Home ದಾವಣಗೆರೆ ಕೋರ್ಟ್ ಆದೇಶ ಲಘುವಾಗಿ ಪರಿಗಣಿಸಬೇಡಿ: 200 ಕೋಟಿ ರೂ. ಸುಲಿಗೆ ಪ್ರಕರಣದ ಆರೋಪಿ ನಟಿ ನೋರಾ ಫತೇಹಿಗೆ ಸಮನ್ಸ್ ನೀಡಿ ನ್ಯಾಯಾಲಯ ಎಚ್ಚರಿಕೆ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಕೋರ್ಟ್ ಆದೇಶ ಲಘುವಾಗಿ ಪರಿಗಣಿಸಬೇಡಿ: 200 ಕೋಟಿ ರೂ. ಸುಲಿಗೆ ಪ್ರಕರಣದ ಆರೋಪಿ ನಟಿ ನೋರಾ ಫತೇಹಿಗೆ ಸಮನ್ಸ್ ನೀಡಿ ನ್ಯಾಯಾಲಯ ಎಚ್ಚರಿಕೆ!

Share
ನೋರಾ ಫತೇಹಿ
Share

ನವದೆಹಲಿ: ಕುಖ್ಯಾತ ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗಿನ 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ ಅವರಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಹೊಸ ಸಮನ್ಸ್ ಜಾರಿ ಮಾಡಿದೆ.

ಸಾಕ್ಷ್ಯ ನುಡಿಯಲು ನವೆಂಬರ್ 6 ರಂದು ಕಡ್ಡಾಯವಾಗಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ. ವಿಚಾರಣೆಗೆ ಹಾಜರಾಗದ ನಟಿಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯವು, “ನ್ಯಾಯಾಲಯವನ್ನು ಹಗುರವಾಗಿ ಅಥವಾ ಲಘುವಾಗಿ ಪರಿಗಣಿಸಬೇಡಿ” ಎಂದು ಎಚ್ಚರಿಕೆ ನೀಡಿದೆ.

ದೆಹಲಿ ಪೊಲೀಸ್ ವಿಶೇಷ ಕೋಶದ ತನಿಖೆ ನಡೆಸುತ್ತಿರುವ ಈ ಪ್ರಕರಣದಲ್ಲಿ, ಸಾಕ್ಷಿಯಾಗಿರುವ ನೋರಾ ಫತೇಹಿ ಪರ ವಕೀಲರು ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಸಾಕ್ಷಿಯಾಗಿರುವವರು ಖುದ್ದಾಗಿ ಹಾಜರಾಗಬೇಕು ಎಂದು ತಿಳಿಸಿದ್ದು, ಅವರ ವರ್ತನೆ ಸರಿಯಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.

ಕೋರ್ಟ್ ತೀವ್ರ ತರಾಟೆ: ವಿಚಾರಣೆಗೆ ಹಾಜರಾಗದ ನಟಿ ನೋರಾ ಫತೇಹಿ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಾಲಯ, ಕೋರ್ಟ್ ಆದೇಶವನ್ನು ಕಡೆಗಣಿಸದಂತೆ ಕಡಕ್ ಎಚ್ಚರಿಕೆ ನೀಡಿದೆ.

ನವೆಂಬರ್ 6 ರಂದು ಹಾಜರಾಗಲು ಸೂಚನೆ: ಪ್ರಕರಣದ ವಿಚಾರಣೆಗೆ ಸಾಕ್ಷಿ ನುಡಿಯಲು ನವೆಂಬರ್ 6 ರಂದು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ಹೊಸ ಸಮನ್ಸ್ ಜಾರಿ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ: ರೋಹಿಣಿ ಜೈಲಿನಲ್ಲಿದ್ದ ಸುಕೇಶ್ ಚಂದ್ರಶೇಖರ್, ಫೋರ್ಟಿಸ್ ಹೆಲ್ತ್‌ಕೇರ್ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಗೆ ಸರ್ಕಾರಿ ಅಧಿಕಾರಿಗಳಂತೆ ಸೋಗುಹಾಕಿ ಜಾಮೀನು ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಸುಲಿಗೆ ಮಾಡಿದ್ದ ಪ್ರಕರಣ ಇದಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles