Home ಕ್ರೈಂ ನ್ಯೂಸ್ ನೋಡಲು ಬರ್ತಿದ್ರು ಕಂಡೀಷನ್ ಕೇಳಿ ಮದುವೆಗೆ ನಿರಾಕರಿಸ್ತಿದ್ರು: ಬೇಸತ್ತ ಐಟಿ ಸಂಸ್ಥೆ ಉದ್ಯೋಗಿ, ರೂಪವತಿ ಮಾಡಿಕೊಂಡಿದ್ದೇನು?
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ನೋಡಲು ಬರ್ತಿದ್ರು ಕಂಡೀಷನ್ ಕೇಳಿ ಮದುವೆಗೆ ನಿರಾಕರಿಸ್ತಿದ್ರು: ಬೇಸತ್ತ ಐಟಿ ಸಂಸ್ಥೆ ಉದ್ಯೋಗಿ, ರೂಪವತಿ ಮಾಡಿಕೊಂಡಿದ್ದೇನು?

Share
ಮದುವೆ
Share

ಹೈದರಾಬಾದ್: ಮದುವೆಯಾಗದಿದ್ದಕ್ಕೆ ಮನನೊಂದು ಐಟಿ ಉದ್ಯೋಗಿ, ರೂಪವತಿ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ನಿಜಾಮಾಬಾದ್ ಬೈನ್ಸಾ ಮೂಲದ ವಿಜಯಲಕ್ಷ್ಮಿ ಮತ್ತು ಅವರ ತಾಯಿ ಸರಸ್ವತಿ ಹೈದರಾಬಾದ್ ನ ಕೂಕಟ್ಪಲ್ಲಿಯ ಮೈತ್ರಿ ನಗರದಲ್ಲಿ ವಾಸವಾಗಿದ್ರು.

ಐಟಿ ಸಂಸ್ಥೆ ಸಾಫ್ಟ್ ವೇರ್ ಇಂಜಿನಿಯರ್:

ವಿಜಯಲಕ್ಷ್ಮಿ ಐಟಿ ಸಂಸ್ಥೆಯಲ್ಲಿ ಸಾಫ್ಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ತಂದೆ ಇರಲಿಲ್ಲ, ಜನವರಿ 31ರ ಬೆಳಗ್ಗೆ ವಿಜಯಲಕ್ಷ್ಮಿ ಎರಡು ದಿನಗಳಲ್ಲಿ ಹಿಂತಿರುಗುತ್ತೇನೆ ಎಂದು ಹೇಳಿ ಹೊರಟಿದ್ದರು. ಆದರೆ ವಿಜಯಲಕ್ಷ್ಮಿ ವಾಪಸ್ ಬರದಿದ್ದಾಗ ತಾಯಿ ಸರಸ್ವತಿ ಪೊಲೀಸರಿಗೆ ದೂರು ನೀಡಿದ್ದರು.

ಹುಸೇನ್ ಸಾಗರ್ ಕೆರೆಯಲ್ಲಿ ಶವ ಪತ್ತೆ:

ಶೋಧ ನಡೆಸಿದ್ದ ಪೊಲೀಸರಿಗೆ ಹೈದರಾಬಾದ್‌ನ ಹುಸೇನ್ ಸಾಗರ್ ಕೆರೆಯಲ್ಲಿ ವಿಜಯಲಕ್ಷ್ಮಿ ಮೃತದೇಹ ಪತ್ತೆಯಾಗಿತ್ತು.

ಮನನೊಂದಿದ್ಯಾಕೆ ವಿಜಯಲಕ್ಷ್ಮೀ:

ಇತ್ತ ಪುತ್ರಿಗೆ ಮದುವೆ ಮಾಡಲು ಕುಟುಂಬಸ್ಥರು ಸಾಕಷ್ಟ ಪ್ರಯತ್ನ ಪಡುತ್ತಿದ್ದರು. ವಿಜಯಲಕ್ಷ್ಮಿಗಾಗಿ ಕುಟುಂಬಸ್ಥರು ಹಲವು ಯುವಕರನ್ನು ಆಯ್ಕೆ ಮಾಡಿದ್ದರು. ಪ್ರತೀಬಾರಿ ಬಂದವವರೂ ವಿಜಯಲಕ್ಷ್ಮಿಯನ್ನ ಒಪ್ಪುತ್ತಿದ್ದರಾದ್ರೂ, ಅವರು ಹಾಕುತ್ತಿದ್ದ ಷರತ್ತು ಒಪ್ಪುತ್ತಿರಲಿಲ್ಲ. ಹೀಗಾಗಿ ಪ್ರತೀ ಸಂಬಂಧ ಮದುವೆಯವರೆಗೂ ಹೋಗುತ್ತಿರಲಿಲ್ಲ.

ಮದುವೆ ಬಳಿಕ ತಾಯಿಯೂ ತನ್ನೊಟ್ಟಿಗೆ ವಾಸದ ಷರತ್ತು:

ವಿಜಯಲಕ್ಷ್ಮಿ ಅವರ ತಾಯಿ ಸರಸ್ವತಿ ಒಂಟಿಯಾಗಿದ್ದು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ವಿಜಯಲಕ್ಷ್ಮಿ ಮದುವೆ ಬಳಿಕ ತನ್ನೊಟ್ಟಿಗೆ ಕರೆದೊಯ್ಯುವುದಾಗಿ ಹೇಳುತ್ತಿದ್ದರು. ಇದು ಆಕೆಯನ್ನ ನೋಡಲು ಬರುತ್ತಿದ್ದ ಯಾವುದೇ ಸಂಬಂಧಗಳಿಗೆ ಒಪ್ಪಿಗೆಯಾಗ್ತಿರಲಿಲ್ಲ. ಹೀಗಾಗಿ ಸಂಬಂಧ ಅಲ್ಲಿಗೇ ಮುರಿದು ಬೀಳುತ್ತಿತ್ತು. ಇದರಿಂದ ವಿಜಯಲಕ್ಷ್ಮಿ ಖಿನ್ನತೆಗೆ ಜಾರಿದ್ದರು. ಇದೇ ಆತ್ಮಹ*ತ್ಯೆಗೆ ಕಾರಣ ಎನ್ನಲಾಗ್ತಿದೆ.

ಸೌಂದರ್ಯವತಿಯಾದ ವಿಜಯಲಕ್ಷ್ಮಿ, ಹುಡುಗರು ಒಪ್ತಿಲ್ಲ ಅಂತ ಆತ್ಮಹತ್ಯೆಗೆ ಶರಣಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯೇ ಸರಿ.

Share

Leave a comment

Leave a Reply

Your email address will not be published. Required fields are marked *