SUDDIKSHANA KANNADA NEWS/ DAVANAGERE/ DATE:20-09-2024
ದಾವಣಗೆರೆ: ನ್ಯಾಷನಲ್ ಹೈವೇನಲ್ಲಿ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಇರುವುದರಿಂದ ಸೆ.20 ರಂದು ಬೆಳ್ಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಶಾಮನೂರು, ಬನಶಂಕರಿ ಬಡಾವಣೆ, ಶಿವ ಪಾರ್ವತಿ ಬಡಾವಣೆ, ಜೆ.ಹೆಚ್ ಪಟೇಲ್ ನಗರ, ದೇವರಬೆಳಕೆರೆ ರಸ್ತೆ, ಡಾಲರ್ಸ್ ಕಾಲೋನಿ, ಜರಿಕಟ್ಟೆ, ಮುದಹದಡಿ, ಹೊಸ ಕುಂದವಾಡ, ಹಳೆಕುಂದವಾಡ, ಕೆ.ಹೆಚ್.ಬಿ ಕಾಲೋನಿ ಮತ್ತು ರಶ್ಮಿ ಹಾಸ್ಟೆಲ್.
ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.