SUDDIKSHANA KANNADA NEWS/ DAVANAGERE/ DATE:11-02-2024
ದಾವಣಗೆರೆ: ಬೆಂಗಳೂರು ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ನಿರ್ದೇಶಕ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ವಿನಯ್ ಕುಮಾರ್ ಜಿ. ಬಿ. ಕಕ್ಕರಗೊಳ್ಳ ಈಗ ರಾಜಕಾರಣದಲ್ಲಿ ಮಿಂಚುತ್ತಿರುವ ಯುವ ನಾಯಕ. ನೀನು ಮುಂದೆ ಸಾಗು, ನಿನ್ನ ಹಿಂದೆ ಸಮಾಜ ಇದೆ, ಮಠವೂ ಇದೆ, ಎಲ್ಲಾ ಶೋಷಿತ ಸಮುದಾಯಗಳು ನಿನ್ನಪರವಾಗಿ ನಿಲ್ಲುತ್ತವೆ. ಇದು ಖಂಡಿತ ಆಗಬೇಕು ಎಂದು ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ವಿಶ್ವಾಸ ತುಂಬಿದರು.
ಶಿವಮೊಗ್ಗ ಜಿಲ್ಲಾ ಕನಕ ನೌಕರರ ಸಂಘ ಸರ್ಕಾರಿ ನೌಕರರ ವಿಕಾಸ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಘದ ಉದ್ಘಾಟನೆ ಹಾಗೂ ಕನಕ ನೌಕರರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿನಯ್ ಕುಮಾರ್ ಅವರು, ಕಾಂಗ್ರೆಸ್ ನ ಔಟ್ರಿಚ್ ಸೆಲ್ ವಿಭಾಗದ ಕರ್ನಾಟಕ ರಾಜ್ಯ ಯುವ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿರುವ ವಿನಯ್ ಕುಮಾರ್ ಪಾದಯಾತ್ರೆ ಮೂಲಕ ಎಲ್ಲರನ್ನೂ ಸೆಳೆದಿರುವ ನಾಯಕ. ಶೈಕ್ಷಣಿಕ ಕ್ಷೇತ್ರದಲ್ಲಿ ಅಗಾಧ ಸೇವೆ ಮಾಡುತ್ತಿದ್ದಾರೆ. ಇಂಥ ನಾಯಕರಿಗೆ ಪ್ರೋತ್ಸಾಹ ಅಗತ್ಯ ಎಂದು ಪ್ರತಿಪಾದಿಸಿದರು.
ಸಿಎಂ ಸಿದ್ದರಾಮಯ್ಯರಂಥ ನಾಯಕರು ಮತ್ತೊಬ್ಬರಿಲ್ಲ. ಅವರು ಹೋರಾಟದ ಹಿನ್ನೆಲೆಯಿಂದ ಬಂದವರು. ಇಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಅದೇ ರೀತಿಯಲ್ಲಿ ಎಲ್ಲರೂ ಬೆಳೆಯುವಂತಾಗಬೇಕು. ಈ ನಾಡಿಗೆ ಕೊಡುಗೆ ಕೊಡುವಂತಾಗಬೇಕು. ರಾಜಕೀಯವಾಗಿ, ಶೈಕ್ಷಣಿಕವಾಗಿ ದಾಪುಗಾಲು ಇಡುತ್ತಿರುವುದಕ್ಕೆ ಆಕ್ಷೇಪಣೆ ಮಾಡುವ ಮನಸುಗಳು ಇನ್ನೂ ಈ ಸಮಾಜದಲ್ಲಿ ಇರುವುದು ಬೇಸರದ ಸಂಗತಿ. ಇದನ್ನು ತಳ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ತಳಸಮುದಾಯಗಳು ಲ್ಲಿ ಈ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳುವಂತಾಗಬೇಕು. ವಿನಯ್ ಕುಮಾರ್ ಭಾಷಣ ಮಾಡುವಾಗ ಅವರ ಮಾತುಗಳನ್ನು ಕೇಳಿ ಖುಷಿಯಾಯಿತು. ನೀನು ಮುಂದೆ ಹೋಗು, ನಾವೆಲ್ಲರೂ ನಿನ್ನ ಜೊತೆಗಿದ್ದೇವೆ. ಖಂಡಿತವಾಗಿಯೂ ಎಲ್ಲಾ ಸಮುದಾಯಗಳೂ ನಿನ್ನನ್ನು ಬೆಂಬಲಿಸುತ್ತವೆ. ಧೈರ್ಯದಿಂದ ಮುನ್ನುಗ್ಗು ಎಂದು ಆತ್ಮವಿಶ್ವಾಸ ತುಂಬುವ ಕೆಲಸವನ್ನು ಶ್ರೀಗಳು ಮಾಡಿದರು.
ಕೇವಲ ಒಂದು ಸಮುದಾಯದವರು ರಾಜಕೀಯ ಅಧಿಕಾರ ಹಿಡಿಯುವುದಲ್ಲ. ಒಂದು ಸಮುದಾಯದವರು ಉನ್ನತ ಹುದ್ದೆಯಲ್ಲಿ ಇರುವಂಥರಾಗಬಾರದು. ಎಲ್ಲರೂ ಸಮಾನ ಅವಕಾಶ ಸಿಗಬೇಕು. ಸಿದ್ದರಾಮಯ್ಯನವರಂಥ ನಾಯಕರು ಮತ್ತೊಬ್ಬರಿಲ್ಲ ಎಂದು ಬಣ್ಣಿಸಿದರು.
ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ಸಂಘದ ಅಧ್ಯಕ್ಷ ಹೆಚ್. ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿನಯ್ ಕುಮಾರ್ ಅವರ ಸ್ಫೂರ್ತಿದಾಯಕ ಮಾತುಗಳು ಎಲ್ಲರನ್ನೂ ಆಕರ್ಷಿಸಿತು.