ಹೊಸ ದೆಹಲಿ: ಅಂತರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ಒತ್ತಡಗಳ ನಡುವೆಯೇ ಭಾರತವು ತನ್ನ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಮಹತ್ವದ ಹೆಜ್ಜೆ ಇಟ್ಟಿದೆ.
ಕಳೆದ 7 ವರ್ಷಗಳಲ್ಲಿ ಮೊದಲ ಬಾರಿಗೆ ಇರಾನ್‌ನಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿರುವ ಭಾರತೀಯ ಸಂಸ್ಕರಣಾ ಕಂಪನಿಗಳು (Refiners), ಅದರ ಪಾವತಿಯನ್ನು ಅಮೆರಿಕನ್ ಡಾಲರ್ ಬದಲಿಗೆ ಚೀನೀ ಕರೆನ್ಸಿ ‘ಯುವಾನ್’ (Yuan) ಮೂಲಕ ಪೂರೈಸಿವೆ.
ಮುಖ್ಯಾಂಶಗಳು:
ಐಸಿಐಸಿಐ ಬ್ಯಾಂಕ್ ಮೂಲಕ ಪಾವತಿ:
ಐಸಿಐಸಿಐ ಬ್ಯಾಂಕ್ (ICICI Bank) ತನ್ನ ಶಾಂಘೈ ಶಾಖೆಯ ಮೂಲಕ ಈ ಹಣವನ್ನು ಚೀನೀ ಯುವಾನ್‌ನಲ್ಲಿ ವರ್ಗಾಯಿಸಿದೆ ಎಂದು ವರದಿಯಾಗಿದೆ.
ಐತಿಹಾಸಿಕ ಖರೀದಿ:
ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಸುಮಾರು 200 ಮಿಲಿಯನ್ ಡಾಲರ್ ಮೌಲ್ಯದ 2 ಮಿಲಿಯನ್ ಬ್ಯಾರೆಲ್ ಇರಾನ್ ತೈಲವನ್ನು ಖರೀದಿಸಿದೆ.
ಕೇಂದ್ರದ ಸಮರ್ಥನೆ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, “ನಮ್ಮ ದೇಶದ ಅಗತ್ಯಗಳನ್ನು ಪೂರೈಸುವುದು ನಮಗೆ ಮುಖ್ಯ. ತೈಲ ಕಂಪನಿಗಳು ನಿಯಮದ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುತ್ತಿವೆ, ಇದರಲ್ಲಿ ತಪ್ಪೇನೂ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕವು ಇರಾನ್ ಮೇಲೆ ವಿಧಿಸಿರುವ ತಾತ್ಕಾಲಿಕ ನಿರ್ಬಂಧ ಸಡಿಲಿಕೆಯ ಅವಧಿ ನಾಳೆ (ಏಪ್ರಿಲ್ 19) ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಭಾರತವು ತುರ್ತಾಗಿ ಈ ವ್ಯವಹಾರವನ್ನು ಪೂರ್ಣಗೊಳಿಸಿದೆ.






Leave a comment