ಅಮ್ರೋಹಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಪ್ರದೇಶದ ಫಾರ್ಮ್‌ಹೌಸ್ ಒಂದರಲ್ಲಿ ಹರಿಯಾಣ ಮೂಲದ 24 ವರ್ಷದ ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಆರೋಪದ ಮೇಲೆ ಯುಪಿ ಪೊಲೀಸ್ ಇಲಾಖೆಯ ಇಬ್ಬರು ಹಾಗೂ ಸಿಆರ್‌ಪಿಎಫ್ ಪಡೆಯ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಸಂತ್ರಸ್ತ ಯುವತಿಯ ದೂರಿನ ಪ್ರಕಾರ, ಧಾರ್ಮಿಕ ಸ್ಥಳಗಳ ದರ್ಶನಕ್ಕೆ ಕರೆದೊಯ್ಯುವುದಾಗಿ ನಂಬಿಸಿ ಸಿಆರ್‌ಪಿಎಫ್ ಸಿಬ್ಬಂದಿ ಆಕೆಯನ್ನು ಸೋನಿಪತ್‌ನಿಂದ ಅಮ್ರೋಹಾಗೆ ಕರೆತಂದಿದ್ದರು. ಸೆಪ್ಟೆಂಬರ್ 22ರ ಸಂಜೆ, ಅಮ್ರೋಹಾದ ಅತ್ರಾಸಿ-ಹಸನ್‌ಪುರ ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ಗೆ ಕರೆದೊಯ್ದು, ಸ್ಥಳೀಯ ಸಬ್‌ಇನ್ಸ್‌ಪೆಕ್ಟರ್ ಸಂಜಯ್ ತೋಮರ್ ಹಾಗೂ ಸಿಆರ್‌ಪಿಎಫ್ ಸಿಬ್ಬಂದಿ ಮೋಹಿತ್ ಮತ್ತು ಲಾಲಾರಾಮ್ ಯಾದವ್ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಆಹಾರ ತಂದಿದ್ದ ಹೆಡ್ ಕಾನ್ಸ್‌ಟೇಬಲ್ ಪ್ರಮೋದ್ ಎಂಬಾತ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ, ಯುವತಿ ಆತನನ್ನು ತಳ್ಳಿ ಕೊಠಡಿಯ ಬಾಗಿಲು ಹಾಕಿಕೊಂಡು ಆನ್‌ಲೈನ್ ಮೂಲಕ ಪೊಲೀಸ್ ಸಹಾಯವಾಣಿ ಸಂಖ್ಯೆ ಹುಡುಕಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ.
ಪೊಲೀಸ್ ಕ್ರಮ:
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಹಸನ್‌ಪುರ ಮತ್ತು ರಾಜಬ್‌ಪುರ ಠಾಣೆಯ ಪೊಲೀಸರು ಯುವತಿಯನ್ನು ರಕ್ಷಿಸಿ, ನಾಲ್ಕೂ ಆರೋಪಿಗಳನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೂಕ್ತ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯುಪಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಲಾಗಿದ್ದು, ಸಿಆರ್‌ಪಿಎಫ್ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಲು ವರದಿ ರವಾನಿಸಲಾಗಿದೆ.





Leave a comment