ರಾಮನಗರ/ಬೆಂಗಳೂರು: ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಮಂಡಳಿ (FDA) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ಮಾರಾಟ ಮಾಡಲು ಸಜ್ಜಾಗಿದ್ದ ಭಾರಿ ಪ್ರಮಾಣದ ನಕಲಿ ಔಷಧ ದಂಧೆಯನ್ನು ಭೇದಿಸಿದ್ದಾರೆ.
ಬಿಡದಿ ಟೋಲ್‌ಗೇಟ್ ಬಳಿಯ ಅಕ್ರಮ ಗೋದಾಮಿನ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ನಕಲಿ ಮಾತ್ರೆ ಹಾಗೂ ಔಷಧಗಳನ್ನು ವಶಕ್ಕೆ ಪಡೆದಿದ್ದಾರೆ.
ಮಲ್ಟಿನೇಷನಲ್ ಕಂಪನಿಗಳ ಲೇಬಲ್ ಬಳಕೆ:
ಬಿಡದಿಯ ಹೆಜ್ಜಾಲ ಭಾಗದ ಅಕ್ರಮ ಕಟ್ಟಡದಲ್ಲಿ ಯಾವುದೇ ಪರವಾನಗಿ ಇಲ್ಲದೆ ಈ ಘಟಕ ನಡೆಯುತ್ತಿತ್ತು. ಸಾರ್ವಜನಿಕರನ್ನು ನಂಬಿಸಲು ಪ್ರಸಿದ್ಧ ಮಲ್ಟಿನೇಷನಲ್ ಫಾರ್ಮಾಸ್ಯುಟಿಕಲ್ ಕಂಪನಿಗಳ ನಕಲಿ ಲೇಬಲ್, ಕವರ್ ಹಾಗೂ ಪ್ಯಾಕಿಂಗ್ ಸಾಮಗ್ರಿಗಳನ್ನು ಬಳಸಿ ನಕಲಿ ಔಷಧಗಳನ್ನು ರೀಪ್ಯಾಕಿಂಗ್ ಮಾಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ದಂಧೆಯ ಹಿಂದಿರುವ ಸೂತ್ರಧಾರರು ಯಾರು ಮತ್ತು ಇವುಗಳನ್ನು ಎಲ್ಲೆಲ್ಲಿ ಸರಬರಾಜು ಮಾಡಲು ಯೋಜಿಸಲಾಗಿತ್ತು ಎಂಬುದರ ಕುರಿತು ಅಧಿಕಾರಿಗಳು ಜಾಲ ಬೀಸಿದ್ದಾರೆ.
ರಾಜ್ಯಾದ್ಯಂತ ತಪಾಸಣೆ ತೀವ್ರ:
ಇತ್ತೀಚೆಗೆ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಾದ್ಯಂತ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿ ಪರಿಶೀಲನೆ ಚುರುಕುಗೊಳಿಸಿದೆ. ಪ್ರಸಿದ್ದ ಹೋಟೆಲ್‌ಗಳು, ರೆಸಾರ್ಟ್‌ಗಳು, ಇಂದಿರಾ ಕ್ಯಾಂಟೀನ್ ಮತ್ತು ವಿಧಾನಸೌಧ, ವಿಕಾಸಸೌಧದಂತಹ ಸರ್ಕಾರಿ ಸಂಕೀರ್ಣಗಳ ಕ್ಯಾಂಟೀನ್‌ಗಳ ಮೇಲೆಯೂ ದಾಳಿ ನಡೆಸಿ, ಕೆಟ್ಟ ಆಹಾರ ಧಾನ್ಯಗಳು ಹಾಗೂ ನೈರ್ಮಲ್ಯ ಕೊರತೆ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
- 5 crore counterfeit drugs Karnataka
- 5 ಕೋಟಿ ನಕಲಿ ಮೆಡಿಸಿನ್ ಜಪ್ತಿ
- Bidadi fake drug racket
- FDA Bengaluru inspection
- illegal pharma unit Bidadi
- Karnataka FDA raid
- Karnataka health department news
- spurious medicines seized
- ಅಕ್ರಮ ಔಷಧ ದಂಧೆ
- ಕರ್ನಾಟಕ ಎಫ್ಡಿಎ ದಾಳಿ
- ಕರ್ನಾಟಕ ಸುದ್ಧಿ
- ನಕಲಿ ಮಾತ್ರೆಗಳ ಜಾಲ
- ಬಿಡದಿ ಟೋಲ್‌ಗೇಟ್ ರೈಡ್
- ಬಿಡದಿ ನಕಲಿ ಔಷಧ





Leave a comment