Home ಕ್ರೈಂ ನ್ಯೂಸ್ ‘ನಾನು ದಿಮಾಗಿ ನಕ್ಸಲ್, ಕೇಂದ್ರ ಸರ್ಕಾರವೇ ತುಂಡು-ತುಂಡು ಗ್ಯಾಂಗ್’: ಕೇಂದ್ರದ ವಿರುದ್ಧ ನಟ ನಾಸಿರುದ್ದೀನ್ ಶಾ ಕಿಡಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

‘ನಾನು ದಿಮಾಗಿ ನಕ್ಸಲ್, ಕೇಂದ್ರ ಸರ್ಕಾರವೇ ತುಂಡು-ತುಂಡು ಗ್ಯಾಂಗ್’: ಕೇಂದ್ರದ ವಿರುದ್ಧ ನಟ ನಾಸಿರುದ್ದೀನ್ ಶಾ ಕಿಡಿ!

Share
ನಾಸಿರುದ್ದೀನ್ ಶಾ
Share

ನವದೆಹಲಿ: ವಿದ್ಯಾರ್ಥಿಗಳ ಮೇಲಿನ ದಬ್ಬಾಳಿಕೆ ಹಾಗೂ ಪ್ರತಿಭಟನೆಗಳ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಾಲಿವುಡ್‌ನ ಖ್ಯಾತ ಹಿರಿಯ ನಟ ನಾಸಿರುದ್ದೀನ್ ಶಾ, ತಮ್ಮನ್ನು ತಾವು ‘ದಿಮಾಗಿ ನಕ್ಸಲ್’ (ಬೌದ್ಧಿಕ ನಕ್ಸಲ್) ಎಂದು ಘೋಷಿಸಿಕೊಂಡಿದ್ದಾರೆ.

ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿಯ ಐಟಿ ಸೆಲ್ ಹಾಗೂ ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ಅವರು, ಸರ್ಕಾರವೇ ದೇಶವನ್ನು ಒಡೆಯುವ ‘ತುಂಡು-ತುಂಡು ಗ್ಯಾಂಗ್’ ಎಂದು ಟೀಕಿಸಿದ್ದಾರೆ.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು), ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಸ್‌ಆರ್‌ಎಫ್‌ಟಿಐ) ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಅವರು ಕಟುವಾಗಿ ಖಂಡಿಸಿದ್ದಾರೆ. ಸರ್ಕಾರದ ಕಾವಲುಗಾರರು ತಮ್ಮಂತಹ ವಿಮರ್ಶಕರಿಗೆ ‘ದೇಶದ್ರೋಹಿ’, ‘ತುಂಡು-ತುಂಡು ಗ್ಯಾಂಗ್’ ಎಂಬ ಹಣೆಪಟ್ಟಿಗಳನ್ನು ಕಟ್ಟಿದ್ದಾರೆ ಎಂದು ಕಿಡಿಕಾರಿರುವ ಶಾ, ದೇಶದ ಯುವಕರ ಧೈರ್ಯವನ್ನು ಅಥವಾ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

‘ದಿಮಾಗಿ ನಕ್ಸಲ್’ ಘೋಷಣೆ: ವಿಮರ್ಶಕರನ್ನು ಹತ್ತಿಕ್ಕಲು ಬಳಸುವ ಪದಗಳನ್ನು ಮರುಪ್ರಶ್ನಿಸಿರುವ ನಟ ನಾಸಿರುದ್ದೀನ್ ಶಾ, ತಾವು ಹೆಮ್ಮೆಯಿಂದ ‘ದಿಮಾಗಿ ನಕ್ಸಲ್’ ಎಂದು ಹೇಳಿಕೊಳ್ಳುವುದಾಗಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಪರ ಧ್ವನಿ: ಜೆಎನ್‌ಯು, ಎಸ್‌ಆರ್‌ಎಫ್‌ಟಿಐ ಮತ್ತು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ವಿದ್ಯಾರ್ಥಿಗಳ ಮೇಲಿನ ದಬ್ಬಾಳಿಕೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಮಾಧ್ಯಮ ಹಾಗೂ ಐಟಿ ಸೆಲ್ ವಿರುದ್ಧ ಆಕ್ರೋಶ: ಸರ್ಕಾರದ ಬೆಂಬಲಕ್ಕೆ ನಿಲ್ಲುವ ಮಾಧ್ಯಮಗಳು ಮತ್ತು ಬಿಜೆಪಿಯ ಐಟಿ ಸೆಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಯುವಜನತೆಯ ಸ್ಫೂರ್ತಿಯನ್ನು ಯಾರು ಕೆಡವಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ಕ್ರಾಂತಿಕಾರಿ ಕವಿ ಬಿಸ್ಮಿಲ್ ಅಜಿಮಾಬಾದಿ ಅವರ ‘ಸರ್ಫರೋಶಿ ಕಿ ತಮನ್ನಾ’ ಕವಿತೆಯ ಸಾಲುಗಳನ್ನು ಉಲ್ಲೇಖಿಸಿರುವ ನಾಸಿರುದ್ದೀನ್ ಶಾ, ದೇಶದ ಪ್ರಜಾಪ್ರಭುತ್ವ ಮತ್ತು ಶಿಕ್ಷಣ ಸಂಸ್ಥೆಗಳನ್ನು ಉಳಿಸಲು ಯುವಕರು ಒಗ್ಗಟ್ಟಾಗಿ ನಿಲ್ಲಬೇಕೆಂದು ಕರೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *