(Nrega Job Card) ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ಬಹುಮುಖ್ಯವಾಗಿ ದಾಖಲೆಗಳು ಬೇಕು. ಅದರಲ್ಲಿ ಇದೊಂದು ದಾಖಲೆ ಇದ್ದರೆ ಸರ್ಕಾರದ ಹಲವು ಯೋಜನೆಯ ಲಾಭ ಪಡೆಯಬಹುದಾಗಿದೆ. ಹಾಗಾದರೆ ಯಾವ ಕಾರ್ಡ್, ಯಾವೆಲ್ಲಾ ಯೋಜನೆಯ ಲಾಭ ಪಡೆಯಬಹುದು, ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ ಜಾಬ್ ಕಾರ್ಡ್ ಹೊಂದಿರುವವರಿಗೆ 1 ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ನೀಡಲಾಗುತ್ತದೆ. ನರೇಗಾ ಯೋಜನೆಯಡಿ, ಕಾರ್ಮಿಕರಿಗೆ ಕೆಲಸಕ್ಕಾಗಿ ಪ್ರತಿದಿನ ವೇತನವನ್ನು ನೀಡಲಾಗುತ್ತದೆ, ಅದನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ, ಈ ಯೋಜನೆಯ ಲಾಭವನ್ನು ಜಾಬ್ ಕಾರ್ಡ್ ಹೊಂದಿರುವವರಿಗೆ ಮಾತ್ರ ನೀಡಲಾಗುತ್ತದೆ.
ನರೇಗಾ ಜಾಬ್ ಕಾರ್ಡ್ ನಿಂದ ಯಾವೆಲ್ಲಾ ಯೋಜನೆಯ ಲಾಭ ಪಡೆಯಬಹುದು:
- ಅಂಗವೈಕಲ್ಯ ನೆರವು ಯೋಜನೆ
- ಅಂಗವೈಕಲ್ಯ ಪಿಂಚಣಿ ಯೋಜನೆ
- ಕನ್ಯಾ ವಿವಾಹ ನೆರವು ಯೋಜನೆ
- ಕಾರ್ಮಿಕರ ಗಂಭೀರ ಅನಾರೋಗ್ಯ ನೆರವು ಯೋಜನೆ
- ವಸತಿ ನೆರವು ಯೋಜನೆ
- ಸೌರ ಶಕ್ತಿ ಬೆಂಬಲ ಯೋಜನೆ
- ಮಹಾತ್ಮ ಗಾಂಧಿ ಪಿಂಚಣಿ ನೆರವು ಯೋಜನೆ
- ಹೆರಿಗೆ ಮಗು ಮತ್ತು ಹೆಣ್ಣು ಮಕ್ಕಳ ನೆರವು ಯೋಜನೆ
- ಕಟ್ಟಡ ಕಾರ್ಮಿಕರ ಅಂತ್ಯಕ್ರಿಯೆ ನೆರವು ಯೋಜನೆ
- ವೈದ್ಯಕೀಯ ಸೌಲಭ್ಯ ಯೋಜನೆ
- ಶೌಚಾಲಯ ನೆರವು ಯೋಜನೆ
- ವಸತಿ ಶಾಲಾ ಯೋಜನೆ
- ಕೌಶಲ್ಯ ಅಭಿವೃದ್ಧಿ ತಾಂತ್ರಿಕ ಪ್ರಮಾಣೀಕರಣ ಮತ್ತು ಉನ್ನತೀಕರಣ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.