ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ದ್ರುವಿ ಪಟೇಲ್ ಅವರು ಮಿಸ್ ಇಂಡಿಯಾವರ್ಲ್ಡ್ ವೈಡ್ 2024 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇತ್ತೀಚೆಗೆ ನ್ಯೂಜೆರ್ಸಿಯ ಎಡಿಸನ್ನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ವಿಜೇತರನ್ನು ಘೋಷಿಸಲಾಯಿತು. ಇದು ನನಗೆ ಜಾಗತಿಕವಾಗಿ ಸಿಕ್ಕ ಮನ್ನಣೆ. ಮಿಸ್ ಇಂಡಿಯಾವರ್ಲ್ಡ್ ವೈಡ್ ಗೆಲ್ಲುವುದು ನನಗೆ ಅತ್ಯಂತ ಗೌರವವಾಗಿದೆ. ಇದು ಮಿಸ್ ವರ್ಲ್ಡ್ಗೂ ಹೆಚ್ಚಿನ ಗೌರವ ಎಂದು ದ್ರುವಿ ಪಟೇಲ್ ಹೇಳಿದ್ದಾರೆ.
ಗುಜರಾತ್ ಮೂಲದ ದ್ರುವಿ ಪಟೇಲ್ ಅವರು ಅಮೆರಿಕದಲ್ಲಿ ಕಂಪ್ಯೂಟರ್ ಇನ್ಫರ್ಮೆ ಷನ್ ಸಿಸ್ಟಮ್ ಪದವಿ ಓದುತ್ತಿದ್ದಾರೆ. ಬಾಲಿವುಡ್ ನಟಿಯಾಗುವ ಅಪೇಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಲಿಸಾ ಅಬ್ಡೋ ಲ್ಹಾಕ್ ಅವರು ಮಿಸ್ ಇಂಡಿಯಾವರ್ಲ್ಡ್ ವೈಡ್ 2024 ರರ್ನರ್ ಅಫ್ ಆದರು.ಮಾಳವಿಕಾ ಶರ್ಮಾ ಅವರು ಸೆಕೆಂಡ್ ರನ್ನರ್ ಅಫ್ ಆಗಿ ಗೆಲುವು ಸಾಧಿಸಿದರು.ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಇಂಡಿಯನ್ ಫೆಸ್ಟಿವಲ್ ಕಮೀಟಿ ಮಿಸ್ ಇಂಡಿಯಾವರ್ಲ್ಡ್ ವೈಡ್ ಸ್ಪರ್ಧೆ ಆಯೋಜಿಸುತ್ತದೆ.