Home ದಾವಣಗೆರೆ ಕರ್ನಾಟಕ ಹೈಕೋರ್ಟ್‌ SDA ನೇಮಕಾತಿ 2026: 20 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ
ದಾವಣಗೆರೆಉದ್ಯೋಗ ವಾರ್ತೆಬೆಂಗಳೂರು

ಕರ್ನಾಟಕ ಹೈಕೋರ್ಟ್‌ SDA ನೇಮಕಾತಿ 2026: 20 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

Share
ಹೈಕೋರ್ಟ್‌
Share

ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ (Karnataka High Court) ಖಾಲಿ ಇರುವ 20 ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 13-08-2026 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು 11-09-2026 ಕೊನೆಯ ದಿನವಾಗಿದೆ.

 ಪ್ರಮುಖ ವಿವರಗಳು

ಸಂಸ್ಥೆಯ ಹೆಸರು ಕರ್ನಾಟಕ ಉಚ್ಚ ನ್ಯಾಯಾಲಯ (Karnataka High Court)

ಹುದ್ದೆಯ ಹೆಸರು ದ್ವಿತೀಯ ದರ್ಜೆ ಸಹಾಯಕ (SDA)

ಒಟ್ಟು ಹುದ್ದೆಗಳು 20

ವೇತನ ಶ್ರೇಣಿ ₹25,500 – ₹81,100/- (ಪ್ರತಿ ತಿಂಗಳು)

ಉದ್ಯೋಗ ಸ್ಥಳ ಕರ್ನಾಟಕ

ಅರ್ಹತೆಗಳು ಮತ್ತು ವಯೋಮಿತಿ

ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ / ಕಲೆ / ವಾಣಿಜ್ಯ / ಬಿಸಿನೆಸ್ ಮ್ಯಾನೇಜ್‌ಮೆಂಟ್ / ಕಂಪ್ಯೂಟರ್ ಅಪ್ಲಿಕೇಶನ್ / ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪದವಿ ಪಡೆದಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 55% ಅಂಕಗಳು ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕನಿಷ್ಠ 50% ಅಂಕಗಳು ಕಡ್ಡಾಯ.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವಯೋಮಿತಿ ಸಡಿಲಿಕೆ: Cat-2A/2B/3A/3B ಅಭ್ಯರ್ಥಿಗಳಿಗೆ 3 ವರ್ಷ, SC/ST/Cat-I ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ

ಅರ್ಜಿ ಶುಲ್ಕ:

ಸಾಮಾನ್ಯ, Cat-2A/2B/3A/3B ಅಭ್ಯರ್ಥಿಗಳಿಗೆ: ₹350/-

SC / ST / Cat-I / PwBD ಅಭ್ಯರ್ಥಿಗಳಿಗೆ: ₹200/-

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ (ಪರೀಕ್ಷಾ ಅಂಕಗಳು):

ಇಂಗ್ಲಿಷ್ ಪ್ರಬಂಧ (English Essay) – 30 ಅಂಕಗಳು (ಕನಿಷ್ಠ ಅರ್ಹತೆ: 20)

ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರ (Translation) – 30 ಅಂಕಗಳು (ಕನಿಷ್ಠ ಅರ್ಹತೆ: 20)

ಸಾಮಾನ್ಯ ಜ್ಞಾನ ಪರೀಕ್ಷೆ (General Knowledge) – 20 ಅಂಕಗಳು (ಕನಿಷ್ಠ ಅರ್ಹತೆ: 10)

ಸಂದರ್ಶನ (Interview) – 20 ಅಂಕಗಳು (ಕನಿಷ್ಠ ಅರ್ಹತೆ: 10)

(ಒಟ್ಟು 100 ಅಂಕಗಳಲ್ಲಿ ಅಭ್ಯರ್ಥಿಗಳು ಉತ್ತೀರ್ಣರಾಗಲು ಕನಿಷ್ಠ 60 ಅಂಕಗಳನ್ನು ಪಡೆಯುವುದು ಕಡ್ಡಾಯ).

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13-08-2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-09-2026

  • ಅಧಿಕೃತ ವೆಬ್‌ಸೈಟ್: judiciary.karnataka.gov.in

Share

Leave a comment

Leave a Reply

Your email address will not be published. Required fields are marked *