Home ದಾವಣಗೆರೆ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ದಾವಣಗೆರೆಯ ಪ್ರತಿಭೆ ಕುಂದುವಾಡ ಮೋನಿಕಾ!
ದಾವಣಗೆರೆಕ್ರೀಡೆಬೆಂಗಳೂರು

ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ದಾವಣಗೆರೆಯ ಪ್ರತಿಭೆ ಕುಂದುವಾಡ ಮೋನಿಕಾ!

Share
ದಾವಣಗೆರೆ
Share

ದಾವಣಗೆರೆ : ನಗರದ ಹಳೇ ಕುಂದುವಾಡ ಗ್ರಾಮದ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ 200 ಮೀಟರ್ ಓಟದಲ್ಲಿ ಪ್ರಥಮ, 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.

ಗ್ರಾಮದ ದಿಲೀಪ್, ಜ್ಯೋತಿ ದಂಪತಿಯ ಪುತ್ರಿಯಾಗಿರುವ ಮೋನಿಕಾ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು, ಜಿಲ್ಲಾ ಹಂತದ ಸ್ಪರ್ಧೆಯಲ್ಲಿ ಜಯಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಈ ಹಿನ್ನಲೆ ವಾಲ್ಮೀಕಿ‌ ಜಯಂತಿ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ರಾಜ್ಯಮಟ್ಟದಲ್ಲು ಸಹ ಗೆದ್ದು ಗ್ರಾಮಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ‌ ತರಲಿ ಎಂದು ಗ್ರಾಮಸ್ಥರು ಶುಭ ಕೋರಿದ್ದಾರೆ.

  • ಕ್ರೀಡಾ ಸಾಧನೆ: 200 ಮೀಟರ್ ಓಟದಲ್ಲಿ ಪ್ರಥಮ ಹಾಗೂ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಭರ್ಜರಿ ಜಯ ಗಳಿಸಿದ ವಿದ್ಯಾರ್ಥಿನಿ.

  • ರಾಜ್ಯಮಟ್ಟಕ್ಕೆ ಆಯ್ಕೆ: ಜಿಲ್ಲಾ ಹಂತದ ಸ್ಪರ್ಧೆಯಲ್ಲಿ ದಿಟ್ಟ ಪ್ರದರ್ಶನ ನೀಡಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಸರ್ಕಾರಿ ಶಾಲೆ ಪ್ರತಿಭೆ.

  • ಗ್ರಾಮಸ್ಥರಿಂದ ಸನ್ಮಾನ: ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಹಳೇ ಕುಂದುವಾಡ ಶಾಲೆಯ ವಿದ್ಯಾರ್ಥಿನಿಗೆ ಗ್ರಾಮದ ಮುಖಂಡರು ಹಾಗೂ ಶಿಕ್ಷಕರಿಂದ ಅದ್ಧೂರಿ ಅಭಿನಂದನೆ.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕೆಪಿ ಬಸವರಾಜಪ್ಪ, ಹೆಚ್ ಜಿ ದೊಡ್ಡಪ್ಪ, ಹೆಚ್ ಎನ್ ಗುರುನಾಥ್, ಹೆಚ್ ಜಿ ಗಣೇಶಪ್ಪ, ಜಿಮ್ಮಿ‌ ಹನುಮಂತಪ್ಪ, ಜೆಎನ್ ಮಾರುತಿ, ಜೆಸಿ ದೇವರಾಜ್, ಹೆಚ್ ಜಿ ಮಂಜಪ್ಪ, ಡಿಎಸ್ ಎಸ್ ಮಂಜುನಾಥ್, ಎಸ್ ಡಿಎಂಸಿ ಸಮಿತಿಯವರಾದ ಗದಿಗೇಶಪ್ಪ, ರಾಮಪ್ಪ ಎನ್, ಬೆಳ್ಳೂಡಿ ಮಂಜುನಾಥ್, ಸಂಪತ್ ಕುಮಾರ್, ಅಕ್ಕಿ ಬಸವರಾಜ್, ಅಕ್ಕಿ ಸೋಮಣ್ಣ, ಶಾಲಾ ಮುಖ್ಯೋಪಾಧ್ಯಯರು, ಸಹ ಶಿಕ್ಷಕರು, ಮತ್ತು ಪೋಷಕರು, ಗ್ರಾಮಸ್ಥರು ಶುಭ ಹಾರೈಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *