ಬೆಂಗಳೂರು/ಸ್ಯಾನ್ ಫ್ರಾನ್ಸಿಸ್ಕೋ: ವರ್ಷದ ಆರಂಭದಲ್ಲಷ್ಟೇ 16,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದ ಜಾಗತಿಕ ಇ-ಕಾಮರ್ಸ್ ಹಾಗೂ ಕ್ಲೌಡ್ ದೈತ್ಯ ಅಮೆಜಾನ್ (Amazon), ಇದೀಗ ಮತ್ತೊಂದು ಸುತ್ತಿನ ಉದ್ಯೋಗ ಕಡಿತವನ್ನು ಘೋಷಿಸಿದೆ. ಈ ಬಾರಿ ಕಂಪನಿಯ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ (AGI) ಅಂದರೆ ಕೃತಕ ಬುದ್ಧಿಮತ್ತೆ ವಿಭಾಗದ ಉದ್ಯೋಗಿಗಳಿಗೆ ಕತ್ತರಿ ಬಿದ್ದಿದೆ.
ಗ್ರಾಹಕರಿಗೆ ತಕ್ಷಣವೇ ಅಗತ್ಯವಿರುವ ಹಾಗೂ ಹೆಚ್ಚಿನ ಆದ್ಯತೆಯ ಎಐ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಮೆಜಾನ್ ತಿಳಿಸಿದೆ.
ಯಾರೆಲ್ಲ ಉದ್ಯೋಗ ಕಳೆದುಕೊಂಡಿದ್ದಾರೆ?
ಅಮೆಜಾನ್ ಈ ಬಾರಿ ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬ ನಿಖರ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲವಾದರೂ, ಇದು ನಿರ್ದಿಷ್ಟ ತಂಡಗಳನ್ನು ಗುರಿಯಾಗಿಸಿಕೊಂಡು ಮಾಡಿದ ಕಡಿತವಾಗಿದೆ ಎಂದು ಮೂಲಗಳು ತಿಳಿಸಿವೆ.
AGI ಡೇಟಾ ಸರ್ವಿಸಸ್: ಉಪಾಧ್ಯಕ್ಷ ಅದೀಬ್ ಶನಾ (Adeeb Shanaa) ನೇತೃತ್ವದ ತಂಡ.
AGI ಇನ್ಫರ್ಮೇಷನ್: ಉಪಾಧ್ಯಕ್ಷ ವಿಶಾಲ್ ಶರ್ಮಾ (Vishal Sharma) ನೇತೃತ್ವದ ತಂಡ.
ವಿಶೇಷವಾಗಿ ಮಾಡೆಲ್ ಕಸ್ಟಮೈಸೇಶನ್, ಪೋಸ್ಟ್-ಟ್ರೇನಿಂಗ್ ಹಾಗೂ ಡೇಟಾ ಫಿಲ್ಟರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಈ ವಜಾ ಪೆಟ್ಟು ಬಿದ್ದಿದೆ.
ನಾಯಕತ್ವ ಬದಲಾವಣೆ ಹಾಗೂ ಮರುಸಂಘಟನೆ
ಕಳೆದ ಕೆಲವು ತಿಂಗಳುಗಳಿಂದ ಅಮೆಜಾನ್ ಎಐ ವಿಭಾಗದಲ್ಲಿ ಪ್ರಮುಖ ನಾಯಕತ್ವ ಬದಲಾವಣೆಗಳು ನಡೆಯುತ್ತಿವೆ.
ಎಐ ವಿಭಾಗದ ಹಿರಿಯ ಅಧಿಕಾರಿಯಾಗಿದ್ದ ರೋಹಿತ್ ಪ್ರಸಾದ್ ಕಳೆದ ವರ್ಷದ ಅಂತ್ಯದಲ್ಲಿ ಸಂಸ್ಥೆ ತೊರೆದಿದ್ದರು.
ಎಜಿಐ ಲ್ಯಾಬ್ ಮುಖ್ಯಸ್ಥ ಡೇವಿಡ್ ಲುವಾನ್ ಫೆಬ್ರವರಿಯಲ್ಲಿ ಹೊರನಡೆದಿದ್ದರು.
ಪ್ರಸ್ತುತ ಅಮೆಜಾನ್‌ನ ಹಿರಿಯ ಉಪಾಧ್ಯಕ್ಷ ಪೀಟರ್ ಡಿಸಾಂಟಿಸ್ (Peter DeSantis) ಅವರ ಅಡಿಯಲ್ಲಿ ಎಐ, ಸಿಲಿಕಾನ್ ಚಿಪ್ ಅಭಿವೃದ್ಧಿ ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್ ವಿಭಾಗಗಳನ್ನು ಒಂದೇ ಸೂರಿನಡಿ ತರಲಾಗಿದೆ.
ಪರಿಹಾರ ಪ್ಯಾಕೇಜ್:
ಸಂಸ್ಥೆಯಿಂದ ಹೊರಹೋಗುತ್ತಿರುವ ಅಮೆರಿಕದ ಉದ್ಯೋಗಿಗಳಿಗೆ 90 ದಿನಗಳ ವೇತನ ಹಾಗೂ ಆರೋಗ್ಯ ವಿಮೆ ಸೌಲಭ್ಯ ಸೇರಿದಂತೆ ಇತರೆ ಪರಿಹಾರ ಸೌಲಭ್ಯಗಳನ್ನು ನೀಡುವುದಾಗಿ ಕಂಪನಿ ಭರವಸೆ ನೀಡಿದೆ.
- AI Job Cuts
- Amazon AGI Layoffs
- Amazon Job Reductions
- Amazon Layoffs 2026
- Amazon Restructuring
- Artificial General Intelligence
- AWS AI
- Peter DeSantis
- Rohit Prasad
- Tech layoffs 2026
- ಅಮೆಜಾನ್ ಉದ್ಯೋಗ ವಜಾ
- ಅಮೆಜಾನ್ ಲೇಆಫ್ಸ್ 2026
- ಉದ್ಯೋಗ ಕಡಿತ
- ಉದ್ಯೋಗ ನಷ್ಟ
- ಎಐ ವಿಭಾಗ
- ಕೃತಕ ಬುದ್ಧಿಮತ್ತೆ
- ಟೆಕ್ ಲೇಆಫ್ಸ್
- ತಂತ್ರಜ್ಞಾನ ಸುದ್ದಿ
- ಪೀಟರ್ ಡಿಸಾಂಟಿಸ್
- ರೋಹಿತ್ ಪ್ರಸಾದ್





Leave a comment