ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಮತ್ತು ಕೃಷಿ ವಲಯದಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದ್ದು, ಕೃಷಿ ಇಲಾಖೆಯಡಿ “ಕರ್ನಾಟಕ ಅಗ್ರಿಟೆಕ್ ಮಿಷನ್ 2026” ಯೋಜನೆಗೆ ಚಾಲನೆ ನೀಡಲು ₹36 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ.
ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಭಾನುವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಈ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಯಿತು.
ಉಪಗ್ರಹದ ಮೂಲಕ ರೈತರಿಗೆ ಹವಾಮಾನದ ಆಸರೆ:
“ಕರ್ನಾಟಕ ಅಗ್ರಿಟೆಕ್ ಮಿಷನ್ 2026” ಅಡಿಯಲ್ಲಿ ಉಪಗ್ರಹ (Satellite) ತಂತ್ರಜ್ಞಾನವನ್ನು ಬಳಸಿ ಹವಾಮಾನ ವಿಶ್ಲೇಷಣೆ ನಡೆಸಲಾಗುವುದು. ಈ ಮೂಲಕ ರೈತರಿಗೆ ಮಳೆ, ಹವಾಮಾನದ ಏರುಪೇರುಗಳು, ಸೂಕ್ತ ಬೆಳೆಗಳು ಹಾಗೂ ಬೆಳೆಗಳಿಗೆ ತಗಲುವ ರೋಗಬಾಧೆಗಳ ಕುರಿತು ಮುಂಚಿತವಾಗಿಯೇ ನಿಖರ ಮಾಹಿತಿ ನೀಡುವ ವ್ಯವಸ್ಥೆಯನ್ನು ಕೃಷಿ ಇಲಾಖೆ ಜಾರಿಗೆ ತರಲಿದೆ.
ಕೆಪಿಎಸ್ ಇ ಅಧ್ಯಕ್ಷರ ಅಮಾನತಿಗೆ ಸಂಪುಟ ಒಪ್ಪಿಗೆ
“ಕೆಪಿಎಸ್ ಇ ಅಧ್ಯಕ್ಷರನ್ನು ರಾಜ್ಯಪಾಲರು ಅಮಾನತು ಮಾಡಿದ್ದರು. ಇದಕ್ಕೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ನಾನು ಇದರ ಬಗ್ಗೆ ಕೂಲಂಕುಷವಾಗಿ ಅವಲೋಕಿಸಿದಾಗ ಅಮಾನತು ತೀರ್ಮಾನ ಸರಿಯಿದೆ ಎಂದು ಎನಿಸಿತು. ಅದಕ್ಕೆ ಒಪ್ಪಿಗೆ ನೀಡಲಾಗಿದೆ” ಎಂದು ಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದರು.
ಸುಧಾಕರ್ ಅವರ ಕನಸಿನ ಯೋಜನೆಗೆ ಅನುಮೋದನೆ
“244 ಕೋಟಿ ರೂಪಾಯಿ ವೆಚ್ಚದಲ್ಲಿ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಯ 114 ಕೆರೆಗಳು ಹಾಗೂ ಕುಡಿಯುವ ನೀರಿಗಾಗಿ ಗಾಯತ್ರಿ ಜಲಾಶಯವನ್ನು ತುಂಬಿಸಲಾಗುವುದು. ಇದು ದಿವಂಗತ ಸಚಿವರಾದ ಸುಧಾಕರ್ ಅವರ ಕನಸಿನ ಯೋಜನೆಯಾಗಿತ್ತು” ಎಂದರು.
ಪ್ರಶ್ನೋತ್ತರ
ಆಗಸ್ಟ್ 20 ಕ್ಕೆ ಭಾರತ್ ಜೋಡೋ ಯುವಕ ಸಂಘಗಳ ಉದ್ಘಾಟನೆ ಆಗಲಿದೆಯೇ ಎಂದು ಕೇಳಿದಾಗ, “ನಮ್ಮ ಉಪಮುಖ್ಯಮಂತ್ರಿಯವರು ಇದಕ್ಕೆ ಬೇಕಾದ ಮಾರ್ಗದರ್ಶನಗಳನ್ನು ಅಂತಿಮಗೊಳಿಸಿದ್ದಾರೆ” ಎಂದರು.
ರೈತರ ಆತ್ಮಹತ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಿಇಓಗಳ ಸಭೆಯಲ್ಲಿ ಮಾಹಿತಿ ನೀಡಿದ್ದರ ಬಗ್ಗೆ ಕೇಳಿದಾಗ, “ಒಂದೇ ಒಂದು ರೈತನ ಆತ್ಮಹತ್ಯೆಯಾಗಿದೆ ಎಂದು ಹೇಳಿದ್ದಾರೆ” ಎಂದರು.
- 15 ಸಾವಿರ ಶಿಕ್ಷಕರ ನೇಮಕಾತಿ
- 15000 Teachers Jobs
- Agriculture Department Karnataka
- Karnataka Agritech Mission 2026
- Karnataka Cabinet Decisions
- Karnataka Teacher Recruitment 2026
- Vidhana Soudha News.
- Weather Analysis for Farmers
- ಕರ್ನಾಟಕ ಅಗ್ರಿಟೆಕ್ ಮಿಷನ್ 2026
- ಕೃಷಿ ಇಲಾಖೆ ಬಜೆಟ್
- ಬೆಂಗಳೂರು ಸುದ್ದಿ
- ರೈತರಿಗೆ ಉಪಗ್ರಹ ಮಾಹಿತಿ
- ಸಚಿವ ಸಂಪುಟ ಅನುಮೋದನೆ
- ಹವಾಮಾನ ವಿಶ್ಲೇಷಣೆ





Leave a comment