Home ದಾವಣಗೆರೆ 15,000 ಶಿಕ್ಷಕರ ನೇರ ನೇಮಕಾತಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ: ಶೀಘ್ರದಲ್ಲೇ ಅಧಿಸೂಚನೆ ಪ್ರಕಟ!
ದಾವಣಗೆರೆಉದ್ಯೋಗ ವಾರ್ತೆನವದೆಹಲಿಬೆಂಗಳೂರು

15,000 ಶಿಕ್ಷಕರ ನೇರ ನೇಮಕಾತಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ: ಶೀಘ್ರದಲ್ಲೇ ಅಧಿಸೂಚನೆ ಪ್ರಕಟ!

Share
ಶಿಕ್ಷಕ
Share

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಒಟ್ಟು 15,000 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕರ್ನಾಟಕ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶೀಘ್ರದಲ್ಲೇ ಅರ್ಜಿ ಸಲ್ಲಿಕೆಯ ಅಂತಿಮ ಅಧಿಸೂಚನೆ ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

ಈ ಬೃಹತ್ ನೇಮಕಾತಿ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 6,967 ಹುದ್ದೆಗಳು ಹಾಗೂ ಕಲ್ಯಾಣೇತರ ಭಾಗಗಳಿಗೆ 8,033 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಪದವೀಧರ ಪ್ರಾಥಮಿಕ ಶಿಕ್ಷಕರು (GPT), ಪ್ರೌಢಶಾಲಾ ಶಿಕ್ಷಕರು (AM), ಪ್ರಾಥಮಿಕ ಶಾಲೆ ಶಿಕ್ಷಕರು (PST), ದೈಹಿಕ ಶಿಕ್ಷಣ (PET) ಹಾಗೂ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ಹುದ್ದೆಗಳನ್ನು ಈ ಮೂಲಕ ಭರ್ತಿ ಮಾಡಲಾಗುತ್ತದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ schooleducation.karnataka.gov.in ಮೂಲಕವೇ ಅಧಿಕೃತ ಮಾಹಿತಿ ಹಾಗೂ ಅರ್ಜಿ ಸಲ್ಲಿಸುವ ಆನ್‌ಲೈನ್ ಲಿಂಕ್ ಅನ್ನು ಪಡೆಯಬಹುದಾಗಿದೆ.

ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ:

ವಯೋಮಿತಿ: 21 ರಿಂದ 40 ವರ್ಷ (ವರ್ಗಾವಾರು ವಯೋಸಡಲಿಕೆ ಲಭ್ಯ).

ಆಯ್ಕೆ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳಿಗೆ 85%, ಪದವಿಗೆ 13% ಹಾಗೂ ಬಿ.ಎಡ್/ವೃತ್ತಿಪರ ಕೋರ್ಸ್‌ಗೆ 2% ವೈಟೇಜ್ ನೀಡಿ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.

Share

Leave a comment

Leave a Reply

Your email address will not be published. Required fields are marked *