SUDDIKSHANA KANNADA NEWS/ DAVANAGERE/ DATE:14-12-2024
ನವದೆಹಲಿ: ನವದಹೆಲಿಯಲ್ಲಿ ನಡೆದ ಸಂವಿಧಾನ ಮೇಲಿನ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಭಾಷಣ ಮಾಡಿದರು. ಕಾಂಗ್ರೆಸ್ ಸೇರಿದಂತೆ ವಿಪಕ್ಷ ಸದಸ್ಯರು ನಿರುತ್ತರವಾದರು. ಮೋದಿ ಅಬ್ಬರದ ಭಾಷಣಕ್ಕೆ ಒಮ್ಮೆಲೆ ಕಾಂಗ್ರೆಸ್ ಸದಸ್ಯರು ಶಾಕ್ ಆದರೆ, ಮತ್ತೊಂದೆಡೆ ವಿರೋಧ ವ್ಯಕ್ತಪಡಿಸುತ್ತಿದ್ದರು.
ಜವಾಹರ ಲಾಲ್ ನೆಹರೂ ಅವರಿಂದ ಹಿಡಿದು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಆಡಳಿತಾವಧಿಯಲ್ಲಿನ ಇಂಚಿಂಚೂ ಮಾಹಿತಿಯನ್ನು ನೀಡಿದರು. ಸಂವಿಧಾನ ಕುರಿತಂತೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದನ್ನು
ಸಾಕ್ಷ್ಯ ಸಮೇತ ವಿವರಿಸಿದರು. ಬಿಜೆಪಿ ಸದಸ್ಯರು ಮೇಜು ತಟ್ಟಿ ಬೆಂಬಲಿಸಿದರೆ, ಕಾಂಗ್ರೆಸ್ ಸದಸ್ಯರು ಮೋದಿ ಆರ್ಭಟದ ಮುಂದೆ ಮಂಕಾದರು.
ಮತ ಬ್ಯಾಂಕ್ ರಾಜಕಾರಣಕ್ಕೆ ಸಂವಿಧಾನ ಬಲಿಕೊಟ್ಟಿದ್ದೇ ಕಾಂಗ್ರೆಸ್ ನೇತೃತ್ವದ ಆಡಳಿತವಿದ್ದಾಗ. ತುರ್ತು ಪರಿಸ್ಥಿತಿ ವೇಳೆ ದೇಶದ ಜನರ ಹಕ್ಕುಗಳನ್ನು ಮೊಟಕುಗೊಳಿಸಿದರು. ಸಂವಿಧಾನಕ್ಕೆ 60 ವರ್ಷದಲ್ಲಿ 70 ಬಾರಿ ತಿದ್ದುಪಡಿ ತಂದಿದ್ದಾರೆ.
ಕಾಂಗ್ರೆಸ್ ನ ಪ್ರತಿ ಸವಾಲಿಗೂ ನಮೋ ಖಡಕ್ಕಾಗಿಯೇ ಉತ್ತರ ನೀಡಿದರು.
ಇಂದಿರಾ ಗಾಂಧಿ ವಿರುದ್ಧ ತೀರ್ಪು ಕೊಟ್ಟಾಗ ಸುಪ್ರೀಂಕೋರ್ಟ್ ಜಡ್ಜ್ ಸಿಜೆಐ ಆಗಿರಲಿಲ್ಲ. ಸಂವಿಧಾನಕ್ಕೆ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗಲೂ ಹೊಡೆತ ನೀಡಿದರು. ವೋಟ್ ಬ್ಯಾಂಕ್ ಗಾಗಿ ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ
ಮಾಡಿದರು. ಸಂವಿಧಾನಕ್ಕೆ ಬೆಲೆ ಕೊಡಲಿಲ್ಲ. ಗಾಂಧಿ ಕುಟುಂಬದಿಂದ ಸಂವಿಧಾನಕ್ಕೆ ಆಗಿರುವ ಅಪಚಾರ ಅಷ್ಟಿಷ್ಟಲ್ಲ ಎಂದು ವಾಗ್ದಾಳಿ ನಡೆಸಿದರು.