Home ದಾವಣಗೆರೆ ಅಕ್ಟೋಬರ್ 25ರ ಆರ್‌ಎಸ್‌ಎಸ್ ರೂಟ್ ಮಾರ್ಚ್ ಗೆ ಕೇವಲ ಮಾಹಿತಿ ನೀಡಿದರೆ ಸಾಲದು, ಅನುಮತಿ ಪಡೆಯಲೇಬೇಕು: ಪ್ರಿಯಾಂಕ್ ಖರ್ಗೆ ಕಟ್ಟಪ್ಪಣೆ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಅಕ್ಟೋಬರ್ 25ರ ಆರ್‌ಎಸ್‌ಎಸ್ ರೂಟ್ ಮಾರ್ಚ್ ಗೆ ಕೇವಲ ಮಾಹಿತಿ ನೀಡಿದರೆ ಸಾಲದು, ಅನುಮತಿ ಪಡೆಯಲೇಬೇಕು: ಪ್ರಿಯಾಂಕ್ ಖರ್ಗೆ ಕಟ್ಟಪ್ಪಣೆ!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: ಅಕ್ಟೋಬರ್ 25 ರಂದು ರಾಜ್ಯಾದ್ಯಂತ ಆಯೋಜಿಸಲು ಉದ್ದೇಶಿಸಿರುವ ವಿಜಯದಶಮಿ ಪಥಸಂಚಲನಕ್ಕೆ ಆರ್‌ಎಸ್‌ಎಸ್  ಸೂಕ್ತ ಪ್ರಾಧಿಕಾರಗಳಿಂದ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯ ಎಂದು ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ  ಸೂಚನೆ ನೀಡಿದ್ದಾರೆ. 

ಗೃಹ ಇಲಾಖೆಗೆ ಕೇವಲ ಮಾಹಿತಿ ನೀಡುವುದು ಅಥವಾ ಸಹಕಾರ ಕೋರುವುದು ಅಧಿಕೃತ ಅನುಮತಿಗೆ ಸಮನಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸಚಿವರು, ರಾಜ್ಯದ ವಿವಿಧ ಭಾಗಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಗಣವೇಷಧಾರಿಗಳು ಒಂದೇ ದಿನ ಹಾಗೂ ಒಂದೇ ಸಮಯದಲ್ಲಿ ರಸ್ತೆಗೆ ಇಳಿಯುವುದರಿಂದ ಪೊಲೀಸ್ ಇಲಾಖೆಗೆ ಸೂಕ್ತ ಭದ್ರತೆ, ಸಂಚಾರ ನಿಯಂತ್ರಣ, ಸಿಬ್ಬಂದಿ ನಿಯೋಜನೆ ಹಾಗೂ ಆಹಾರ ವ್ಯವಸ್ಥೆ ಮಾಡಲು ಸಾಕಷ್ಟು ಪೂರ್ವತಯಾರಿ ಅಗತ್ಯವಿರುತ್ತದೆ ಎಂದು ವಿವರಿಸಿದ್ದಾರೆ. ಆದ್ದರಿಂದ ಆರ್‌ಎಸ್‌ಎಸ್ ನಿಯಮಾನುಸಾರ ಅರ್ಜಿ ಸಲ್ಲಿಸಿ ಅಧಿಕೃತ ಆದೇಶಕ್ಕಾಗಿ ಕಾಯಬೇಕು ಎಂದು ಅವರು ಸೂಚಿಸಿದ್ದಾರೆ.

ಅನುಮತಿ ಕಡ್ಡಾಯ: ಕೇವಲ ಪೊಲೀಸ್ ಠಾಣೆಗೆ ಮಾಹಿತಿ ಪತ್ರ ನೀಡುವುದು ಅನುಮತಿಯಲ್ಲ, ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.

ಭದ್ರತೆ ಮತ್ತು ಸಾರ್ವಜನಿಕ ಸಂಪನ್ಮೂಲ: ಲಕ್ಷಾಂತರ ಸ್ವಯಂಸೇವಕರು ಭಾಗವಹಿಸುವುದರಿಂದ ಸಾರ್ವಜನಿಕ ಸಂಪನ್ಮೂಲ ಬಳಕೆ ಹಾಗೂ ಭದ್ರತಾ ಯೋಜನಾ ವೆಚ್ಚ ತಗಲುತ್ತದೆ.

ಸಂಸ್ಥೆಯ ನೋಂದಣಿ ಪ್ರಶ್ನೆ: ಆರ್‌ಎಸ್‌ಎಸ್ ನೋಂದಾಯಿತ ಸಂಸ್ಥೆಯಲ್ಲ ಎಂದು ಆರೋಪಿಸಿರುವ ಖರ್ಗೆ, ಸಂಸ್ಥೆಯ ಆದಾಯ ಮತ್ತು ವೆಚ್ಚದ ವಿವರಗಳನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಆರ್‌ಎಸ್‌ಎಸ್, ಭಾರತದಲ್ಲಿ ಎಲ್ಲ ಚಟುವಟಿಕೆಗಳಿಗೆ ನೋಂದಣಿ ಕಡ್ಡಾಯವಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಈಗಾಗಲೇ ಕಮಲಾನಗರ ಮತ್ತು ನಂದಿನಿ ಲೇಔಟ್ ಪೊಲೀಸ್ ಠಾಣೆಗಳಿಗೆ ಆರ್‌ಎಸ್‌ಎಸ್ ಘಟಕಗಳು ಪಥಸಂಚಲನದ ಮಾರ್ಗ ಹಾಗೂ ಸಮಯದ ಕುರಿತು ನೀಡಿರುವ ಪತ್ರಗಳನ್ನು ಉಲ್ಲೇಖಿಸಿರುವ ಗೃಹ ಸಚಿವರು, ಕಟ್ಟುನಿಟ್ಟಾಗಿ ಕಾನೂನು ಪ್ರಕ್ರಿಯೆಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles