Home ಕ್ರೈಂ ನ್ಯೂಸ್ ಆನ್‌ಲೈನ್ ಪ್ರೀತಿ, ಮತಾಂತರ, ಉಗ್ರರ ಸಂಪರ್ಕ: ನೇಪಾಳದ ಮೂಲಕ ಪಾಕ್ ಸೇರಲು ಯತ್ನಿಸಿದ ಜೈಪುರದ ಬಬಿತಾ ಸಿಕ್ಕಿಬಿದ್ದಿದ್ದು ಹೇಗೆ?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಆನ್‌ಲೈನ್ ಪ್ರೀತಿ, ಮತಾಂತರ, ಉಗ್ರರ ಸಂಪರ್ಕ: ನೇಪಾಳದ ಮೂಲಕ ಪಾಕ್ ಸೇರಲು ಯತ್ನಿಸಿದ ಜೈಪುರದ ಬಬಿತಾ ಸಿಕ್ಕಿಬಿದ್ದಿದ್ದು ಹೇಗೆ?

Share
ಮತಾಂತರ
Share

ಜೈಪುರ: ಜೈಶ್-ಎ-ಮೊಹಮ್ಮದ್ (JeM) ಉಗ್ರಗಾಮಿ ಸಂಘಟನೆಯ ಪ್ರಮುಖ ಕಮಾಂಡರ್ ಹಾಗೂ ಮಸೂದ್ ಅಜರ್‌ನ ನಿಕಟವರ್ತಿಯನ್ನು ಮದುವೆಯಾಗುವ ಉದ್ದೇಶದಿಂದ ನೇಪಾಳದ ಮೂಲಕ ಪಾಕಿಸ್ತಾನಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ 38 ವರ್ಷದ ಮಹಿಳೆಯನ್ನು ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳ (ATS) ಯಶಸ್ವಿಯಾಗಿ ಬಂಧಿಸಿದೆ. ಮಿಲಿಟರಿ ಇಂಟೆಲಿಜೆನ್ಸ್ ನೀಡಿದ ನಿಖರ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ.

ಬಂಧಿತ ಮಹಿಳೆಯನ್ನು ಜೈಪುರದ ಸೀತಾಪುರ ನಿವಾಸಿ ಬಬಿತಾ ಧಾಕಡ್ (ಸದ್ಯದ ಹೆಸರು ಖದೀಜಾ) ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಈಕೆ ೨೦೨೫ ರ ಪಹಲ್ಗಾಮ್ ದಾಳಿಯ ನಂತರ ಕುತೂಹಲದಿಂದ ಸೋಶಿಯಲ್ ಮೀಡಿಯಾದಲ್ಲಿ ಪಾಕಿಸ್ತಾನಿ ಉಗ್ರರ ಪ್ರೊಫೈಲ್‌ಗಳನ್ನು ಹುಡುಕಲು ಆರಂಭಿಸಿದ್ದಳು.

ಈ ವೇಳೆ ಆನ್‌ಲೈನ್ ಮೌಲ್ವಿಯೊಬ್ಬನ ಪ್ರಭಾವಕ್ಕೆ ಒಳಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಳು. ತದನಂತರ ಅಬು ಉಬೈದಾ ಎಂಬ ಜೈಶ್ ಉಗ್ರನೊಂದಿಗೆ ಫೇಸ್‌ಬುಕ್ ಮೆಸೆಂಜರ್ ಮತ್ತು ವಾಟ್ಸಾಪ್ ಮೂಲಕ ತೀವ್ರ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದಳು.

ತನಿಖಾಧಿಕಾರಿಗಳ ಪ್ರಕಾರ, ಈಕೆ ಭಾರತೀಯ ಮೊಬೈಲ್ ಸಂಖ್ಯೆಗಳ ಒಟಿಪಿ (OTP) ಗಳನ್ನು ಪಾಕ್ ಹ್ಯಾಂಡ್ಲರ್‌ಗಳಿಗೆ ಹಂಚಿಕೊಳ್ಳುವ ಮೂಲಕ ಅವರು ಭಾರತದ ನಂಬರ್‌ಗಳಲ್ಲಿ ವಾಟ್ಸಾಪ್ ಬಳಸಲು ನೆರವಾಗಿದ್ದಳು.

ಅಷ್ಟೇ ಅಲ್ಲದೆ, ಕ್ರಿಪ್ಟೋಕರೆನ್ಸಿ ಆಪ್‌ಗಳ ಮೂಲಕ ಹಣದ ವ್ಯವಹಾರ ನಡೆಸಲು ಮುಂದಾಗಿದ್ದ ಈಕೆ, ಆನ್‌ಲೈನ್‌ನಲ್ಲಿ ಸ್ಫೋಟಕಗಳನ್ನು ತಯಾರಿಸುವ ವಿಧಾನಗಳ ಬಗ್ಗೆಯೂ ಸರ್ಚ್ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ಮಹಿಳೆಯನ್ನು ಜೂನ್ ೨೭ ರವರೆಗೆ ಎಟಿಎಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಯುಎಪಿಎ (UAPA) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles