ನ್ಯಾಮತಿ: ನ್ಯಾಮತಿ ತಾಲೂಕಿನ ಚೀಲೂರು ಬೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಜೂನ್ 16ರ ಮಂಗಳವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆಯ ವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಚೀಲೂರು ಬೆಸ್ಕಾಂ ಕೇಂದ್ರದಲ್ಲಿ ಹೆಚ್ಚುವರಿ 11 ಕೆವಿ ಬ್ರೇಕರ್‌ಗಳ ಅಳವಡಿಕೆ ಹಾಗೂ ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ 11 ಕೆವಿ ಎಫ್-04 ಕುರುವಾ ಎನ್‌ಜೆವೈ ಮಾರ್ಗದ ಲೈನ್ ಕ್ಲಿಯರೆನ್ಸ್ ಅಗತ್ಯವಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಬಾಧಿತವಾಗುವ ಗ್ರಾಮಗಳು: ಚಿ.ಕಡದಕಟ್ಟೆ, ಮರಿಗೊಂಡನಹಳ್ಳಿ, ಕೋಟೆಹಾಳ್, ವೆಂಕಟೇಶನಗರ್, ಕುರುವಾ, ಹಳ್ಳδιಬ್ಬ ಮತ್ತು ಗೋವಿನಕೋವಿ ಗ್ರಾಮಗಳಲ್ಲಿ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಹಾಗೂ ವಿದ್ಯುತ್ ಬಳಕೆದಾರರು ಸಹಕರಿಸಬೇಕಾಗಿ ನ್ಯಾಮತಿ ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜೀನಿಯರ್ ಬಿ.ಕೆ.ಶ್ರೀನಿವಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Leave a comment