Home ಕ್ರೈಂ ನ್ಯೂಸ್ ನ್ಯಾಮತಿ ಎಸ್‌ಬಿಐ ಬ್ಯಾಂಕ್‌ಗೆ ಬೀಗ ಜಡಿದು ಗ್ರಾಹಕರ ಬೃಹತ್ ಪ್ರತಿಭಟನೆ: ಕಳುವಾಗಿದ್ದ ಚಿನ್ನದ ಮರುಪಾವತಿಗೆ ಆಗ್ರಹ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ನ್ಯಾಮತಿ ಎಸ್‌ಬಿಐ ಬ್ಯಾಂಕ್‌ಗೆ ಬೀಗ ಜಡಿದು ಗ್ರಾಹಕರ ಬೃಹತ್ ಪ್ರತಿಭಟನೆ: ಕಳುವಾಗಿದ್ದ ಚಿನ್ನದ ಮರುಪಾವತಿಗೆ ಆಗ್ರಹ

Share
ನ್ಯಾಮತಿ
Share

ನ್ಯಾಮತಿ: ಇಲ್ಲಿನ ನೆಹರು ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಶಾಖೆಯಲ್ಲಿ ಅಡವಿಟ್ಟಿದ್ದ ತಂಗದ ಒಡವೆಗಳು ಕಳುವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬ್ಯಾಂಕ್ ವ್ಯವಸ್ಥಾಪಕರ ನಿರ್ಲಕ್ಷ್ಯದ ಧೋರಣೆಯನ್ನು ಖಂಡಿಸಿ ಆಕ್ರೋಶಗೊಂಡ ಗ್ರಾಹಕರು ಸೋಮವಾರ ಬ್ಯಾಂಕ್‌ಗೆ ಬೀಗ ಜಡಿದು ಒಳಗಡೆ ಮಹಾತ್ಮ ಗಾಂಧಿ ಭಾವಚಿತ್ರದೊಂದಿಗೆ ಕುಳಿತು ಬೃಹತ್ ಪ್ರತಿಭಟನೆ ನಡೆಸಿದರು.

ಹಿನ್ನೆಲೆ: ಕಳೆದ 2024ರ ಅಕ್ಟೋಬರ್‌ನಲ್ಲಿ ಖದೀಮರು ಈ ಬ್ಯಾಂಕ್‌ಗೆ ನುಗ್ಗಿ ಸುಮಾರು 13 ಕೋಟಿ ರೂ. ಮೌಲ್ಯದ 17 ಕಿಲೋಗ್ರಾಂ ಚಿನ್ನಾಭರಣಗಳನ್ನು ಕಳುವು ಮಾಡಿದ್ದರು. ಜಿಲ್ಲಾ ಪೊಲೀಸರು ಯಶಸ್ವಿ ತನಿಖೆ ನಡೆಸಿ ಆರು ಜನ ಆರೋಪಿಗಳನ್ನು ಬಂಧಿಸಿ, ಜಪ್ತಿ ಮಾಡಿದ 17 ಕೆಜಿ ಚಿನ್ನವನ್ನು ಎಸ್‌ಬಿಐ ಬ್ಯಾಂಕ್‌ಗೆ ಹಸ್ತಾಂತರಿಸಿದ್ದರು. ಕಳೆದ 2025ರ ಅಕ್ಟೋಬರ್ 17 ರಂದು ಶಾಸಕ ಡಿ.ಜಿ.ಶಾಂತನಗೌಡರ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ, ಗ್ರಾಹಕರು ಅಡವಿಟ್ಟಿರುವ ಚಿನ್ನಾಭರಣದ ಮೇಲೆ ಕೇವಲ ಅಸಲು ಮಾತ್ರ ಪಾವತಿಸಿಕೊಂಡು, ಒಡವೆಗಳನ್ನು ಹಿಂತಿರುಗಿಸುವಂತೆ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿತ್ತು.

ಗ್ರಾಹಕರ ಆರೋಪ: ಒಟ್ಟು 509 ಗ್ರಾಹಕರಲ್ಲಿ ಕೇವಲ ಕೆಲವೇ ಕೆಲವು ಜನರಿಗೆ ಮಾತ್ರ ಚಿನ್ನ ನೀಡಲಾಗಿದೆ. ಸಭೆಯ ತೀರ್ಮಾನಕ್ಕೆ ವಿರುದ್ಧವಾಗಿ ಸಾಲದ ಹಣದ ಜೊತೆಗೆ ಬಡ್ಡಿ, ಚಕ್ರಬಡ್ಡಿ ಹಾಗೂ ಇತರೆ ಖರ್ಚುಗಳನ್ನು ಸೇರಿಸಿ ಮರುಪಾವತಿ ಮಾಡಿಸಿಕೊಳ್ಳಲಾಗುತ್ತಿದೆ. ಅಲ್ಲದೆ ಸಿಬಿಲ್ (CIBIL) ಸ್ಕೋರ್ ಕಡಿಮೆಯಾಗಿ ಬೇರೆ ಕಡೆಯೂ ಸಾಲ ದೊರೆಯದೆ ಗ್ರಾಹಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆಲ್ಲಾ ಬ್ಯಾಂಕ್ ವ್ಯವಸ್ಥಾಪಕ ಸುನೀಲ್ ಯಾದವ್ ಅವರ ನಿರ್ಲಕ್ಷ್ಯವೇ ನೇರ ಹೊಣೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿ, ಬ್ಯಾಂಕ್ ಒಳಗಡೆಯೇ ಉಪಹಾರ ಸೇವಿಸಿ ಸಂಜೆಯವರೆಗೂ ಪ್ರತಿಭಟನೆ ಮುಂದುವರಿಸಿದರು.

ಬ್ಯಾಂಕ್ ವ್ಯವಸ್ಥಾಪಕರ ಸ್ಪಷ್ಟನೆ: “200 ಗ್ರಾಹಕರ ಆಭರಣಗಳು ಹೊಂದಾಣಿಕೆಯಾಗದ ಕಾರಣ ವಿತರಣೆಯಲ್ಲಿ ವಿಳಂಬವಾಗಿದೆ. ಸದ್ಯ ಬ್ಯಾಂಕ್‌ನ ಲೆಕ್ಕ ಪರಿಶೋಧನೆ (Audit) ನಡೆಯುತ್ತಿದ್ದು, ಇದು ಮುಗಿದ ಬಳಿಕ ಜೂನ್ 24 ರ ನಂತರ ಗ್ರಾಹಕರಿಗೆ ಒಡವೆಗಳನ್ನು ವಿತರಿಸಲಾಗುವುದು.” — ಸುನೀಲ್ ಯಾದವ್, ಬ್ಯಾಂಕ್ ವ್ಯವಸ್ಥಾಪಕ.

ಪ್ರತಿಭಟನಾಕಾರರು: ಹಾಲೇಶಪ್ಪ ಕೆ.ಆರ್.ಗಂಜೀನಹಳ್ಳಿ, ಮಂಜಪ್ಪ ಮಾಸ್ಟರ್ ಯರಗನಾಳ್, ಸುರೇಶ್ ಯರಗನಾಳ್, ಶಶಿಧರ್ ದಾನಿಹಳ್ಳಿ, ರವಿಕುಮಾರ್ ಪಿ.ಕೆ.ಚಟ್ನಹಳ್ಳಿ, ಸಿದ್ದನಗೌಡ ಯರಗನಾಳ್, ಕವಿತಾ ನ್ಯಾಮತಿ ಸೇರಿದಂತೆ ನೂರಾರು ಗ್ರಾಹಕರು ಭಾಗವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles