SUDDIKSHANA KANNADA NEWS/ DAVANAGERE/ DATE:25-06-2024
ಬೆಂಗಳೂರು: ನಂದಿನಿ ಹಾಲಿನ ದರವನ್ನು ಎರಡು ರೂಪಾಯಿ ಹೆಚ್ಚಿಸಲಾಗಿದೆ ಎಂದು ಕೆ ಎಂ ಎಫ್ ತಿಳಿಸಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆಯೇ ಈಗ ಕಾಂಗ್ರೆಸ್ ಸರ್ಕಾರ ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ನಂದಿನಿ ಹಾಲಿನ ಪ್ಯಾಕೇಟ್ ಗೆ 50 ಮಿಲಿ ಲೀಟರ್ ಹೆಚ್ಚುವರಿಯಾಗಿ ನೀಡಲಾಗುವುದು ಎಂದು ತಿಳಿಸಿದೆ. ಮೊಸರು. ಇನ್ನಿತರೆ ವಸ್ತುಗಳ ಮೇಲೆ ಯಾವುದೇ ದರ ಏರಿಕೆ ಮಾಡಲಾಗಿಲ್ಲ. ನಾಳೆಯಿಂದಲೇ ಹೊಸ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ತಿಳಿಸಿದೆ.
ಮೊದಲೇ ದರ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಈ ನಡುವೆ ಹಾಲಿನ ದರ ಹೆಚ್ಚಿಸುತ್ತಿರುವುದಕ್ಕೆ ಜನರ ಅಕ್ರೋಶಕ್ಕೂ ಕಾರಣವಾಗಿದೆ. ಒಂದು ಲೀಟರ್ ಹಾಲು ಮೊದಲಿಗೆ 42 ರೂಪಾಯಿ ಇತ್ತು. ಆದ್ರೆ, ಈಗ 44 ರೂಪಾಯಿ ಆಗಿದೆ. ಅರ್ಧ ಲೀಟರ್ ಹಾಲು ಮೊದಲಿಗೆ 22 ರೂಪಾಯಿ ಇತ್ತು. ಈಗ 24 ರೂಪಾಯಿ ಆಗಿದೆ. ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಿಸಿರುವುದರಿಂದ ಜನರು ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ತರಕಾರಿ ಬೆಲೆ ಗಗನಕ್ಕೇರಿದೆ. ಪೆಟ್ರೋಲ್, ಡೀಸೆಲ್ ದರವೂ ಹೆಚ್ಚಾಗಿದೆ. ಈ ನಡುವೆ ಹಾಲಿನ ದರ ಏರಿಕೆ ಮಾಡಿರುವುದು ಜನರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ.