SUDDIKSHANA KANNADA NEWS/ DAVANAGERE/ DATE:15-10-2023
ದಾವಣಗೆರೆ: ನೀವು ಇಟ್ಟುಕೊಂಡಿರುವ ನಿರೀಕ್ಷೆಗೆ ಹುಸಿಯಾಗದಂತೆ ನಿಮ್ಮ ಕಷ್ಟ, ಸುಖಗಳಲ್ಲಿ ಭಾಗಿಯಾಗುವ ಮೂಲಕ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದು ಮಾಯಕೊಂಡ (Mayakonda) ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
READ ALSO THIS STORY:
Davanagere: ಬೆಣ್ಣೆನಗರಿಯಾಯ್ತು ಕೇಸರಿಲೋಕ, ಹಿಂದೂ ಮಹಾಗಣಪತಿ ಶೋಭಯಾತ್ರೆಯಲ್ಲಿ ಹುಚ್ಚೆದ್ದು ಕುಣಿದ ಯುವತಿಯರು…!
ಮಾಯಕೊಂಡ (Mayakonda) ಕ್ಷೇತ್ರದ ವ್ಯಾಪ್ತಿಯ ಗೋಪನಾಳು ಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಗೋಪನಾಳು ಗ್ರಾಮದಲ್ಲಿ ಬಸವಂತಪ್ಪ, ಮತ ತೆಗೆದುಕೊಳ್ಳುವುದು ಬಹಳ ಕಷ್ಟ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ಗ್ರಾಮದ ಮತ ಬಂಧುಗಳು ಕ್ಷೇತ್ರದಲ್ಲೇ ಅತೀ ಹೆಚ್ಚು ಮತ ನೀಡಿ ನನ್ನನ್ನು ಇವತ್ತು ವಿಧಾನಸೌಧಕ್ಕೆ ಆಯ್ಕೆ ಮಾಡಿ ಕಳುಹಿಸಿದ್ದೀರಿ. ನಿಮ್ಮ ಋಣ ತೀರಿಸಲು ಸದಾ ಬದ್ಧನಾಗಿರುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ನಾಗರಾಜ್, ಉಪಾಧ್ಯಕ್ಷ ಶೇಖರಪ್ಪ, ಮುಖಂಡರಾದ ನೂರಲ್ಲ ಖಾನ್, ಲಿಂಗರಾಜ್, ಪ್ರವೀಣ್, ಅಂಜಿನಪ್ಪ, ಹನುಮಂತಪ್ಪ, ರಾಮಪ್ಪ, ಶರಣಪ್ಪ, ಹಜರತ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಗೋಪನಾಳು ಗ್ರಾಮದಲ್ಲಿ ಸಂಚರಿಸಿ ಗ್ರಾಮಸ್ಥರ ಅಹವಾಲು ಆಲಿಸಿದರು. ಬಳಿಕ ಸರ್ಕಾರಿ ಶಾಲೆ ಮತ್ತು ಕಾಲೇಜಿಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳ ಸಮಸ್ಯೆ, ಶಾಲೆಯ ಕೊಠಡಿ ಸಮಸ್ಯೆ, ಗುಣಮಟ್ಟದ ಶಿಕ್ಷಣ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.