SUDDIKSHANA KANNADA NEWS/ DAVANAGERE/ DATE:23-08-2024
ದಾವಣಗೆರೆ: ನಗರದ ಕೆ. ಬಿ. ಬಡಾವಣೆಯ ರಾಘವೇಂದ್ರ ಮಠದಲ್ಲಿ ಗುರುರಾಯರ 353ನೇ ಆರಾಧನಾ ಮಹೋತ್ಸವದ ಪ್ರಯುಕ್ತ ನವಶಕ್ತಿ ನಮನ ಕಾರ್ಯಕ್ರಮ ನಡೆಯಿತು.
ಶ್ರೀಗುರುರಾಯರ ಆರಾಧನೆಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನವದುರ್ಗೆಯರ ವೈಶಿಷ್ಟ್ಯತೆಯ ಹಾಗೂ ಅವರ ಹುಟ್ಟಿನ ಕಾರಣವನ್ನು ಕುರಿತು “ನವಶಕ್ತಿ ನಮನ” ಎಂಬ ನೃತ್ಯರೂಪಕ ಕಾರ್ಯಕ್ರಮವನ್ನು ನಮನ ಅಕಾಡೆಮಿ ದಾವಣಗೆರೆಯ ಶ್ರೀಮತಿ ಗುರು ವಿದುಷಿ ಮಾಧವಿ ಡಿ. ಕೆ. ಹಾಗೂ ಇವರ ಶಿಷ್ಯ ವೃಂದ ನಡೆಸಿಕೊಟ್ಟರು.
ದಸರಾ ಹಬ್ಬದಲ್ಲಿ ಒಂಬತ್ತು ದಿನಗಳಲ್ಲಿ ನಾವು 9 ದುರ್ಗೆಯರನ್ನ ಪೂಜಿಸುತ್ತೇವೆ. ಪ್ರತಿದಿನದ ದುರ್ಗೆಯರು ಅವರು ಏಕೆ ಈ ಅವತಾರವನ್ನು ತಾಳಿದರು ಮತ್ತು ಅವರ ವಿಶೇಷತೆ ಏನು, ಅವರು ಯಾವ ಬಣ್ಣವನ್ನು ಧರಿಸಿರುತ್ತಾರೆ. ಇದರ ಬಗ್ಗೆ ವಿವರಿಸಲಾಗಿದೆ ಹಾಗೂ ಆ ದುರ್ಗೆಯ ಅವತಾರವನ್ನು ತಾಳಲು ಉದ್ದೇಶವೇನೆಂದು ಪ್ರತಿ ದುರ್ಗೆಯರ ನೃತ್ಯದಲ್ಲಿ ಅಭಿನಯದ ಮೂಲಕ ವಿವರಿಸಲಾಗಿದೆ. ಇದು ನೋಡುಗರ ಗಮನ ಸೆಳೆಯಿತು.