Home ಕ್ರೈಂ ನ್ಯೂಸ್ ಆಶ್ರಮ ಶಾಲೆಯ ಅಡುಗೆ ಸಹಾಯಿಯಿಂದ 22 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ದೆಯಡಿ ಆರೋಪಿ ಅರೆಸ್ಟ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಆಶ್ರಮ ಶಾಲೆಯ ಅಡುಗೆ ಸಹಾಯಿಯಿಂದ 22 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ದೆಯಡಿ ಆರೋಪಿ ಅರೆಸ್ಟ್!

Share
ಆಶ್ರಮ
Share

ಮಹಾರಾಷ್ಟ್ರ: ಥಾಣೆ ಜಿಲ್ಲೆಯ ಶಾಹಪುರ ತಾಲ್ಲೂಕಿನ ಟೆಂಭೆ ಗ್ರಾಮದಲ್ಲಿರುವ ಸರಕಾರಿ ಆದಿವಾಸಿ ಆಶ್ರಮ ಶಾಲೆಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಗಣಪತ್ ಗವಳಿ (35/59) ಎಂಬಾತ, 6ನೇ ತರಗತಿಯಿಂದ 10ನೇ ತರಗತಿಯವರೆಗೆ ಓದುತ್ತಿದ್ದ ಬಾಲಕಿಯರ ಮೇಲೆ ನಿರಂತರವಾಗಿ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಊಟದ ಪಾತ್ರೆಗಳನ್ನು ತೊಳೆಯಲು ಅಡುಗೆಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರಿಗೆ ಈಾತ ಕಿರುಕುಳ ನೀಡುತ್ತಿದ್ದಾನೆ ಎಂದು ಬಾಲಕಿಯರು ಆರೋಪಿಸಿದ್ದಾರೆ. ಆಗಸ್ಟ್ 24 ರಂದು ವಿದ್ಯಾರ್ಥಿನಿಯೊಬ್ಬಳು ಮೊದಲು ಶಾಲೆಯ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ ನಂತರ ಈ ಪ್ರಕರಣ ಹೊರಬಂದಿದೆ. ಬಳಿಕ ಒಟ್ಟು 22 ವಿದ್ಯಾರ್ಥಿನಿಯರು ಧೈರ್ಯ ಮಾಡಿ ಲکتಿತ ದೂರು ದಾಖಲಿಸಿದ್ದಾರೆ.

ಹಳೆಯ ಪ್ರಕರಣದ ಮುಂದುವರಿದ ಭಾಗ:

ಆರೋಪಿ ಗವಳಿ ವಿರುದ್ಧ 2024ರಲ್ಲಿ ಮತ್ತೊಂದು ಆಶ್ರಮ ಶಾಲೆಯಲ್ಲೂ ಇದೇ ರೀತಿಯ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಆ ಸಮಯದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ ಈತನನ್ನು ಮತ್ತೆ ಇಲಾಖೆಯು ಮರುನೇಮಕ ಮಾಡಿಕೊಂಡಿದ್ದು ಈಗ ವ್ಯಾಪಕ ಟೀಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಶಾಹಪುರ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ.

Share

Leave a comment

Leave a Reply

Your email address will not be published. Required fields are marked *

Related Articles