Home ಕ್ರೈಂ ನ್ಯೂಸ್ ನೇಪಾಳದಲ್ಲಿ ಭೀಕರ ಪ್ರವಾಹ: ಕೇಂದ್ರದ ಮಾಜಿ ಸಚಿವ ಮುಕುಲ್ ರಾಯ್ ಸೊಸೆ ಶರ್ಮಿಷ್ಠಾ ನಾಪತ್ತೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ನೇಪಾಳದಲ್ಲಿ ಭೀಕರ ಪ್ರವಾಹ: ಕೇಂದ್ರದ ಮಾಜಿ ಸಚಿವ ಮುಕುಲ್ ರಾಯ್ ಸೊಸೆ ಶರ್ಮಿಷ್ಠಾ ನಾಪತ್ತೆ!

Share
ನೇಪಾಳ
Share

ನೇಪಾಳ: ಟಿಬೆಟ್ ಗಡಿಭಾಗದ ಬಳಿ ನೇಪಾಳದಲ್ಲಿ ಸಂಭವಿಸಿದ ಭೀಕರ ದಿಢೀರ್ ಪ್ರವಾಹದಲ್ಲಿ ಸಿಲುಕಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶುಭ್ರಾಂಶು ರಾಯ್ ಅವರ ಪತ್ನಿ ಹಾಗೂ ಮಾಜಿ ಕೇಂದ್ರ ರೈಲ್ವೆ ಸಚಿವ ದಿವಂಗತ ಮುಕುಲ್ ರಾಯ್ ಅವರ ಸೊಸೆ ಶರ್ಮಿಷ್ಠಾ ಭೌಮಿಕ್ ರಾಯ್ ನಾಪತ್ತೆಯಾಗಿದ್ದಾರೆ.

ಆಗಸ್ಟ್ 21 ರಂದು ಕೋಲ್ಕತ್ತಾದಿಂದ 32 ಜನರ ತಂಡದೊಂದಿಗೆ ಕೈಲಾಸ ಮಾನಸಸರೋವರ ಯಾತ್ರೆಗೆ ಶರ್ಮಿಷ್ಠಾ ಅವರು ಒಬ್ಬರೇ ತೆರಳಿದ್ದರು. ಆಗಸ್ಟ್ 25 ರ ರಾತ್ರಿ ಅವರು ಪತಿಯೊಂದಿಗೆ ಕೊನೆಯದಾಗಿ ಮಾತನಾಡಿದ್ದರು. ಆ ಬಳಿಕ ಅವರೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಎಂದು ಕುಟುಂಬ ಮೂಲಗಳು ಆತಂಕ ವ್ಯಕ್ತಪಡಿಸಿವೆ.

ಬುಧವಾರ ಬೆಳಗ್ಗೆ ಟಿಬೆಟ್‌ನಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಹಿಮನದಿ ಸರೋವರ ಒಡೆದು ಈ ಭೀಕರ ಪ್ರವಾಹ ಸೃಷ್ಟಿಯಾಗಿದೆ ಎಂದು ಅಂದಾಜಿಸಲಾಗಿದೆ. ನೇಪಾಳದಲ್ಲಿ ಪ್ರವಾಹದಿಂದಾಗಿ ಸೇತುವೆಗಳು ಮತ್ತು ಜಲವಿದ್ಯುತ್ ಯೋಜನೆಗಳು ನಾಶವಾಗಿವೆ. ಈ ದುರಂತದಲ್ಲಿ 270 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 288 ಭಾರತೀಯರು ಸೇರಿದಂತೆ 750 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಗಳು ಸವಾಲಾಗಿದ್ದು, ಭಾರತೀಯ ರಾಯಭಾರ ಕಚೇರಿಯೊಂದಿಗೆ ಕುಟುಂಬ ನಿರಂತರ ಸಂಪರ್ಕದಲ್ಲಿದೆ.

Share

Leave a comment

Leave a Reply

Your email address will not be published. Required fields are marked *