Home ಕ್ರೈಂ ನ್ಯೂಸ್ ಮುಂಬೈನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುಟುಂಬ ಈ ಹಿಂದೆ ವಾಸವಿದ್ದ ಮನೆ ಧ್ವಂಸ: ನೆಲಮಹಡಿ ಸ್ಥಳ ಮಸೀದಿ ಎಂಬ ಪ್ರತಿಪಾದಿಸಿ ಸ್ಥಳೀಯರ ವಿರೋಧ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮುಂಬೈನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುಟುಂಬ ಈ ಹಿಂದೆ ವಾಸವಿದ್ದ ಮನೆ ಧ್ವಂಸ: ನೆಲಮಹಡಿ ಸ್ಥಳ ಮಸೀದಿ ಎಂಬ ಪ್ರತಿಪಾದಿಸಿ ಸ್ಥಳೀಯರ ವಿರೋಧ!

Share
ದಾವೂದ್ ಇಬ್ರಾಹಿಂ
Share

ಮುಂಬೈ: ಮುಂಬೈನ ಭೇಂಡಿ ಬಜಾರ್ ಪ್ರದೇಶದಲ್ಲಿರುವ ಶಿಥಿಲಗೊಂಡಿರುವ ಹಾಜಿ ಇಸ್ಮಾಯಿಲ್ ಹಬೀಬ್ ಮುಸಾಫಿರ್ಖಾನಾ  ಕಟ್ಟಡದಲ್ಲಿದ್ದ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕುಟುಂಬ ಈ ಹಿಂದೆ ವಾಸವಿದ್ದ ಮನೆ ಹಾಗೂ ಕೊನೆಯದಾಗಿ ಉಳಿದಿದ್ದ ಕಟ್ಟಡದ ಭಾಗವನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಗುರುವಾರ ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ.

ತೆರವು ಮಾಡುತ್ತಿರುವ ವಿಡಿಯೋ ವೀಕ್ಷಿಸಿ: 

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಸಂಚು ರೂಪಿಸಿದ್ದ ಈ ಕಟ್ಟಡದ ತೆರವು ಕಾರ್ಯಾಚರಣೆ ವೇಳೆ ಭಾರೀ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡವನ್ನು ತೆರವುಗೊಳಿಸಲು ಬಿಎಂಸಿ ಈ ಕಾರ್ಯಾಚರಣೆ ಕೈಗೊಂಡಿದೆ. 1986ರಲ್ಲಿ ದೇಶ ತೊರೆಯುವ ಮೊದಲು ದಾವೂದ್ ಹಾಗೂ ಆತನ ಕುಟುಂಬ ಈ ಕಟ್ಟಡದ ಎರಡನೇ ಮಹಡಿಯಲ್ಲಿ ವಾಸಿಸುತ್ತಿತ್ತು. ಆದಾಗ್ಯೂ, ನೆಲ ಮಹಡಿಯಲ್ಲಿರುವ ಪ್ರಾರ್ಥನಾ ಮಂದಿರವನ್ನು ವಕ್ಫ್ ಬೋರ್ಡ್ ಅಡಿಯಲ್ಲಿ ನಿರ್ವಹಿಸಲಾಗುತ್ತಿದ್ದು, ಇದನ್ನು ಧ್ವಂಸಗೊಳಿಸುವುದಕ್ಕೆ ಕಾಂಗ್ರೆಸ್ ಹಾಗೂ ಎಐಎಂಐಎಂ ಪಕ್ಷಗಳು ಮತ್ತು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಬಿಎಂಸಿ ಧ್ವಂಸ ಕಾರ್ಯಾಚರಣೆ: ಮುಂಬೈನ ಪ್ರಮುಖ ಪ್ರದೇಶವಾದ ಭೇಂಡಿ ಬಜಾರ್‌ನಲ್ಲಿರುವ ಈ ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಲು ಬಿಎಂಸಿ ನವೆಂಬರ್ 16ರಂದೇ ನೋಟಿಸ್ ನೀಡಿತ್ತು. ಜೆಸಿಬಿ ಹಾಗೂ ಬುಲ್ಡೋಜರ್‌ಗಳನ್ನು ಬಳಸಿ ಕಟ್ಟಡದ ಉಳಿದ ಭಾಗಗಳನ್ನು ನೆಲಸಮ ಮಾಡಲಾಗಿದೆ.

ದಾವೂದ್ ನಂಟು: ದಾವೂದ್ ಇಬ್ರಾಹಿಂ ಹಾಗೂ ಆತನ ತಾಯಿ ಅಮೀನಾ ಬಿ ಇಲ್ಲಿ ವಾಸಿಸುತ್ತಿದ್ದರು. 1993ರ ಬಾಂಬ್ ಸ್ಫೋಟದ ನಂತರ ಸಫೆಮಾ ಕಾಯ್ದೆಯಡಿ ಸರ್ಕಾರದ ವಶಕ್ಕೆ ಪಡೆದಿದ್ದ ಈ ಆಸ್ತಿಯ ಕಾನೂನು ಹೋರಾಟದಲ್ಲಿ ಸುಪ್ರೀಂ ಕೋರ್ಟ್ 2018ರಲ್ಲಿ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು.

ವಿವಾದಕ್ಕೆ ಕಾರಣ: ನೆಲ ಮಹಡಿಯಲ್ಲಿರುವ ಪ್ರಾರ್ಥನಾ ಸ್ಥಳವನ್ನು ಮಸೀದಿ ಎಂದು ಸ್ಥಳೀಯರು ಪ್ರತಿಪಾದಿಸುತ್ತಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ವಿಪಕ್ಷ ನಾಯಕರು ಆಪಾದಿಸಿದ್ದಾರೆ.

Share

Recent Posts

Recent Comments

No comments to show.
Related Articles