Home ಕ್ರೈಂ ನ್ಯೂಸ್ ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿ: ಪತಿ, ಅತ್ತೆ ಮನೆಯ ಮೂವರ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿ: ಪತಿ, ಅತ್ತೆ ಮನೆಯ ಮೂವರ ಬಂಧನ!

Share
ಪತಿ
Share

ಸೇರಾಯಕೆಲಾ (ಜಾರ್ಖಂಡ್‌): ಜಾರ್ಖಂಡ್‌ ರಾಜ್ಯದ ಸೇರಾಯಕೆಲಾ-ಖರ್ಸಾವನ್ ಜಿಲ್ಲೆಯಲ್ಲಿ ಶಂಕಿತಸ್ಪದ ರೀತಿಯಲ್ಲಿ ನವವಿವಾಹಿತೆಯೊಬ್ಬರು ಮೃತಪಟ್ಟಿದ್ದು, ವರದಕ್ಷಿಣೆ ಕಿರುಕುಳ ಹಾಗೂ ಹಲ್ಲೆ ಆರೋಪದ ಮೇರೆಗೆ ಮೃತ ಪಿಂಕಿ ಮಹ್ತೋ ಅವರ ಪತಿ ಹಾಗೂ ಮೂವರು ಅತ್ತೆ ಮನೆ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಮೃತೆ ಪಿಂಕಿ ಮಹ್ತೋ ಹಾಗೂ ಮನೀಶ್ ಶರ್ಮಾ ಅವರದ್ದು ಪ್ರೇಮ ವಿವಾಹವಾಗಿದ್ದು, ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಈ ದುರ್ಘಟನೆ ನಡೆದಿದೆ.

ಆದಿತ್ಯಪುರದ ಜಾಯ್ ನೆಕ್ಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪಿಂಕಿ ಅವರನ್ನು ವರದಕ್ಷಿಣೆಗಾಗಿ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಪಿಂಕಿ ಅವರ ತಂದೆ ಲಲಿತ್ ಮಹ್ತೋ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗರ್ಭಿಣಿಯಾಗಿದ್ದ ತಮ್ಮ ಮಗಳಿಗೆ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಪಾರ್ಟ್‌ಮೆಂಟ್‌ನ ಟೆರೇಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅತ್ತಮನೆಯವರು ಸುಳ್ಳು ಕಥೆ ಸೃಷ್ಟಿಸಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮೃತದೇಹದೊಂದಿಗೆ ಅಪಾರ್ಟ್‌ಮೆಂಟ್ ಬಳಿ ಪ್ರತಿಭಟನೆ ನಡೆಸಿದ್ದಾರೆ.

ವರದಕ್ಷಿಣೆ ಕಿರುಕುಳ ಆರೋಪ: ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಗರ್ಭಿಣಿಯಾಗಿದ್ದ ಪಿಂಕಿ ಮಹ್ತೋ ಮೇಲೆ ವರದಕ್ಷಿಣೆಗಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ತಂದೆ ದೂರು ದಾಖಲಿಸಿದ್ದಾರೆ.

ನಾಲ್ವರ ಬಂಧನ: ಪತಿ ಮನೀಶ್ ಶರ್ಮಾ, ಮಾವ ಶ್ಯಾಮ್ ಶರ್ಮಾ, ಅತ್ತೆ ಪೂನಮ್ ಶರ್ಮಾ ಹಾಗೂ ಬಾವ ಸತೀಶ್ ಶರ್ಮಾ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪೊಲೀಸ್ ತನಿಖೆ ಚುರುಕು: ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles