ನವದೆಹಲಿ: ಇಂದೇ ದೇಶದಲ್ಲಿ ಲೋಕಸಭಾ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 326 ಸ್ಥಾನಗಳನ್ನು ಗೆದ್ದು ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ‘ಇಂಡಿಯಾ ಟುಡೇ – ಸಿವೋಟರ್’ ನಡೆಸಿರುವ ‘ಮೂಡ್ ಆಫ್ ದಿ ನೇಷನ್’ (MOTN) ಸಮೀಕ್ಷೆ ತಿಳಿಸಿದೆ.
ಜನವರಿಯಲ್ಲಿ ನಡೆದ ಸಮೀಕ್ಷೆಗೆ ಹೋಲಿಸಿದರೆ ಎನ್‌ಡಿಎ 26 ಸೀಟುಗಳನ್ನು ಕಳೆದುಕೊಂಡಿದೆಯಾದರೂ, ಬಹುಮತಕ್ಕಿಂತ ಹೆಚ್ಚಿನ ಬೆಂಬಲವನ್ನು ಉಳಿಸಿಕೊಂಡಿದೆ. ಈ ಸಮೀಕ್ಷೆಯ ಪ್ರಕಾರ ಬಿಜೆಪಿ ಸ್ವತಂತ್ರವಾಗಿ 261 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.
ಇನ್ನೊಂದೆಡೆ, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟ 185 ಸ್ಥಾನಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಈ ಪೈಕಿ ಕಾಂಗ್ರೆಸ್ ಪಕ್ಷವೊಂದೇ 106 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ಬಲ ಹೆಚ್ಚಿಸಿಕೊಳ್ಳುವ ಲಕ್ಷಣ ಗೋಚರಿಸಿದೆ. ಪರೀಕ್ಷಾ ಅಕ್ರಮಗಳು ಮತ್ತು ಯುವಜನರ ಪ್ರತಿಭಟನೆಗಳ ಕಾರಣದಿಂದ ಬಿಜೆಪಿ ಸಲ್ಪ ಹಿನ್ನಡೆ ಅನುಭವಿಸಿದ್ದರೆ, ಕಾಂಗ್ರೆಸ್ ತನ್ನ ತಂತ್ರಗಾರಿಕೆಯಿಂದ ಪ್ರಗತಿ ಸಾಧಿಸಿದೆ ಎಂದು ಸಮೀಕ್ಷೆಯಲ್ಲಿ ವಿಶ್ಲೇಷಿಸಲಾಗಿದೆ.
- BJP seat projection
- Congress gains MOTN
- INDIA bloc seats
- India Today CVoter survey
- Indian politics news
- Lok Sabha election projection
- MOTN Survey 2026
- Narendra Modi popularity
- NDA 326 seats
- ಇಂಡಿಯಾ ಒಕ್ಕೂಟ
- ಇತ್ತೀಚಿನ ಸುದ್ದಿ
- ಎನ್‌ಡಿಎ ಮೈತ್ರಿಕೂಟ
- ಕಾಂಗ್ರೆಸ್ 106 ಸೀಟು
- ನರೇಂದ್ರ ಮೋದಿ
- ಬಿಜೆಪಿ 261 ಸ್ಥಾನ
- ಮೂಡ್ ಆಫ್ ದಿ ನೇಷನ್
- ರಾಜಕೀಯ ಸುದ್ದಿ.
- ಲೋಕಸಭಾ ಚುನಾವಣೆ ಸಮೀಕ್ಷೆ
- ಸಿವೋಟರ್ ಸಮೀಕ್ಷೆ 2026





Leave a comment