Home ದಾವಣಗೆರೆ ಸಾರ್ವಜನಿಕ ಸ್ಥಳವಲ್ಲದಿದ್ದರೆ ಜಯಲಕ್ಷ್ಮಿಗೆ ಕಿಸ್ ಕೊಟ್ಟಂತೆ ಮಲ್ಲಿಕಾರ್ಜುನ್‌ಗೆ ಕೊಡುತ್ತಿದ್ದ ರೇಣುಕಾಚಾರ್ಯ ಎಂದ್ರು ಬಿಪಿ ಹರೀಶ್: ಬಿಜೆಪಿ ಶಾಸಕನಿಗೆ ತಲೆ ಕೆಟ್ಟಿದೆ ಎಂದ ರೇಣುಕಾಚಾರ್ಯ!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ಸಾರ್ವಜನಿಕ ಸ್ಥಳವಲ್ಲದಿದ್ದರೆ ಜಯಲಕ್ಷ್ಮಿಗೆ ಕಿಸ್ ಕೊಟ್ಟಂತೆ ಮಲ್ಲಿಕಾರ್ಜುನ್‌ಗೆ ಕೊಡುತ್ತಿದ್ದ ರೇಣುಕಾಚಾರ್ಯ ಎಂದ್ರು ಬಿಪಿ ಹರೀಶ್: ಬಿಜೆಪಿ ಶಾಸಕನಿಗೆ ತಲೆ ಕೆಟ್ಟಿದೆ ಎಂದ ರೇಣುಕಾಚಾರ್ಯ!

Share
ರೇಣುಕಾಚಾರ್ಯ
Share

ದಾವಣಗೆರೆ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದ ದಿನ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ಕಾಂಗ್ರೆಸ್ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಘಟನೆಯು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಪಕ್ಷದೊಳಗಿನ ಬಣ ರಾಜಕೀಯ ಹಾಗೂ ಆಂತರಿಕ ಭಿನ್ನಮತ ಬಹಿರಂಗಗೊಂಡಿದ್ದು, ಹರಿಹರ ಶಾಸಕ ಬಿ.ಪಿ. ಹರೀಶ್ ಅವರು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಅತ್ಯಂತ ತೀವ್ರ ಹಾಗೂ ವಿವಾದಾತ್ಮಕ ಪದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಹರೀಶ್, “ಸಾರ್ವಜನಿಕ ಸ್ಥಳವಲ್ಲದಿದ್ದರೆ ಮಲ್ಲಿಕಾರ್ಜುನ್‌ಗೆ ನರ್ಸ್ ಜಯಲಕ್ಷ್ಮಿಗೆ ಕೊಟ್ಟಂತೆ ರೇಣುಕಾಚಾರ್ಯ ಕಿಸ್ ಕೊಡುತ್ತಿದ್ದ!” ಎಂದು ಕಿಡಿಕಾರಿದ್ದಾರೆ. ಕಳೆದ ಆರು ತಿಂಗಳಿಂದ ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ ನಿಷ್ಠಾವಂತ ಕಾರ್ಯಕರ್ತರಿಗೆ ಈ ಘಟನೆ ತೀವ್ರ ನೋವುಂಟು ಮಾಡಿದೆ ಎಂದಿರುವ ಅವರು, ಶಾಮನೂರು ಶಿವಶಂಕರಪ್ಪ ಅವರ ಕುಟುಂಬವನ್ನು ಬಿಜೆಪಿಯ ‘ಬಿ ಟೀಂ’ ಎಂದು ಜರಿದರು. ತಮ್ಮ ಮಕ್ಕಳಿಗೆ ವೈದ್ಯಕೀಯ ಸೀಟುಗಳನ್ನು ಪಡೆದುಕೊಳ್ಳುವ ಸ್ವಾರ್ಥದ ಉದ್ದೇಶದಿಂದ ರೇಣುಕಾಚಾರ್ಯ ಅವರು ಶಾಮನೂರು ಕುಟುಂಬದ ಪರ ನಿಂತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿದರು.

ಕಾರ್ಯಕರ್ತರ ಆಕ್ರೋಶಕ್ಕೆ ಬೆಂಬಲ:

ಚುನಾವಣೆ ವೇಳೆ ವಿಪಕ್ಷ ನಾಯಕರ ಕಾಲಿಗೆ ಬೀಳುವ ವರ್ತನೆಯಿಂದ ಪಕ್ಷಕ್ಕಾಗಿ ಶ್ರಮಿಸಿದ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿದೆ ಎಂದು ಬಿ.ಪಿ. ಹರೀಶ್ ಕಳವಳ ವ್ಯಕ್ತಪಡಿಸಿದರು.

ರೇಣುಕಾಚಾರ್ಯ ವಿರುದ್ಧ ತೀವ್ರ ವಾಗ್ದಾಳಿ:

ವೈಯಕ್ತಿಕ ಹಾಗೂ ಸ್ವಾರ್ಥ ರಾಜಕಾರಣಕ್ಕಾಗಿ ಶಾಮನೂರು ಕುಟುಂಬದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಬಿಜೆಪಿಯಲ್ಲಿ ಕದನ:

ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಬಣ ರಾಜಕೀಯ ಹಾಗೂ ಹೊಂದಾಣಿಕೆ ರಾಜಕಾರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಮುಖಂಡರ ಪರಸ್ಪರ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಇದೇ ಬಣವೇ ಕಾರಣ ಎಂಬ ಆರೋಪಗಳಿದ್ದು, ಪ್ರಸ್ತುತ ಬೆಳವಣಿಗೆಯು ದಾವಣಗೆರೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಇನ್ನು ಎಂಪಿ ರೇಣುಕಾಚಾರ್ಯ ಅವರು ಶಾಸಕ ಬಿಪಿ ಹರೀಶ್ ಹೇಳಿಕೆಗೆ ಕೆಂಡಮಂಡಲರಾಗಿದ್ದಾರೆ. ತಾನೊಬ್ಬನೆ ಜಿಲ್ಲೆಯಲ್ಲಿ ಬಿಜೆಪಿ ಶಾಸಕನಿರುವುದು ಎಂದು ತಲೆಗೆ ಏರಿದೆ. ಆತನ ತಲೆ ಕೆಟ್ಟಿದೆ ಎಂದು ತಿರುಗೇಟು ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *