Home ಕ್ರೈಂ ನ್ಯೂಸ್ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ದೇಶದ್ರೋಹ ವಿಚಾರಣೆ ನಡೆಸಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ದೇಶದ್ರೋಹ ವಿಚಾರಣೆ ನಡೆಸಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ

Share
ಮಲ್ಲಿಕಾರ್ಜುನ ಖರ್ಗೆ
Share

ನವದೆಹಲಿ: ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದು, ಮತ ಕಳವಿಗೆ ನೆರವಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ‘ಇಂಡಿಯಾ’  ಮೈತ್ರಿಕೂಟ ನವದೆಹಲಿಯಲ್ಲಿ ಆಯೋಜಿಸಿದ್ದ ಸಂಕೇತಿಕ ಸಾರ್ವಜನಿಕ ಮಹಾಭಿಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ್ಞಾನೇಶ್ ಕುಮಾರ್ ವಿರುದ್ಧ ದೇಶದ್ರೋಹದ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಖರ್ಗೆ ಅವರ ನಿವಾಸದಲ್ಲಿ ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು. ಮುಖ್ಯ ಚುನಾವಣೆ ಆಯುಕ್ತರನ್ನು ಹುದ್ದೆಯಿಂದ ವಜಾಗೊಳಿಸಬೇಕು ಹಾಗೂ ಸಂವಿಧಾನಾತ್ಮಕ ಸಂಸ್ಥೆಯ ಘನತೆಯನ್ನು ಎತ್ತಿಹಿಡಿಯಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳ ಮೈತ್ರಿಕೂಟ ಈ ಪ್ರತಿಭಟನಾತ್ಮಕ ವಿಚಾರಣೆಯನ್ನು ಸಂಘಟಿಸಿತ್ತು.

ಚುನಾವಣೆ ಕಳವಿಗ ಹುನ್ನಾರ: ಸಿಇಸಿ ಜ್ಞಾನೇಶ್ ಕುಮಾರ್ ಅವರು ಚುನಾವಣಾ ಅಕ್ರಮ ಹಾಗೂ ಮತ ಕಳವಿಗೆ ನೇರವಾಗಿ ನೆರವಾಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

13.2 ಕೋಟಿ ಮತದಾರರ ಹೆಸರು ತೆಗೆತ: ದೇಶದಾದ್ಯಂತ ಸುಮಾರು 13.2 ಕೋಟಿ ಸಿಂಧು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಸಂಸತ್ತಿನ ಅನುಮತಿಯಿಲ್ಲದೆ ಫಾರ್ಮ್-6 ತಿದ್ದುಪಡಿ: ಸಂಸತ್ತಿನ ಒಪ್ಪಿಗೆ ಪಡೆಯದೇ ಚುನಾವಣಾ ಆಯೋಗವು ಫಾರ್ಮ್ 6 ರ ನಿಯಮಗಳನ್ನು ಬದಲಾಯಿಸಿದೆ.

ECINET ಮೂಲಕ ಮತದಾರರ ಪಟ್ಟಿ ವಶ: ECINET ಡಿಜಿಟಲ್ ವೇದಿಕೆಯ ಮೂಲಕ ಸಂಪೂರ್ಣ ಮತದಾರರ ಪಟ್ಟಿಯನ್ನು ಆಯೋಗ ತನ್ನ ಹತೋಟಿಗೆ ತೆಗೆದುಕೊಂಡಿದೆ.

ಆಯುಕ್ತರ ಕಡೆಗಣನೆ ಹಾಗೂ ರಾಜಕೀಯ ಒತ್ತಡ: ಇತರ ಇಬ್ಬರು ಚುನಾವಣೆ ಆಯುಕ್ತರನ್ನು ನಿರ್ಧಾರಗಳಿಂದ ದೂರವಿಟ್ಟು, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ನಿರ್ದೇಶನದಂತೆ ಸಿಇಸಿ ಕಾರ್ಯನಿರ್ವಹಿಸುತ್ತಿದ್ದಾರೆ.

2014 ರಿಂದಲೂ ಬಿಜೆಪಿ ಸರ್ಕಾರವು ಅಧಿಕಾರ ಉಳಿಸಿಕೊಳ್ಳಲು ಶಾಸಕರ ಖರೀದಿ, ಇಡಿ ಮತ್ತು ಸಿಬಿಐ ದುರ್ಬಳಕೆ ಹಾಗೂ ಇವಿಎಂ ಅಕ್ರಮಗಳಂತಹ ನಾನಾ ಹುನ್ನಾರಗಳನ್ನು ನಡೆಸುತ್ತಿದೆ ಎಂದು ಖರ್ಗೆ ದೂರಿದರು. 2023ರಲ್ಲಿ 145 ಸಂಸದರನ್ನು ಅಮಾನತುಗೊಳಿಸಿ ತಂದ ನೂತನ ಚುನಾವಣಾ ಆಯುಕ್ತರ ಕಾಯ್ದೆಯು ಆಯುಕ್ತರಿಗೆ ಅನಗತ್ಯ ಕಾನೂನು ರಕ್ಷಣೆ ನೀಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles