
ಮುಂಬೈ: ಜನಪ್ರಿಯ ಹಾಸ್ಯ ನಟಿ ಹಾಗೂ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಖ್ಯಾತಿಯ ಪಿಂಕಿ ಬುವಾ ಅಲಿಯಾಸ್ ಉಪಾಸನಾ ಸಿಂಗ್ ಅವರು ಮನರಂಜನಾ ಉದ್ಯಮದ ಅಸುರಕ್ಷಿತ ವಾತಾವರಣ ಹಾಗೂ ನಿರ್ದಯಿ ನಡವಳಿಕೆಗಳ ಕುರಿತು ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಈ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ನೋಡಿ:
https://h5.vdo.ai/media_file/v-ndtvprofit-v2/source/uploads/videos/1779111259966a0b155b4b364
ಯೂಟ್ಯೂಬರ್ ಅಂಕುರ್ ಸಿಂಗ್ ಅವರ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಅವರು, ಸಿನಿಮಾಗೆ ತಗಲುವ ಕೋಟ್ಯಂತರ ಹಣದ ವೆಚ್ಚದ ಮುಂದೆ ಮಾನವೀಯತೆಯೇ ಮರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸಿನಿ ಹಾಗೂ ಟಿವಿ ಕಲಾವಿದರ ಸಂಘದ ಅಧ್ಯಕ್ಷೆಯಾಗಿರುವ ಉಪಾಸನಾ ಸಿಂಗ್, ಚಿತ್ರೀಕರಣದ ಸೆಟ್‌ಗಳಲ್ಲಿ ಲೈಟ್‌ಮನ್‌ಗಳು ಅಥವಾ ಸಿಬ್ಬಂದಿ ಅನಾಹುತದಿಂದ ಸಾವಿಗೀಡಾದರೂ ಶೂಟಿಂಗ್ ನಿಲ್ಲಿಸುವುದಿಲ್ಲ, ಬದಲಿಗೆ ಶವವನ್ನು ಬದಿಗಿಟ್ಟು ಕೆಲಸ ಮುಂದುವರಿಸಿದ ಕರಾಳ ನೈಜತೆಯನ್ನು ಕಣ್ಣಾರೆ ಕಂಡಿರುವುದಾಗಿ ವಿವರಿಸಿದ್ದಾರೆ.
ಅಲ್ಲದೆ, ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿಯೊಬ್ಬರು ಪ್ರಜ್ಞೆತಪ್ಪಿ ಬಿದ್ದಾಗಲೂ, ಮಾನವೀಯತೆ ಮೆರೆಯುವ ಬದಲು ಪ್ರೊಡ್ಯೂಸರ್‌ಗಳು ಕ್ಯಾಮೆರಾದಲ್ಲಿ ವಿಡಿಯೋ ಸೆರೆಹಿಡಿಯಲು ಮುಂದಾಗಿದ್ದರು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಉತ್ಪಾದನಾ ವೆಚ್ಚವೇ ಮುಖ್ಯ: ನಿರ್ಮಾಪಕರ ದಿನದ ಖರ್ಚು ಅತ್ಯಂತ ಹೆಚ್ಚಾಗಿರುವುದರಿಂದ, ಕಲಾವಿದರು ಅಥವಾ ಕಾರ್ಮಿಕರ ಪ್ರಾಣಕ್ಕಿಂತ ಶೂಟಿಂಗ್ ಮತ್ತು ಟೆಲಿಕಾಸ್ಟ್ ಬದ್ಧತೆಗಳೇ ಮುಖ್ಯವಾಗುತ್ತವೆ ಎಂಬ ಕ್ರೂರ ಸತ್ಯವನ್ನು ಉಪಾಸನಾ ಬಿಚ್ಚಿಟ್ಟಿದ್ದಾರೆ.
ರಿಯಾಲಿಟಿ ಶೋ ಅಮಾನವೀಯತೆ: ಶೋ ಒಂದರಲ್ಲಿ ಕುಸಿದುಬಿದ್ದ ಸ್ಪರ್ಧಿಗೆ ಪ್ರಥಮ ಚಿಕಿತ್ಸೆ ಅಥವಾ ಜ್ಯೂಸ್ ನೀಡುವ ಬದಲು, ಆತ ಹಸಿವಿನಿಂದಲೇ ಮೂರ್ಛೆ ಹೋದನೇ ಅಥವಾ ಎಂಬುವುದನ್ನು ಕ್ಯಾಮೆರಾದಲ್ಲಿ ದಾಖಲಿಸಲು ಮುಂದಾದ ತಂಡದ ನಿರ್ಧಾರ ತೀವ್ರ ನೊಂದಾಯಿಸಿತು ಎಂದರು.
ಕಾರ್ಮಿಕರ ಕಷ್ಟಗಳು: ಅತ್ಯಂತ ಎತ್ತರದ ಟ್ರಸ್ಟ್‌ಗಳ ಮೇಲೆ ನಿಂತು ಕೆಲಸ ಮಾಡುವ ಲೈಟ್‌ಮನ್‌ಗಳು ವಿಪರೀತ ಬಿಸಿಲು ಮತ್ತು ಅಸುರಕ್ಷಿತ ವಾತಾವರಣದಲ್ಲಿ ಪಡುವ ಪಾಡನ್ನು ನೆನೆದು ಆತಂಕ ವ್ಯಕ್ತಪಡಿಸಿದರು.




