
ಹೈದರಾಬಾದ್: ಸೋಶಿಯಲ್ ಮೀಡಿಯಾ ಮೂಲಕ ಖ್ಯಾತಿ ಗಳಿಸಿ, ‘ಬಿಗ್ ಬಾಸ್’ ರಿಯಾಲಿಟಿ ಶೋ ಮೂಲಕ ಮನೆಮಾತಾಗಿರುವ ನಟಿ ಹಾಗೂ ನಿರೂಪಕಿ ಅಶು ರೆಡ್ಡಿ ತಮ್ಮ ನೇರ ಹಾಗೂ ದಿಟ್ಟ ಮಾತುಗಳಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ವೈಯಕ್ತಿಕ ಜೀವನ, ಮದುವೆ ಹಾಗೂ ಹಳೆಯ ಮದ್ಯಪಾನದ ಚಟದ ಕುರಿತು ಅಶು ರೆಡ್ಡಿ ಹಂಚಿಕೊಂಡಿರುವ ವಿಚಾರಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಕೆಲ ತಿಂಗಳುಗಳ ಹಿಂದೆ ವ್ಯಕ್ತಿಯೊಬ್ಬರು ನೀಡಿದ್ದ ಹಣಕಾಸು ಹಾಗೂ ಮದುವೆ ವಂಚನೆ ದೂರಿನ ವಿವಾದದ ಬೆನ್ನಲ್ಲೇ, ತಾನು ಸದ್ಯಕ್ಕೆ ಮದುವೆಯಾಗುವ ಯೋಚನೆಯೇ ಮಾಡಿಲ್ಲ ಎಂದು ಅಶು ಸ್ಪಷ್ಟಪಡಿಸಿದ್ದಾರೆ. ಸಂದರ್ಶನದಲ್ಲಿ ಮದುವೆ ಪ್ರಶ್ನೆ ಬಂದಾಗ ತಕ್ಷಣವೇ ‘ಥೂ’ ಎಂದ ಅವರು, ಪ್ರೀತಿ ಮತ್ತು ಮದುವೆ ಎಂಬ ಆಲೋಚನೆಗಳು ಸದ್ಯ ತನ್ನ ತಲೆಯಲ್ಲಿಲ್ಲ ಎಂದಿದ್ದಾರೆ.
ಇದೇ ವೇಳೆ ತಮ್ಮ ಹಿಂದಿನ ಮದ್ಯಪಾನದ ಚಟದ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದು, ಕೆಟ್ಟ ಜನರ ಸಹವಾಸದಿಂದ ದೂರಾಗಿ ಈಗ ಸಂಪೂರ್ಣ ಫಿಟ್ನೆಸ್ ಕಡೆ ಗಮನ ಹರಿಸಿರುವುದಾಗಿ ತಿಳಿಸಿದ್ದಾರೆ.
ಮದುವೆ ಬಗ್ಗೆ ಸ್ಪಷ್ಟನೆ: ಸದ್ಯಕ್ಕೆ ತಾನು ಮದುವೆಯಾಗುವುದಿಲ್ಲ ಎಂದಿರುವ ಅಶು ರೆಡ್ಡಿ, ಪ್ರೀತಿ-ಮದುವೆ ವಿಚಾರದಿಂದ ದೂರವಿರುವುದಾಗಿ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಕುಡಿತದ ಚಟ ಬಿಟ್ಟಿದ್ದೇಕೆ?: ಕೆಟ್ಟ ಜನರ ಸಹವಾಸದಿಂದ ತನಗೆ ಮದ್ಯಪಾನದ ಅಭ್ಯಾಸವಿತ್ತು ಎಂದಿರುವ ನಟಿ, ಆರೋಗ್ಯದ ಹಿತದೃಷ್ಟಿಯಿಂದ ಆ ಚಟವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿರುವುದಾಗಿ ತಿಳಿಸಿದ್ದಾರೆ.
ಫಿಟ್ನೆಸ್ ಮತ್ತು ಜಿಮ್: ದೇಹವೇ ದೇವಾಲಯವಿದ್ದಂತೆ ಎಂದು ಹೇಳಿರುವ ಅಶು ರೆಡ್ಡಿ, ಚಟಗಳನ್ನು ಬಿಟ್ಟು ಪ್ರತಿದಿನ ಜಿಮ್‌ಗೆ ಹೋಗುವುದಾಗಿ ಹೊಸ ಜೀವನಶೈಲಿ ಹಂಚಿಕೊಂಡಿದ್ದಾರೆ.
ವಿವಾದದ ಹಿನ್ನೆಲೆ: ಕೆಲ ತಿಂಗಳ ಹಿಂದೆ ಹೈದರಾಬಾದ್‌ನಲ್ಲಿ ವಂಚನೆ ಪ್ರಕರಣದ ಆರೋಪದ ಸುದ್ದಿಯಲ್ಲಿದ್ದ ಅಶು, ಈಗ ತಮ್ಮ ಬದುಕಿನ ಹೊಸ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ.
ತಮ್ಮ ದೇಹವನ್ನು ತಾವೇ ಚೆನ್ನಾಗಿ ನೋಡಿಕೊಳ್ಳದಿದ್ದರೆ ಬೇರೆ ಯೂ ಕಾಪಾಡಲು ಸಾಧ್ಯವಿಲ್ಲ ಎಂಬ ಅರಿವು ತನಗೆ ಈಗ ಬಂದಿದೆ ಎಂದು ಅಶು ರೆಡ್ಡಿ ಹೇಳುವ ಮೂಲಕ ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ.




