Home ದಾವಣಗೆರೆ ಮುಂದಿನ ಪ್ರಧಾನಿ ರೇಸ್‌ನಲ್ಲಿದ್ದಾರೆ ತಮಿಳುನಾಡು ಸಿಎಂ ವಿಜಯ್! ಮೋದಿಗೆ 1ನೇ ಸ್ಥಾನ, 3ನೇ ಸ್ಥಾನಕ್ಕೇರಿದ ‘ದಳಪತಿ’!
ದಾವಣಗೆರೆನವದೆಹಲಿಬೆಂಗಳೂರು

ಮುಂದಿನ ಪ್ರಧಾನಿ ರೇಸ್‌ನಲ್ಲಿದ್ದಾರೆ ತಮಿಳುನಾಡು ಸಿಎಂ ವಿಜಯ್! ಮೋದಿಗೆ 1ನೇ ಸ್ಥಾನ, 3ನೇ ಸ್ಥಾನಕ್ಕೇರಿದ ‘ದಳಪತಿ’!

Share
ಪ್ರಧಾನಿ
Share

ನವದೆಹಲಿ: ದೇಶದ ರಾಜಕೀಯ ರಂಗದಲ್ಲಿ ತಮಿಳುನಾಡಿನ ಹೊಸ ಮುಖ್ಯಮಂತ್ರಿ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ಸಿ. ಜೋಸೆಫ್ ವಿಜಯ್ ಅವರು ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್’ (MOTN) ಸಮೀಕ್ಷೆಯ ಪ್ರಕಾರ, ದೇಶದ ಮುಂದಿನ ಪ್ರಧಾನಿ ಹುದ್ದೆಯ ನೆಚ್ಚಿನ ಆಯ್ಕೆಗಳಲ್ಲಿ ವಿಜಯ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಈ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶೇ. 48.7 ಬೆಂಬಲದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೇ. 27.1 ಬೆಂಬಲ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಆದರೆ, ರಾಜಕೀಯಕ್ಕೆ ಬಂದ ಕೇವಲ ಎರಡೇ ವರ್ಷಗಳಲ್ಲಿ ಮತ್ತು ಮುಖ್ಯಮಂತ್ರಿಯಾಗಿ 3 ತಿಂಗಳು ಪೂರೈಸುವಷ್ಟರಲ್ಲೇ ಶೇ. 9.2 ಜನಪ್ರಿಯತೆ ಗಳಿಸಿರುವ ಸಿ. ಜೋಸೆಫ್ ವಿಜಯ್ ಮೂರನೇ ಸ್ಥಾನಕ್ಕೇರಿರುವುದು ಎಲ್ಲರ ಗಮನ ಸೆಳೆದಿದೆ.

ಮಮತಾ ಬ್ಯಾನರ್ಜಿ (2%), ಅಖಿಲೇಶ್ ಯಾದವ್ (1.7%), ಮತ್ತು ಅರವಿಂದ್ ಕೇಜ್ರಿವಾಲ್ (1.2%) ಅವರಂತಹ ಹಿರಿಯ ನಾಯಕರನ್ನು ಹಿಂದಿಕ್ಕಿ ವಿಜಯ್ ಈ ಸಾಧನೆ ಮಾಡಿದ್ದಾರೆ. ಅಲ್ಲದೆ, ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಮುನ್ನಡೆಸುವ ನಾಯಕರ ಪಟ್ಟಿಯಲ್ಲೂ ವಿಜಯ್ (12.2%) ಎರಡನೇ ಸ್ಥಾನದಲ್ಲಿದ್ದಾರೆ. 2029ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಿಂದ, ಅದೂ ತಮಿಳುನಾಡಿನಿಂದ ಪ್ರಧಾನಿ ಅಭ್ಯರ್ಥಿಯನ್ನು ಬಿಂಬಿಸುವ ಟಿವಿಕೆ ನಾಯಕರ ಕನಸಿಗೆ ಈ ಸಮೀಕ್ಷೆ ಬಲ ತುಂಬಿದೆ.

Share

Leave a comment

Leave a Reply

Your email address will not be published. Required fields are marked *