಗೆರೆ ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ 2ನೇ ಮದುವೆಗೆ ಧರ್ಮಗುರುಗಳ ವಿರೋಧ: ಇಸ್ಲಾಮಿಕ್ ತತ್ವಗಳ ಉಲ್ಲಂಘನೆ ಎಂದ ಮೌಲಾನಾ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ 2ನೇ ಮದುವೆಗೆ ಧರ್ಮಗುರುಗಳ ವಿರೋಧ: ಇಸ್ಲಾಮಿಕ್ ತತ್ವಗಳ ಉಲ್ಲಂಘನೆ ಎಂದ ಮೌಲಾನಾ!

Share
ಒಮರ್ ಅಬ್ದುಲ್ಲಾ
Share

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಹಿರಿಯ ಪತ್ರಕರ್ತೆ ನಿಧಿ ರಜ್‌ದಾನ್‌ ಜೊತೆ ತಮ್ಮ ವಿವಾಹವನ್ನು ಘೋಷಿಸಿದ ಎರಡು ದಿನಗಳ ಬಳಿಕ ಧರ್ಮಗುರುಗಳಿಂದ ವಿವಾದ ಭುಗಿಲೆದ್ದಿದೆ. ಆಲ್ ಇಂಡಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೆಲ್ವಿ ಅವರು, ಇವರ ವಿವಾಹವು ಇಸ್ಲಾಮಿಕ್ ತತ್ವಗಳು ಮತ್ತು ಶರಿಯತ್ ಪ್ರಕಾರ ಕಾನೂನುಬಾಹಿರ (‘ನಜಾಯ್‌ಜ್’) ಎಂದು ಘೋಷಿಸಿದ್ದಾರೆ.

ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಹಾಗೂ ನಿಧಿ ರಜ್‌ದಾನ್‌ ವಿವಾಹದ ಕುರಿತು ಪ್ರತಿಕ್ರಿಯಿಸಿರುವ ಮೌಲಾನಾ ಮುಫ್ತಿ ಶಹಾಬುದ್ದೀನ್, ಇಸ್ಲಾಮಿಕ್ ತತ್ವಗಳ ಪ್ರಕಾರ ಮದುವೆಯಾಗುವ ದಂಪತಿಗಳು ಇಬ್ಬರೂ ಮುಸ್ಲಿಮರಾಗಿರಬೇಕು ಎಂಬ ನಿಯಮವಿದೆ ಎಂದಿದ್ದಾರೆ. ಒಮರ್ ಅಬ್ದುಲ್ಲಾ ಅವರು ಮುಸ್ಲಿಂ ಆಗಿದ್ದರೂ, ನಿಧಿ ರಜ್‌ದಾನ್‌ ಮುಸ್ಲಿಮರಲ್ಲ, ಹೀಗಾಗಿ ಇವರ ವಿವಾಹವು ಶರಿಯತ್ ಪ್ರಕಾರ ಮಾನ್ಯತೆ ಪಡೆಯುವುದಿಲ್ಲ ಎಂದು ಅವರು ವಾದಿಸಿದ್ದಾರೆ. ಮದುವೆಗೂ ಮುನ್ನ ನಿಧಿ ರಜ್‌ದಾನ್‌ ಅವರು ಇಸ್ತಾಮ್ ಧರ್ಮಕ್ಕೆ ಮತಾಂತರಗೊಂಡು, ಇಸ್ಲಾಮಿಕ್ ಸಂಪ್ರದಾಯದಂತೆ ನಿಕಾಹ್ ಆಗಿದ್ದರೆ ಮಾತ್ರ ಈ ವಿವಾಹವು ಶರಿಯತ್ ಪ್ರಕಾರ ಸಮ್ಮತವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಶರಿಯತ್ ಪ್ರಕಾರ ಮದುವೆ ಅಕ್ರಮ: ಒಮರ್ ಅಬ್ದುಲ್ಲಾ ಮತ್ತು ನಿಧಿ ರಜ್‌ದಾನ್‌ ವಿವಾಹವು ಇಸ್ಲಾಮಿಕ್ ನಿಯಮಗಳ ಉಲ್ಲಂಘನೆಯಾಗಿದ್ದು, ಶರಿಯತ್ ಪ್ರಕಾರ ಇದು ಕಾನೂನುಬಾಹಿರ ಎಂದು ಜಮಾತ್ ಮುಖ್ಯಸ್ಥ ಮೌಲಾನಾ ಮುಫ್ತಿ ಶಹಾಬುದ್ದೀನ್ ಘೋಷಣೆ.

ಧರ್ಮದ ನಿಯಮಗಳ ಉಲ್ಲೇಖ: ಇಸ್ಲಾಂ ಧರ್ಮದ ಪ್ರಕಾರ ವಿವಾಹವಾಗುವ ದಂಪತಿಗಳಿಬ್ಬರೂ ಕಡ್ಡಾಯವಾಗಿ ಮುಸ್ಲಿಮ(ಳಾಗಿ)ರಬೇಕು, ಆದರೆ ಇಲ್ಲಿ ಆ ಕಂಡೀಷನ್ ಪಾಲನೆಯಾಗಿಲ್ಲ ಎಂದು ಸ್ಪಷ್ಟನೆ.

ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಕಾನೂನು ಸಿಂಧುತ್ವ: ಧರ್ಮಗುರುಗಳ ಈ ಹೇಳಿಕೆಯು ಧರ್ಮ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದರೂ, ಭಾರತದಲ್ಲಿ ವಿವಾಹಗಳ ಕಾನೂನುಬದ್ಧತೆಯು ದೇಶದ ಸಂವಿಧಾನ ಮತ್ತು ಅನ್ವಯವಾಗುವ ನಾಗರಿಕ ಕಾನೂನುಗಳ ಮೇಲೆಯೇ ನಿರ್ಧಾರವಾಗುತ್ತದೆ.

ಧರ್ಮಗುರುಗಳ ಈ ಹೇಳಿಕೆಯು ಸಾರ್ವಜನಿಕ ವಲಯದಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವೈಯಕ್ತಿಕ ನಿರ್ಧಾರಗಳ ಮೇಲೆ ಧರ್ಮದ ಪ್ರಭಾವದ ಕುರಿತಾದ ಚರ್ಚೆಗಳನ್ನು ಮುನ್ನೆಲೆಗೆ ತಂದಿದೆ.

Share

Leave a comment

Leave a Reply

Your email address will not be published. Required fields are marked *

Related Articles