Home ದಾವಣಗೆರೆ ಸಂಗಾತಿ ಹುಡುಕಾಟದಲ್ಲಿರುವವರಿಗೆ ವರದಾನವಾದ ದೇವಸ್ಥಾನದ ಉಚಿತ ಮದುವೆ ವೇದಿಕೆ: ಮುಗಿಬಿದ್ದ 7,000ಕ್ಕೂ ಹೆಚ್ಚು ಜನ!
ದಾವಣಗೆರೆದಿನ ಭವಿಷ್ಯನವದೆಹಲಿಬೆಂಗಳೂರು

ಸಂಗಾತಿ ಹುಡುಕಾಟದಲ್ಲಿರುವವರಿಗೆ ವರದಾನವಾದ ದೇವಸ್ಥಾನದ ಉಚಿತ ಮದುವೆ ವೇದಿಕೆ: ಮುಗಿಬಿದ್ದ 7,000ಕ್ಕೂ ಹೆಚ್ಚು ಜನ!

Share
ಮದುವೆ
Share

ಕೋಝಿಕ್ಕೋಡ್: ಕೇರಳದ ಕೋಝಿಕ್ಕೋಡ್ ಸಮೀಪದ ಕರಂತೂರು ಗ್ರಾಮದ ಹರಹರ ಮಹಾದೇವ ದೇವಸ್ಥಾನದಲ್ಲಿ ನವೆಂಬರ್ 1 ರಂದು ಹಮ್ಮಿಕೊಳ್ಳಲಾಗಿದ್ದ ಉಚಿತ ಮದುವೆ ನೋಂದಣಿ ಶಿಬಿರಕ್ಕೆ ನಿರೀಕ್ಷೆಗೂ ಮೀರಿ ಬೃಹತ್ ಜನಸಾಗರ ಹರಿದುಬಂದಿದೆ.

ಜೀವನ ಸಂಗಾತಿಯನ್ನು ಹುಡುಕಿಕೊಂಡು ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 7,000 ಕ್ಕೂ ಹೆಚ್ಚು ಮಂದಿ ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ದೇವಸ್ಥಾನದ ಆವರಣದಿಂದ ಹೊರಬಂದ ಜನರ ಸರತಿ ಸಾಲು ರಾಷ್ಟ್ರೀಯ ಹೆದ್ದಾರಿಯ ಎರಡು ಬಸ್ ನಿಲ್ದಾಣಗಳವರೆಗೆ ವಿಸ್ತರಿಸಿದ್ದರಿಂದ, ಸಾರ್ವಜನಿಕರಿಗೆ ಮತ್ತು ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಸಮಾಜಸೇವಾ ಚಟುವಟಿಕೆಗಳ ಭಾಗವಾಗಿ ದೇವಸ್ಥಾನದ ಸಮಿತಿಯು ಈ ವಧೂವರರ ನೋಂದಣಿ ಶಿಬಿರವನ್ನು ಆಯೋಜಿಸಿತ್ತು. ಆರಂಭದಲ್ಲಿ 1,500 ರಿಂದ 2,000 ಜನರು ಬರಬಹುದು ಎಂದು ಅಂದಾಜಿಸಿ 1,500 ಅರ್ಜಿ ನಮೂನೆಗಳನ್ನು ಮುದ್ರಿಸಲಾಗಿತ್ತು. ಆದರೆ ಕೇವಲ ಕೆಲವೇ ಗಂಟೆಗಳಲ್ಲಿ ಅರ್ಜಿಗಳು ಖಾಲಿಯಾದ ಕಾರಣ, ತಕ್ಷಣವೇ ಜೆರಾಕ್ಸ್ ಪ್ರತಿಗಳನ್ನು ಮಾಡಿ ನಂತರ ಪ್ರೆಸ್‌ನಿಂದ ಹೆಚ್ಚುವರಿಯಾಗಿ 4,000 ಪ್ರತಿಗಳನ್ನು ಮುದ್ರಿಸಬೇಕಾಯಿತು. ಬೆಳಿಗ್ಗೆ 7 ಗಂಟೆಯಿಂದಲೇ ಜನ ಸೇರಿದ್ದರಿಂದ ನಾಲ್ಕು ಗಂಟೆಗಳ ಕಾಲ ನಿಗದಿಯಾಗಿದ್ದ ಕಾರ್ಯಕ್ರಮವು ಸಂಜೆಯವರೆಗೆ ಮುಂದುವರಿಯಿತು.

ಅಪಾರ ಜನಸಂದಣಿ: ಕಣ್ಣೂರು, ವಯನಾಡು ಮತ್ತು ಪಾಲಕ್ಕಾಡ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ್ದರು. ನೋಂದಾಯಿಸಿದವರಲ್ಲಿ ಶೇ. 80ರಷ್ಟು ಮಂದಿ ಪುರುಷರಾಗಿದ್ದು, ಇವರಲ್ಲಿ 30, 40 ಹಾಗೂ 50 ವರ್ಷ ವಯಸ್ಸಿನವರೂ ಅಧಿಕ ಸಂಖ್ಯೆಯಲ್ಲಿದ್ದರು.

ಸಾಮಾಜಿಕ ಕಳಕಳಿ: ಮದುವೆ ವೆಚ್ಚ ಭರಿಸಲು ಪರದಾಡುವ ಬಡ ಕುಟುಂಬಗಳಿಗೆ ಮತ್ತು ಸೂಕ್ತ ಸಂಗಾತಿ ಸಿಗದೆ ವಿಳಂಬವಾಗುತ್ತಿರುವವರಿಗೆ ಉಚಿತ ವೇದಿಕೆ ಕಲ್ಪಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿತ್ತು.

ಮುಂದಿನ ಯೋಜನೆ: ನವೆಂಬರ್ 22 ರ ನಂತರ ಪ್ರತಿ ಭಾನುವಾರ ಬೆಳಿಗ್ಗೆ 7 ರಿಂದ 10 ರವರೆಗೆ ಈ ಉಪಕ್ರಮ ಮುಂದುವರಿಯಲಿದ್ದು, ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಂಗಡಿಸಿ ಸೂಕ್ತ ಜೋಡಿಗಳನ್ನು ಗುರುತಿಸಲು 10 ರಿಂದ 20 ದಿನಗಳು ಬೇಕಾಗಲಿವೆ.

Share

Leave a comment

Leave a Reply

Your email address will not be published. Required fields are marked *

Related Articles