Home ದಾವಣಗೆರೆ ಡಿಜೆ ಅನುಮತಿ ಬಗ್ಗೆ ಸ್ಪಷ್ಟವಾಗಿ ಹೇಳದ ಸಚಿವರು: ಹಿಂದೂಗಳೆಲ್ಲರೂ ಒಂದು ಎಂಬಂತೆ ಹಿಂದೂ ಮಹಾಗಣಪತಿ ಉತ್ಸವ ಆಗಲೆಂದು ಹಾರೈಸಿದ್ರು ಎಸ್. ಎಸ್. ಮಲ್ಲಿಕಾರ್ಜುನ್!
ದಾವಣಗೆರೆನವದೆಹಲಿಬೆಂಗಳೂರು

ಡಿಜೆ ಅನುಮತಿ ಬಗ್ಗೆ ಸ್ಪಷ್ಟವಾಗಿ ಹೇಳದ ಸಚಿವರು: ಹಿಂದೂಗಳೆಲ್ಲರೂ ಒಂದು ಎಂಬಂತೆ ಹಿಂದೂ ಮಹಾಗಣಪತಿ ಉತ್ಸವ ಆಗಲೆಂದು ಹಾರೈಸಿದ್ರು ಎಸ್. ಎಸ್. ಮಲ್ಲಿಕಾರ್ಜುನ್!

Share
ಹಿಂದೂ
Share

ದಾವಣಗೆರೆ: ಹಿಂದೂಗಳೆಲ್ಲರೂ ಒಂದು ಎಂಬಂತೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸುವ ಹಿಂದೂ ಮಹಾಗಣಪತಿ ಉತ್ಸವ ಯಾವ ಅಡೆ ತಡೆ ಇಲ್ಲದೇ ಸಂಭ್ರಮದಿಂದ ನೆರವೇರಲಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಶಯ ವ್ಯಕ್ತಪಡಿಸಿದರು.

ಪ್ರತಿ ವರ್ಷ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗುವ ಗಣೇಶೋತ್ಸವದ ಹಂದರ ಕಂಬ ಪೂಜೆ ಮತ್ತು ಪ್ರಮುಖ ಸಿದ್ಧತೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಎಲ್ಲಾ ಧರ್ಮದವರು ಸಂಭ್ರಮದಿಂದ ಗಣೇಶೋತ್ಸವ ಆಚರಿಸುವಂತಾಗಲಿ. ಯಾವುದೇ ವಿಘ್ನಗಳಿಲ್ಲದೇ ಸರಾಗವಾಗಿ ಜರುಗಲಿ ಎಂದು ಹೇಳಿದರು.

ಸಣ್ಣಪುಟ್ಟ ಸಮಸ್ಯೆಗಳಿದ್ದವು. ಎಲ್ಲವನ್ನೂ ಬಗೆಹರಿಸಲಾಗಿದೆ. ದಾವಣಗೆರೆ ಹಿಂದೂ ಮಹಾಗಣಪತಿ ಹಂದರ ಕಂಬದ ಪೂಜೆ ವಿಜೃಂಭಣೆಯಿಂದ ನೆರವೇರಿದೆ. ಸಮಾಜದ ಎಲ್ಲಾ ಬಾಂಧವರು ಒಗ್ಗಟ್ಟಿನಿಂದ ಹಬ್ಬವನ್ನು ಆಚರಣೆ ಮಾಡಲಿ. ಹಿಂದೂ ಮಹಾಗಣಪತಿ ವಿಜೃಂಭಣೆಯು ಎಲ್ಲಾ ಸಮಾಜದವರು ಸೇರಿ ಮಾಡಬೇಕು. ಅಲ್ಲಲ್ಲಿ ಗೊಂದಲ ಇದ್ದವು. ಗುರು ಜೊಳ್ಳಿ, ದಿನೇಶ್ ಶೆಟ್ಟಿ ಸೇರಿ ಮಾಡುತ್ತಾರೆ. ಪಕ್ಷ, ಜಾತಿ, ಪಂಗಡ ಅಂತೇನಿಲ್ಲ. ಹಿಂದೂಗಳೆಲ್ಲರೂ ಒಂದು ಎಂಬ ರೀತಿಯಲ್ಲಿ ಹಬ್ಬ ಆಚರಿಸುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಡಿ. ಜೆ. ಅನುಮತಿ ಬಗ್ಗೆ ಸ್ಪಷ್ಟವಾಗಿ ಹೇಳದ ಸಚಿವರು, ಇನ್ನೂ ಒಂದು ತಿಂಗಳು ಇದೆ. ನೋಡೋಣ. ಕಳೆದ ಬಾರಿ ರಾಜ್ಯ ಸರ್ಕಾರವೇ ಡಿಜೆ ಬ್ಯಾನ್ ಮಾಡಿತ್ತು. ಈ ಬಾರಿಯೂ ಆದೇಶ ಇದೆ. ಸರ್ಕಾರದ ಮಟ್ಟದಲ್ಲಿ ಮಾತನಾಡೋಣ
ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles