Home ಕ್ರೈಂ ನ್ಯೂಸ್ ಬಹುಮಹಡಿ ಕಟ್ಟಡದಿಂದ ಜಿಗಿದು ಮಹಿಳೆ ಸಾವು; ಪತಿಯ ವಿರುದ್ಧ ಗಂಭೀರ ಕಿರುಕುಳ ಹಾಗೂ ಗೃಹ ಹಿಂಸಾಚಾರದ ಆರೋಪ
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಬಹುಮಹಡಿ ಕಟ್ಟಡದಿಂದ ಜಿಗಿದು ಮಹಿಳೆ ಸಾವು; ಪತಿಯ ವಿರುದ್ಧ ಗಂಭೀರ ಕಿರುಕುಳ ಹಾಗೂ ಗೃಹ ಹಿಂಸಾಚಾರದ ಆರೋಪ

Share
ಪತಿ
Share

ಗುರುಪ್ರಾಮ: ಹರಿಯಾಣದ ಗುರುಪ್ರಾಮದ ಸೋಹ್ನಾ-ದೋಹ್ಲಾ ರಸ್ತೆಯಲ್ಲಿರುವ ಎಂವಿಎನ್ ಸೊಸೈಟಿಯ ಟವರ್ 8 ರ 3ನೇ ಮಹಡಿಯಿಂದ ಜಿಗಿದು 30 ವರ್ಷದ ದೀಪಾ ಎಂಬ ಮಹಿಳೆ ಶಂಕಾಸ್ಪದವಾಗಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಸ್ಥರು ಆಕೆಯ ಪತಿ ಜತೇಂದ್ರ (ಅಲಿಯಾಸ್ ಜತಿನ್) ವಿರುದ್ಧ ದೌರ್ಜನ್ಯ ಮತ್ತು ನಿರಂತರ ಮಾನಸಿಕ-ದೈಹಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಘಟನೆಯ ವಿವರ:

ದೀಪಾ ಮೂಲತಃ ದೆಹಲಿಯ ಶಾಲೀಮಾರ್ ಗಾವ್‌ ನಿವಾಸಿಯಾಗಿದ್ದು, 2018ರ ಮಾರ್ಚ್‌ನಲ್ಲಿ ದೆಹಲಿಯ ಜನಕಪುರಿಯ ಜತಿನ್ ಎಂಬುವವರೊಂದಿಗೆ ವಿವಾಹವಾಗಿದ್ದರು. ಇತ್ತೀಚೆಗೆ ಈ ದಂಪತಿ ಸೋಹ್ನಾದ ಎಂವಿಎನ್ ಸೊಸೈಟಿಗೆ ಸ್ಥಳಾಂತರಗೊಂಡು ವಾಸಿಸುತ್ತಿದ್ದರು. ಜತಿನ್ ಈ ಸೊಸೈಟಿಯ ಮಾಜಿ ಜಂಟಿ ಕಾರ್ಯದರ್ಶಿಯಾಗಿದ್ದ. ಗುರುವಾರ ದಿನದಂದು ಸೊಸೈಟಿಯ 3ನೇ ಮಹಡಿಯಿಂದ ದೀಪಾ ಕೆಳಗೆ ಬಿದ್ದ ತಕ್ಷಣ ನಿವಾಸಿಗಳಲ್ಲಿ ಆತಂಕ ಮೂಡಿತ್ತು.

ಸೊಸೈಟಿ ನಿವಾಸಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದ ದೀಪಾರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಮೃತದೇಹವನ್ನು ಸೋಹ್ನಾ ಸಿವಿಲ್ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಕುಟುಂಬದವರ ಆರೋಪ:

ಮೃತರ ತಂದೆ ನೀಡಿರುವ ದೂರಿನ ಪ್ರಕಾರ:

  • ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಕೌಟುಂಬಿಕ ಕಲಹಗಳು ಆರಂಭವಾಗಿದ್ದವು.

  • ಕಳೆದ 6 ತಿಂಗಳಿನಿಂದ ಪತಿ ಜತಿನ್ ನಿರಂತರವಾಗಿ ದೀಪಾಗೆ ಕಿರುಕುಳ ನೀಡುತ್ತಿದ್ದ.

  • ಪತಿಯು ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬರುವುದಲ್ಲದೆ, ಗೆಳೆಯರನ್ನು ಮನೆಗೆ ಕರೆತಂದು ಅವರ ಎದುರಲ್ಲೇ ದೀಪಾರನ್ನು ನಿಂದಿಸಿ, ಕೀಳಾಗಿ ಕಾಣುತ್ತಿದ್ದ ಹಾಗೂ ದೈಹಿಕವಾಗಿ ಹೂಡೆಯುತ್ತಿದ್ದ.

  • ಈ ನಿರಂತರ ಗೃಹ ಹಿಂಸೆ ಮತ್ತು ಮಾನಸಿಕ ಯಾತನೆ ತಾಳಲಾರದೆ ದೀಪಾ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ದುರಂತ ಘಟನೆಯಿಂದಾಗಿ ಮೃತ ದೀಪಾ ಅವರ 8 ವರ್ಷದ ಪುಟ್ಟ ಗಂಡು ಮಗ ತಾಯಿಯನ್ನು ಕಳೆದುಕೊಂಡು ಅನಾಥನಾಗಿದ್ದಾನೆ.

ಪೊಲೀಸ್ ತನಿಖೆ:

ಮೃತರ ತಂದೆ ನೀಡಿದ ದೂರಿನ ಆಧಾರದ ಮೇಲೆ ಗುರುಪ್ರಾಮ ಪೊಲೀಸರು ಪತಿ ಜತಿನ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಹಾಗೂ ಸಮಗ್ರ ತನಿಖೆಯ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles