Home ಕ್ರೈಂ ನ್ಯೂಸ್ ಸಂತು ಮನೆ ಬಳಿ ‘ಸೈಕೋ’ ಮಂಜ ದಾದಾಗಿರಿ: ವೃದ್ಧ ತಾಯಿಯ ಮೇಲೆಯೇ ಸೈಕಲ್ ಎಸೆದು ರಂಪಾಟ, ಹುಳಿಮಾವು ಠಾಣೆಯಲ್ಲಿ ಕೇಸ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಸಂತು ಮನೆ ಬಳಿ ‘ಸೈಕೋ’ ಮಂಜ ದಾದಾಗಿರಿ: ವೃದ್ಧ ತಾಯಿಯ ಮೇಲೆಯೇ ಸೈಕಲ್ ಎಸೆದು ರಂಪಾಟ, ಹುಳಿಮಾವು ಠಾಣೆಯಲ್ಲಿ ಕೇಸ್!

Share
ಸಂತು
Share

ಬೆಂಗಳೂರು: ಬೆಂಗಳೂರಿನ ಹುಳಿಮಾವು ಬಳಿಯ ಬಸವನಪುರದಲ್ಲಿ ಸೋಶಿಯಲ್ ಮೀಡಿಯಾ ಪ್ರಸಿದ್ಧ ಮಂಜು ಎಂಬಾತ ಹೆಂಡತಿ ಲೀಲಾ ಮತ್ತೆ ಪ್ರೇಮಿ ಸಂತು ಜೊತೆ ಓಡಿಹೋಗಿದ್ದಾಳೆ ಎಂಬ ಕೋಪದಲ್ಲಿ ಸಂತು ಮನೆ ಮೇಲೆ ದಾಳಿ ನಡೆಸಿದ್ದಾನೆ.

ಕಂಠಪೂರ್ತಿ ಕುಡಿದು ಬಂದು ದಾದಾಗಿರಿ ನಡೆಸಿದ ಮಂಜ, ಸಂತು ತಾಯಿಯ ಮೇಲೆ ಸೈಕಲ್ ಎಸೆದು ದರ್ಪ ತೋರಿದ್ದು, ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಮಂಜನ ವಿರುದ್ಧ ದೂರು ದಾಖಲಾಗಿದೆ.

ಹಿಂದೆಯೂ ಗಂಡ-ಮಕ್ಕಳನ್ನು ಬಿಟ್ಟು ಸಂತು ಜೊತೆ ತೆರಳಿದ್ದ ಲೀಲಾಗಾಗಿ ಮಂಜ ಕಣ್ಣೀರಿಟ್ಟು “ಲೀಲಾ ನನ್ ಫ್ಲೇವರ್” ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ. ಬಳಿಕ ಒಂದಾದ ಈ ಜೋಡಿ ರೀಲ್ಸ್ ಹಾಗೂ ಪ್ರಚಾರಗಳ ಮೂಲಕ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ಒಂದೂವರೆ ತಿಂಗಳ ಹಿಂದೆ ಮತ್ತೆ ಇಬ್ಬರ ನಡುವೆ ಗಲಾಟೆಯಾಗಿ ಲೀಲಾ ಮನೆ ತೊರೆದಿದ್ದು, ಈಗ ಮತ್ತೆ ಈ ವಿವಾದ ಪೊಲೀಸ್ ಮೆಟ್ಟಿಲೇರಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles