ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಕಿಲಾಂ (Kilam) ಪ್ರದೇಶದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿರುವ ಗುಂಡಿನ ದಾಳಿಯಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ವರದಿಗಳ ಪ್ರಕಾರ, ಇಟ್ಟಿಗೆ ಭಟ್ಟಿಯಲ್ಲಿದ್ದ ಹಲವು ವಲಸೆ ಕಾರ್ಮಿಕರನ್ನು ತಡೆದು ನಿಲ್ಲಿಸಿದ ಉಗ್ರರು, ಅವರ ಹೆಸರು ಮತ್ತು ಗುರುತನ್ನು ಕೇಳಿದ್ದಾರೆ. ಬಳಿಕ ಹಿಂದೂ ಕಾರ್ಮಿಕರನ್ನು ಪ್ರತ್ಯೇಕಿಸಿ ಅವರ ಮೇಲೆ ನೇರವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಗೊಳಗಾದ ಕಾರ್ಮಿಕರನ್ನು ಛತ್ತೀಸ್‌ಗಢ ಮೂಲದ ದೀಪಕ್ ಮತ್ತು ಭೂಪೇಂದ್ರ ಎಂದು ಗುರುತಿಸಲಾಗಿದೆ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಭದ್ರತಾ ಪಡೆಗಳು ಇಡೀ ಕಿಲಾಂ ಪ್ರದೇಶವನ್ನು ಸುತ್ತುವರಿದಿದ್ದು, ದಾಳಿ ನಡೆಸಿ ಪರಾರಿಯಾಗಿರುವ ಉಗ್ರರಿಗಾಗಿ ತೀವ್ರ ಶೋಧ ಕಾರ್ಯಾಚರಣೆ (Cordon and Search Operation) ಆರಂಭಿಸಿವೆ. ಈ ದಾಳಿಯು ಪಹಲ್ಗಾಮ್ ಮಾದರಿಯಲ್ಲೇ ನಡೆದ ನಿಖರ ದಾಳಿಯಾಗಿದೆ ಎಂದು ಶಂಕಿಸಲಾಗಿದೆ.
- Chhattisgarh workers killed in Kashmir
- Jammu and Kashmir targeted killing
- Jammu Kashmir latest news
- Kashmir brick kiln attack
- Kashmir terrorist attack 2026
- Kilam Kulgam search operation
- Kulgam migrant workers shot
- Kulgam terror attack
- ಕಾಶ್ಮೀರ ವಲಸೆ ಕಾರ್ಮಿಕರು
- ಕಾಶ್ಮೀರ ಶೋಧ ಕಾರ್ಯಾಚರಣೆ
- ಕುಲ್ಗಾಂ ಉಗ್ರರ ದಾಳಿ
- ಕುಲ್ಗಾಂ ಸುದ್ದಿ
- ಛತ್ತೀಸ್‌ಗಢ ಕಾರ್ಮಿಕರ ಸಾವು
- ಜಮ್ಮು ಕಾಶ್ಮೀರ ಭಯೋತ್ಪಾದನೆ
- ವಲಸೆ ಕಾರ್ಮಿಕರ ಹತ್ಯೆ






Leave a comment