Home ದಾವಣಗೆರೆ ಬಯೋಮೆಡಿಕಲ್ ರಿಸರ್ಚ್‌ನಿಂದ ಐಪಿಎಸ್‌ ಅಧಿಕಾರಿಯವರೆಗೆ: ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ನಿಹಾರಿಕಾ ಭಟ್!
ದಾವಣಗೆರೆನವದೆಹಲಿಬೆಂಗಳೂರು

ಬಯೋಮೆಡಿಕಲ್ ರಿಸರ್ಚ್‌ನಿಂದ ಐಪಿಎಸ್‌ ಅಧಿಕಾರಿಯವರೆಗೆ: ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ನಿಹಾರಿಕಾ ಭಟ್!

Share
ನಿಹಾರಿಕಾ ಭಟ್
Share

ನವದೆಹಲಿ: ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಬಯೋಮೆಡಿಕಲ್ ಇಂಜಿನಿಯರಿಂಗ್ ಓದಿ, ಅಮೆರಿಕದ ಎಫ್‌ಡಿಎ (US FDA) ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಿಹಾರಿಕಾ ಭಟ್ (Niharika Bhatt), ತಮ್ಮ ಮೊದಲ ಪ್ರಯತ್ನದಲ್ಲೇ ಸಿವಿಲ್ ಸರ್ವೀಸ್ ಪಾಸ್ ಮಾಡಿ ಐಪಿಎಸ್‌ ಅಧಿಕಾರಿಯಾಗಿ ಸಾಧನೆ ಮೆರೆದಿದ್ದಾರೆ.

ಪ್ರಸ್ತುತ 2015 ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅವರು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪೊಲೀಸ್ ಸಾಗರ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಸ್‌ಪಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಉತ್ತರ ಪ್ರದೇಶ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಮುಗಿಸಿದ ನಿಹಾರಿಕಾ, ಬಳಿಕ ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಬಯೋಮೆಡಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನ್ಯಾಷನಲ್ ಸೈನ್ಸ್ ಫೌಂಡೇಶನ್ (NSF) ಮತ್ತು ಯುಎಸ್ ಎಫ್‌ಡಿಎ ಸಂಶೋಧನಾ ಪ್ರಾಜೆಕ್ಟ್‌ನಲ್ಲಿ ನ್ಯಾನೊಪಾರ್ಟಿಕಲ್ಸ್ ಸುರಕ್ಷತೆ ಕುರಿತು ಅಧ್ಯಯನ ನಡೆಸಿದ್ದರು. ಈ ವೈಜ್ಞಾನಿಕ ವೃತ್ತಿಜೀವನವನ್ನು ತೊರೆದು 2015ರಲ್ಲಿ ಭಾರತೀಯ ಪೊಲೀಸ್ ಸೇವೆಗೆ (IPS) ಸೇರ್ಪಡೆಗೊಂಡರು.

ಶಿಕ್ಷಣ ಹಾಗೂ ವೃತ್ತಿಜೀವನ: ಅಮೆರಿಕದಲ್ಲಿ ನ್ಯಾನೊಪಾರ್ಟಿಕಲ್ಸ್ ಟಾಕ್ಸಿಲಜಿ ಹಾಗೂ ಕಾರ್ಡಿಯಾಕ್ ಸರ್ಜರಿ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸಿದ್ದ ನಿಹಾರಿಕಾ, ಮೊದಲ ಪ್ರಯತ್ನದಲ್ಲೇ ಐಪಿಎಸ್ ಅಧಿಕಾರಿಯಾದರು.

ಪ್ರಮುಖ ಹುದ್ದೆಗಳು: ಉತ್ತರಾಖಂಡದ ಡೆಹ್ರಾಡೂನ್, ಚಂಡೀಗಢ, ಪುದುಚೇರಿ ಹಾಗೂ ಕಾರೈಕಾಲ್‌ನಲ್ಲಿ ಎಸ್‌ಪಿ ಹಾಗೂ ಎಸ್‌ಎಸ್‌ಪಿಯಾಗಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಪ್ರಸ್ತುತ ಸೇವೆ: ಡಿಸೆಂಬರ್ 2024ರಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಎಸ್‌ಪಿ ಪೊಲೀಸ್ ಮರೈನ್ ಫೋರ್ಸ್, ಫೈರ್ ಅಂಡ್ ಎಮರ್ಜೆನ್ಸಿ ಸರ್ವಿಸ್ ಹಾಗೂ ಐಆರ್‌ಬಿಎನ್ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles