Home ಕ್ರೈಂ ನ್ಯೂಸ್ ಮನೆಯಿಂದ ಹೊರಟು ಹೋಗು ಇಲ್ಲವೇ ಸತ್ತುಹೋಗು’: ಮದುವೆ ನಿರಾಕರಿಸಿದ್ದ ಯುವತಿ ಲೈವ್-ಇನ್ ಸಂಗಾತಿ ಕಿರುಕುಳಕ್ಕೆ ಬಲಿ, ನಾಲ್ವರ ಬಂಧನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಮನೆಯಿಂದ ಹೊರಟು ಹೋಗು ಇಲ್ಲವೇ ಸತ್ತುಹೋಗು’: ಮದುವೆ ನಿರಾಕರಿಸಿದ್ದ ಯುವತಿ ಲೈವ್-ಇನ್ ಸಂಗಾತಿ ಕಿರುಕುಳಕ್ಕೆ ಬಲಿ, ನಾಲ್ವರ ಬಂಧನ!

Share
ಮದುವೆ
Share

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ಬಾಪುನಗರ ಪ್ರದೇಶದಲ್ಲಿ ಮದುವೆಯಾಗಲು ನಿರಾಕರಿಸಿ, ನಿರಂತರವಾಗಿ ಕಿರುಕುಳ ಹಾಗೂ ‘ಸಾಯು ಇಲ್ಲವೇ ತೊಲಗು’ ಎಂದು ಹೀಯಾಳಿಸಿದ್ದಕ್ಕೆ ನೊಂದ 24 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ದಕ್ಷಾ ಪರ್ಮಾರ್ ಮೃತ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಲೈವ್-ಇನ್ ಪಾಲುದಾರ ಮಯೂರ್ ಪರ್ಮಾರ್ ಹಾಗೂ ಆತನ ಕುಟುಂಬದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಜನವರಿ 2023ರಿಂದ ಮಯೂರ್ ಜತೆ ಮದುವೆಯಾಗದೆ ಲೈವ್-ಇನ್ ಸಂಬಂಧದಲ್ಲಿದ್ದ ದಕ್ಷಾಗೆ ಎರಡೂವರೆ ವರ್ಷದ ಮಗನಿದ್ದಾನೆ. ಮದುವೆಗೆ ಒತ್ತಾಯಿಸಿದಾಗಲೆಲ್ಲ ಮಯೂರ್ ಜಾರಿಕೊಳ್ಳುತ್ತಿದ್ದು, ಆತನ ತಾಯಿ ಮಂಜು, ತಂಡಿ ಪ್ರವೀಣ್ ಹಾಗೂ ತಮ್ಮ ವಿಶಾಲ್ ದಕ್ಷಾಗೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು.

‘ಮನೆಯಿಂದ ಹೊರಟು ಹೋಗು ಇಲ್ಲವೇ ಸತ್ತು ಹೋಗು’ ಎಂದು ನಿಂದಿಸುತ್ತಿದ್ದರು ಎಂದು ಮೃತಳ ತಾಯಿ ನಂದಾಬೆನ್ ರಾಥೋಡ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳ ಬಂಧನ: ಸಂತ್ರಸ್ತೆ ದಕ್ಷಾ ತಾಯಿ ನೀಡಿದ ದೂರಿನ ಮೇರೆಗೆ ಬಾಪುನಗರ ಪೊಲೀಸರು ಮಯೂರ್ ಪರ್ಮಾರ್, ಆತನ ತಂದೆ-ತಾಯಿ ಹಾಗೂ ತಮ್ಮನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಕಿರುಕುಳದ ಹಿನ್ನೆಲೆ: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ಜತೆಯಾಗಿದ್ದ ದಕ್ಷಾಗೆ, ಮದುವೆ ವಿಚಾರ ಬಂದಾಗಲೆಲ್ಲ ಆರೋಪಿಗಳು ಹಲ್ಲೆ ನಡೆಸಿ ವರದಕ್ಷತೆ ಹಾಗೂ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ನಿಂದಿಸುತ್ತಿದ್ದರು.

ಕೊನೆಯ ಕರೆ: ನವೆಂಬರ್ 15ರಂದು ಬೆಳಿಗ್ಗೆ ಮಯೂರ್ ಜತೆ ಜಗಳವಾದಾಗ ತಾಯಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದ ದಕ್ಷಾ, ಅದೇ ದಿನ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ಮಗ ಆನಂದ್‌ನ ರಕ್ಷಣೆಯನ್ನು ಸದ್ಯ ಆಕೆಯ ತಾಯಿಗೆ ಒಪ್ಪಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 108 ಮತ್ತು 54 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles