Home ದಾವಣಗೆರೆ ಮಗನ ಕಳೆದುಕೊಂಡ ದುಃಖದಲ್ಲೂ ಸೊಸೆಗೆ ಮರುಮದುವೆ ಮಾಡಿಸಿ ಮಾದರಿಯಾದ ಮಾವ!
ದಾವಣಗೆರೆನವದೆಹಲಿಬೆಂಗಳೂರು

ಮಗನ ಕಳೆದುಕೊಂಡ ದುಃಖದಲ್ಲೂ ಸೊಸೆಗೆ ಮರುಮದುವೆ ಮಾಡಿಸಿ ಮಾದರಿಯಾದ ಮಾವ!

Share
ಮಾವ
Share

ಉಜ್ಜಯಿನಿ (ಮಧ್ಯಪ್ರದೇಶ): ಕೆಲವು ಸಂಬಂಧಗಳು ರಕ್ತದ ಬಂಧಕ್ಕಿಂತಲೂ ಮಿಗಿಲಾಗಿರುತ್ತವೆ ಎಂಬುದಕ್ಕೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ರೈತ ದಿನೇಶ್ ಬೈರಾಗಿ ಅವರ ಕುಟುಂಬವು ಜೀವಂತ ಉದಾಹರಣೆಯಾಗಿದೆ. ಕ್ಯಾನ್ಸರ್ ಕಾಯಿಲೆಯಿಂದ ತಮ್ಮ ಯುವ ಮಗ ಕಪಿಲ್‌ನನ್ನು ಕಳೆದುಕೊಂಡ ತೀವ್ರ ದುಃಖದಲ್ಲಿದ್ದರೂ, ದಿನೇಶ್ ಮತ್ತು ಅವರ ಪತ್ನಿ ಸೊಸೆ ಪ್ರಿಯಾಂಕಾಳ ಭವಿಷ್ಯ ಕತ್ತಲಾಗಬಾರದು ಎಂದು ನಿರ್ಧರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಮಗನನ್ನು ಕಳೆದುಕೊಂಡ ನೋವನ್ನು ನುಂಗಿಕೊಂಡು, ವಿದಿಶಾದ ಗೋವಿಂದ್ ಬೈರಾಗಿ ಅವರೊಂದಿಗೆ ಸೊಸೆ ಪ್ರಿಯಾಂಕಾಳ ಮದುರೆಯನ್ನು ನಿಶ್ಚಯಿಸಿ, ತಾವೇ ಮುಂದೆ ನಿಂತು ಮದುವೆಯ ಸಂಪೂರ್ಣ ಖರ್ಚು ವಹಿಸಿಕೊಂಡು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಈ ಮದುವೆಯ ಅತ್ಯಂತ ಹೃದಯಸ್ಪರ್ಶಿ ಕ್ಷಣವೆಂದರೆ, ತಮ್ಮ ಸ್ವಂತ ಮಗಳಂತೆ ಪ್ರೀತಿಸಿದ ಪ್ರಿಯಾಂಕಾಳಿಗೆ ಮಾವ ದಿನೇಶ್ ಹಾಗೂ ಅವರ ಕುಟುಂಬವೇ ಖುದ್ದಾಗಿ ಕನ್ಯಾದಾನ ಮಾಡಿ ಆಶೀರ್ವದಿಸಿದೆ. “ಸಮಾಜ ಏನು ಹೇಳುತ್ತದೆ ಎಂಬುದಕ್ಕಿಂತ ಸೊಸೆಯ ಬದುಕು ಚೆನ್ನಾಗಿರಬೇಕು” ಎಂದುಕೊಂಡು ಈ ಧೈರ್ಯದ ಹೆಜ್ಜೆ ಇಟ್ಟಿರುವ ಈ ಹೃದಯವಂತ ಮಾವ-ಮನೆತನಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮಗನ ಅಗಲಿಕೆಯ ನೋವು: ಕ್ಯಾನ್ಸರ್‌ನಿಂದ ಕಪಿಲ್ ಎಂಬ ಮಗನನ್ನು ಕಳೆದುಕೊಂಡ ಕುಟುಂಬದ ಆಳವಾದ ಶೋಕ ಹಾಗೂ ಕಷ್ಟದ ಪರಿಸ್ಥಿತಿ.

ಸೊಸೆಗೆ ಮರುಮದುವೆ ಭಾಗ್ಯ: ವಿಧವೆಯಾದ ಸೊಸೆ ಪ್ರಿಯಾಂಕಾಳ ಭವಿಷ್ಯವನ್ನು ಉಜ್ವಲಗೊಳಿಸಲು ಸ್ವತಃ ಮಾವನೇ ಮುಂದೆ ನಿಂತು ಮದುವೆ ಮಾಡಿಸಿದ್ದು.

ಸ್ವಂತ ಮಗಳಂತೆ ಕನ್ಯಾದಾನ: ವಿದಿಶಾದ ಯುವಕನೊಂದಿಗೆ ಮದುವೆ ನಿಶ್ಚಯಿಸಿ, ತಮ್ಮ ಕೈಯಾರೆ ಕನ್ಯಾದಾನ ನೆರವೇರಿಸಿ ಸಮಾಜಕ್ಕೆ ಮಾದರಿಯಾದ ಮಾವ ದಿನೇಶ್ ಬೈರಾಗಿ.

ಸಮಾಜಕ್ಕೆ ಸಂದೇಶ: ಮೌಢ್ಯತೆ ಮತ್ತು ಸಂಪ್ರದಾಯಗಳ ಕಟ್ಟುಪಾಡುಗಳನ್ನು ಮೀರಿ, ಹೆಣ್ಣಿನ ಮರುಮದುವೆಗೆ ಬೆಂಬಲ ನೀಡಬೇಕೆಂಬ ಸಂದೇಶ ಸಾರಿದ ಹೃದಯಸ್ಪರ್ಶಿ ಘಟನೆ.

ರಕ್ತದ ಸಂಬಂಧವಿಲ್ಲದಿದ್ದರೂ ಪ್ರೀತಿ, ಕಾಳಜಿ ಮತ್ತು ಜವಾಬ್ದಾರಿಯಿಂದ ಹೊಸ ಬದುಕು ಕಟ್ಟಿಕೊಟ್ಟ ಈ ಮಾವನ ಮಾನವೀಯತೆ ಎಲ್ಲರ ಕಣ್ಣಲ್ಲಿ ನೀರು ತರಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles