ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

60 ವರ್ಷದ ವೃದ್ದನನ್ನು ಅಪಹರಿಸಿ 20 ಲಕ್ಷ ರೂ.ಗೆ ಬೇಡಿಕೆ ಇಟ್ಟ ಪಾಪಿಗಳು: 24 ಗಂಟೆಯೊಳಗಿನ ಪೊಲೀಸ್ ಆಪರೇಷನ್ ಹೇಗಿತ್ತು, ಮುಂದೇನಾಯ್ತು…?

On: June 3, 2023 4:52 AM
Follow Us:
---Advertisement---

SUDDIKSHANA KANNADA NEWS| DAVANAGERE| DATE:02-06-2023

ದಾವಣಗೆರೆ (DAVANAGERE) : ವ್ಯಕ್ತಿ ಅಪಹರಣ‌ (KIDNAP) ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜೂ.1ರ ಮಧ್ಯಾಹ್ನದ ಸಮಯದಲ್ಲಿ ಅಂಬಿಕಾ ನಗರದ ಶೇಕಪ್ಪ ಗೋಡೌನ್ ಎದುರಿಗೆ 60 ವರ್ಷದ ಲೋಕೇಶ್ ಎಂಬುವವರನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಮಾತ್ರವಲ್ಲ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಕುರಿತಂತೆ ಲೋಕೇಶ್ ರ ಪುತ್ರ ನಾಗರಾಜ್ ಕೆಟಿಜೆ ನಗರ ಪೊಲೀಸ್ ಠಾಣೆ (KTJ NAGARA POLICE STATION) ಗೆ ದೂರು ನೀಡಿದ್ದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP) ಆರ್. ಬಿ. ಬಸರಗಿ ಹಾಗೂ ದಾವಣಗೆರೆ ಗ್ರಾಮಾಂತರ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿವಾಲ್, ನಗರ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ನಿರೀಕ್ಷಕ ಯು. ಜೆ. ಶಶಿಧರ್, ಸಂಚಾರ ವೃತ್ತ ನಿರೀಕ್ಷಕ ಅನಿಲ್, ಬಸವನಗರ ಪೊಲೀಸ್ ನಿರೀಕ್ಷಕ ಆರ್. ಆರ್. ಪಾಟೀಲ್ , ಚನ್ನಗಿರಿ ಪೊಲೀಸ್ ನಿರೀಕ್ಷಕ ಮಧು, ಸಂತೇಬೆನ್ನೂರು ಪೊಲೀಸ್ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಕೆಟಿಜೆ ನಗರ ಪಿಎಸ್ ಐ (PSI) ಎಸ್.ಆರ್.ಕಾಟೇ ಹಾಗೂ ಸಿಬ್ಬಂದಿ ತಂಡ ಪತ್ತೆ ಕಾರ್ಯ ಕೈಗೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯ ನಿಟುವಳ್ಳಿಯ ಸಾಗರ್ (23), ನಂದಿಹಳ್ಳಿ ಗ್ರಾಮ ಯುವರಾಜ (30), ಸುಂದರ್‌ ನಾಯ್ಕ (21), ಚೇತನ್ ಕುಮಾರ್ (27), ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ವ್ಯಕ್ತಿಯನ್ನು ಸೇರಿದಂತೆ ಐವರನ್ನು ಚನ್ನಗಿರಿ ತಾಲೂಕಿನ ಅಂತಪುರ ಗ್ರಾಮದ ಬಳಿ ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ.

ಅಪಹರಣಕ್ಕೊಳಗಾದ ಲೋಕೇಶ್ ಅವರನ್ನು ರಕ್ಷಿಸಲಾಗಿದೆ. ಕೃತ್ಯಕ್ಕೆ ಆರೋಪಿಗಳು ಬಳಸಿದ್ದ ಒಂದು ಇಟಿಯಾಸ್ ಕಾರು ಹಾಗೂ ಯಮಹಾ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಅಪಹರಣ (KIDNAP) ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಪ್ರಕರಣದ ಆರೋಪಿತರ ಪತ್ತೆ ಕಾರ್ಯ ಹಾಗೂ ಅಪಹರಣಕ್ಕೊಳಗಾಗಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ‌. ಈ ಪ್ರಕರಣದಲ್ಲಿ ಆರೋಪಿತರ ಪತ್ತೆ ಹಾಗೂ ಅಪಹರಣಕ್ಕೊಳಗಾದ ವ್ಯಕ್ತಿಯ ರಕ್ಷಣೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಳ ತಂಡ ಸೇರಿದಂತೆ ಸಿಬ್ಬಂದಿಯಾದ ಪ್ರಕಾಶ್, ಶಂಕರ್ ಜಾಧವ್, ಮಂಜಪ್ಪ, ರವಿ ಲಮಾಣಿ, ಷಣ್ಮುಖ, ಮಂಜನಗೌಡ, ಬಿ. ಆರ್. ರವಿ, ಬಸವರಾಜ್, ಹರೀಶ್ ನಾಯ್ಕ, ತಿಮ್ಮಣ್ಣ, ಶ್ರೀನಿವಾಸ್, ರಾಘವೇಂದ್ರ, ಶಾಂತರಾಜ್, ಡಿಸಿಐಬಿ ಘಟಕದ ಸಿಬ್ಬಂದಿಯಾದ ಬಾಲಾಜಿ, ರಾಘವೇಂದ್ರ, ನಟರಾಜ್, ಮಲ್ಲಿಕಾರ್ಜುನ, ಮಾರುತಿ, ಅಶೋಕ್, ಆಂಜನೇಯ, ಸುರೇಶ್‌ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಅವರು ಶ್ಲಾಘಿಸಿದ್ದಾರೆ.

 

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment