Home ದಾವಣಗೆರೆ ರಾಜ್ಯದ ರೈತರಿಗೆ ಆರ್ಥಿಕ ಶಕ್ತಿ ತುಂಬಲು ಪ್ರತಿ ಲೀಟರ್ ಹಾಲಿನ ಬೆಲೆ 8 ರೂ. ಏರಿಕೆ, 11 ಲಕ್ಷ ಕುಟುಂಬಗಳಿಗೆ ನೆರವು: ವಿರೋಧದ ನಡುವೆ ಸಿಎಂ ಡಿ. ಕೆ. ಶಿವಕುಮಾರ್ ಏರಿಕೆ ಸಮರ್ಥನೆ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ರಾಜ್ಯದ ರೈತರಿಗೆ ಆರ್ಥಿಕ ಶಕ್ತಿ ತುಂಬಲು ಪ್ರತಿ ಲೀಟರ್ ಹಾಲಿನ ಬೆಲೆ 8 ರೂ. ಏರಿಕೆ, 11 ಲಕ್ಷ ಕುಟುಂಬಗಳಿಗೆ ನೆರವು: ವಿರೋಧದ ನಡುವೆ ಸಿಎಂ ಡಿ. ಕೆ. ಶಿವಕುಮಾರ್ ಏರಿಕೆ ಸಮರ್ಥನೆ!

Share
ರೈತ
Share

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ಬಲ ತುಂಬಲು ಪ್ರತಿ ಲೀಟರ್ ಹಾಲಿನ ಬೆಲೆಯನ್ನು 8 ರೂ.ಗಳಷ್ಟು ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.

ಈ ಬೆಲೆ ಏರಿಕೆಯಲ್ಲಿ ನೇರವಾಗಿ 7 ರೂ. ರೈತರಿಗೆ ಹಾಗೂ 1 ರೂ. ಒಕ್ಕೂಟಗಳು ಮತ್ತು ಸೊಸೈಟಿಗಳಿಗೆ ತಲುಪಲಿದ್ದು, ಇದು ರಾಜ್ಯದ ಸುಮಾರು 11 ಲಕ್ಷ ರೈತ ಕುಟುಂಬಗಳಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರ ನಿವಾಸ ಹಾಗೂ ವಿಧಾನಸೌಧದ ಭುವನೇಶ್ವರಿ ಪ್ರತಿಮೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ರಸ್ತೆ ಸಂಪರ್ಕ ಯೋಜನೆಗೆ 10 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದರು. ಅಲ್ಲದೆ, ಬಡ ರೈತರಿಗಾಗಿ ‘ನೇಗಿಲ ಯೋಗಿ’ ಯೋಜನೆಯನ್ನು ರೂಪಿಸಲಾಗಿದ್ದು, 3 ಎಕರೆವರೆಗಿನ ಹೊಲವನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ‘ತೇಗ ಸಿರಿ’ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿ ರಸ್ತೆ ಸಂಪರ್ಕ ಯೋಜನೆಗೆ 10 ಸಾವಿರ ಕೋಟಿ ನೀಡಿದ್ದು, 20 ಸಾವಿರ ಕಿ.ಮೀ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ರಸ್ತೆಗಳ ಅಭಿವೃದ್ಧಿಗೆ ಪ್ರತಿ ಪಂಚಾಯ್ತಿಗೆ 6 ಸಾವಿರ ಕೋಟಿ ಹಣ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸರ್ಕಾರಿ ಆಸ್ಪತ್ರೆ ದತ್ತು ಯೋಜನೆ ಪ್ರಾರಂಭಿಸಿದ್ದು, 11 ವೈದ್ಯಕೀಯ ಕಾಲೇಜುಗಳು ಇದಕ್ಕೆ ಸಹಿ ಮಾಡಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 100 ಹೊಸ ಆಂಬುಲೆನ್ಸ್ ಗಳನ್ನು ಲೋಕಾರ್ಪಣೆಗೊಳಿಸಲಾಗುವುದು ” ಎಂದು ತಿಳಿಸಿದರು.

“ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ಮಾಡಿ 1995ರ ನಂತರ ಪ್ರಾರಂಭವಾದ ಸರ್ಕಾರಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಲು ಕೆಲವು ದಿನಗಳಲ್ಲಿ ಅವರೊಂದಿಗೆ ಚರ್ಚೆ ಮಾಡಿ ಸಹಾಯ ಮಾಡಲಾಗುವುದು. ಇನ್ನು ಬಡ ರೈತರಿಗಾಗಿ ಸರ್ಕಾರ ನೇಗಿಲ ಯೋಗಿ ಯೋಜನೆ ರೂಪಿಸಿದ್ದು, 3 ಎಕರೆವರೆಗೂ ಹೊಲವನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ನಮ್ಮ ಸರ್ಕಾರ ಪ್ರಜಾಸೇವೆ ಇಲಾಖೆ ರೂಪಿಸಿದೆ. ಎಲ್ಲರ ಆಸ್ತಿ ದಾಖಲೆಗಳ ಮೂಲಕ ಮಾಲೀಕತ್ವ ಗಟ್ಟಿಗೊಳಿಸಲು ಭೂಗ್ಯಾರಂಟಿ ಜಾರಿಗೆ ತಂದಿದೆ. ರೈತರಿಗಾಗಿ ತೇಗದ ಸಿರಿ ಯೋಜನೆ ರೂಪಿಸಿದೆ. ಮಲೆನಾಡಿನ ಪ್ರದೇಶದ ರೈತರಿಗೆ ಅರಣ್ಯ ಇಲಾಖೆಯಿಂದ ಆಗುತ್ತಿದ್ದ ತೊಂದರೆ ಹಾಗೂ ರಸ್ತೂರಿ ರಂಗನ್ ವರದಿ ತಿರಸ್ಕರಿಸಲು ವಿಶೇಷ ಅಧಿವೇಶನ ನಡೆಸಿದ್ದೇವೆ. ಇನ್ನು ರಾಜ್ಯದಲ್ಲಿ 5 ಲಕ್ಷ ನಿವೇಶನಗಳನ್ನು ವಿತರಣೆ ಮಾಡಲು ಕಾರ್ಯಕ್ರಮ ನೀಡಲಾಗಿದೆ” ಎಂದು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

“3 ಕೋಟಿ 32 ಲಕ್ಷ ವೆಚ್ಚದಲ್ಲಿ 1,000 ಚದರ ಕಿಲೋಮೀಟರ್ ಬಿತ್ತನೆ ಪ್ರದೇಶದಲ್ಲಿ ಡ್ರೋನ್ ಮತ್ತು ಉಪಗ್ರಹ ಆಧಾರಿತ ಬೆಳೆ ಸಮೀಕ್ಷೆ ನಡೆಸಲಾಗುವುದು. 12 ಕೋಟಿ ವೆಚ್ಚದಲ್ಲಿ ಐದು ಜಿಲ್ಲೆಗಳ ಐದು ಹೋಬಳಿಗಳಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ ನಡೆಸಲಾಗುವುದು. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತು ಉತ್ತೇಜನ. ರಫ್ತುದಾರರಿಗೆ ತರಬೇತಿ ಕಾರ್ಯಕ್ರಮ ಜಾರಿ ಮಾಡಲಾಗುವುದು. ಕರ್ನಾಟಕ ಪ್ರೋಟೀನ್ ಮಿಷನ್, ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಜಾರಿ ಮಾಡಲಾಗಿದೆ. ಸಾವಯವ ಪದ್ಧತಿ ಪ್ರೋತ್ಸಾಹಿಸಲು ವಸುಧಾಮೃತ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ. ರೈತರ ಆದಾಯ ಹೆಚ್ಚಿಸಲು ತೇಗ ಸಿರಿ ಯೋಜನೆ ಅನುಷ್ಟಾನಕ್ಕೆ ಸರ್ಕಾರ ಮುಂದಾಗಿದೆ. 37 ಲಕ್ಷದ 32 ಸಾವಿರ ರೈತರನ್ನ ಬೆಳೆ ವಿಮೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. 38 ಲಕ್ಷ ರೈತರಿಗೆ 30,000 ಕೋಟಿ ಸಾಲ ವಿತರಣೆ ಮಾಡಲಾಗಿದೆ. 3 ಲಕ್ಷ 41 ಸಾವಿರ ಜನ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗಿದೆ. 32,138 ಕೃಷಿ ಹೊಂಡಗಳ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ 363 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. 2,825 ಕೋಟಿ ವೆಚ್ಚದಲ್ಲಿ ಹನಿ ನೀರಾವರಿ ಯೋಜನೆ ಅಳವಡಿಕೆ ಮಾಡಲು ಮುಂದಾಗಿದ್ದೇವೆ” ಎಂದು ವಿವರಿಸಿದರು.

50 ವರ್ಷಗಳ ಹಳೆಯ ನೆನಪು ಮರುಕಳಿಸುತ್ತಿದೆ

“ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮಕ್ಕಳನ್ನು ನೋಡಿದರೆ, 50 ವರ್ಷಗಳ ಹಿಂದೆ ನಾನು ವಿದ್ಯಾರ್ಥಿಯಾಗಿದ್ದಾಗ ಇಲ್ಲಿ ಕನ್ನಡರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದ ನೆನಪು ಮರುಕಳಿಸುತ್ತಿದೆ. ನಾನು ಕೂಡ ಪ್ರಾಥಮಿಕ ಶಾಲೆಯಲ್ಲಿ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ. ಪ್ರೌಢಶಾಲೆಯಲ್ಲಿದ್ದಾಗ ಬೇಸ್ ಡ್ರಬ್ ಬಾರಿಸುತ್ತಿದೆ. ಈಗ ನಿಮ್ಮನ್ನು ನೋಡಿ ನಿಮ್ಮ ಸ್ಥಾನದಲ್ಲಿ ನಾನು ಇದ್ದೆ, ಇಂದು ರಾಜ್ಯದ ಪ್ರಜಾಸೇವಕನಾಗಿದ್ದೇನೆ. ನೀವು ಕೂಡ ಬೆಳೆದು ಉತ್ತಮ ಸ್ಥಾನಕ್ಕೆ ಏರಬೇಕು” ಎಂದು ಶುಭಕೋರಿದರು.

ಮಾಧ್ಯಮ ಪ್ರತಿಕ್ರಿಯೆ:

ಸದಾಶಿವನಗರ ನಿವಾಸ ಹಾಗೂ ವಿಧಾನಸೌಧದ ಆವರಣದಲ್ಲಿರುವ ಭುನೇಶ್ವರಿ ಪ್ರತಿಮೆ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

ದೆಹಲಿಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಕೇಳಿದಾಗ, “ಮತದಾನದ ಹಕ್ಕು ಎಂದರೆ ಅದು ಬದುಕುವ ಹಕ್ಕಿದ್ದಂತೆ. ಆದರೆ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಲಕ್ಷಾಂತರ ಜನರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗಿದೆ. ದೇಶದ ಪ್ರತಿಯೊಬ್ಬ ಮತದಾರರಿಗೆ ಮತದಾನದ ಹಕ್ಕು ನೀಡುವುದು ನಮ್ಮ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಲು ಶ್ರಮಿಸುತ್ತಿರುವ ಪಕ್ಷವು ಪ್ರತಿ ಮತದಾರರ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ. ಪ್ರಸ್ತುತ ಹಮ್ಮಿಕೊಳ್ಳಲಾಗಿರುವ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆ ಯಶಸ್ವಿಯಾಗಲಿದೆ.ಪ್ರತಿಯೊಬ್ಬ ಮತದಾರರ ಹಕ್ಕನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದರು.

“ಕರ್ನಾಟಕದಲ್ಲಿ ಯಾವ ರೀತಿಯಲ್ಲಿ ಅಕ್ರಮಗಳನ್ನು ಸೃಷ್ಟಿಸಲಾಯಿತು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಲಕ್ಷಾಂತರ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಹೆಸರನ್ನು ಮತ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಸಿಎಂ ಹೇಳಿದರು.

Share

Leave a comment

Leave a Reply

Your email address will not be published. Required fields are marked *

Related Articles