Home ಕ್ರೈಂ ನ್ಯೂಸ್ ನೃತ್ಯಗಾರ್ತಿ ಜೊತೆ ರೂಂನಲ್ಲಿ ಖ್ಯಾತ ಗಾಯಕ ಕುಚ್ ಕುಚ್: ‘ಕಷ್ಟದಲ್ಲಿದ್ದಾಗ ನೆರವಾದೆ, ಕೊನೆಗೆ ದ್ರೋಹ ಎಸಗಿದಳು’ ಎಂಬ ಆರೋಪ ಮಾಡಿದ ಪತ್ನಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನೃತ್ಯಗಾರ್ತಿ ಜೊತೆ ರೂಂನಲ್ಲಿ ಖ್ಯಾತ ಗಾಯಕ ಕುಚ್ ಕುಚ್: ‘ಕಷ್ಟದಲ್ಲಿದ್ದಾಗ ನೆರವಾದೆ, ಕೊನೆಗೆ ದ್ರೋಹ ಎಸಗಿದಳು’ ಎಂಬ ಆರೋಪ ಮಾಡಿದ ಪತ್ನಿ!

Share
ಗಾಯಕ
Share

ಹೈದರಾಬಾದ್: ತೆಲುಗು ಜಾನಪದ ಗಾಯನ ಹಾಗೂ ನೃತ್ಯ ಕ್ಷೇತ್ರದಲ್ಲಿ ಇದೀಗ ಭಾರಿ ವಿವಾದವೊಂದು ಭುಗಿಲೆದ್ದಿದೆ. ಜನಪ್ರಿಯ ಜಾನಪದ ಗಾಯಕ ಈಶ್ವರ್ ಸಾಯಿ ಮತ್ತು ನೃತ್ಯಗಾರ್ತಿ ಮಾಧುರಿ ರಾಥೋಡ್ ಒಂದೇ ಕೊಠಡಿಯಲ್ಲಿದ್ದಾಗ ಈಶ್ವರ್ ಅವರ ಪತ್ನಿ ಸ್ಥಳದಲ್ಲೇ ಹಿಡಿದಿದ್ದಾರೆ ಎನ್ನಲಾದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕೊಠಡಿಯಲ್ಲೇ ರೆಡ್‌ಹ್ಯಾಂಡ್ ಆಗಿ ಹಿಡಿದ ಪತ್ನಿ

ತಡರಾತ್ರಿ ಇಬ್ಬರೂ ಇದ್ದ ಕೊಠಡಿಗೆ ತೆರಳಿದ ಪತ್ನಿ, ಮಾಧುರಿ ರಾಥೋಡ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ನಡೆದ ತೀವ್ರ ವಾಗ್ವಾದ ಹಾಗೂ ಮಾತಿನ ಚಕಮಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ನನ್ನ ಗಂಡನೇ ನಿನಗೆ ಸಿಕ್ಕಿದ್ದಾ?’ – ಪತ್ನಿ ಆಕ್ರೋಶ

ಪತಿಯೊಂದಿಗೆ ಮಾಧುರಿ ಇರುವುದನ್ನು ಕಂಡು ಆಕ್ರೋಶಗೊಂಡ ಪತ್ನಿ, “ನನ್ನ ಗಂಡನೇ ನಿನಗೆ ಸಿಕ್ಕಿದ್ದಾ?” ಎಂದು ತೀವ್ರವಾಗಿ ಪ್ರಶ್ನಿಸಿದ್ದಾರೆ. “ನಮ್ಮ ಮದುವೆಯಾಗಿ ಏಳು ವರ್ಷಗಳಾಗಿವೆ. ನನ್ನ ಪತಿ ಒಳ್ಳೆಯವರು, ಅವರಿಗೆ ಯಾವುದೇ ಕೆಟ್ಟ ಅಭ್ಯಾಸಗಳಿರಲಿಲ್ಲ. ಆದರೆ ಮಾಧುರಿಯೇ ಅವರ ಮೇಲೆ ಪ್ರಭಾವ ಬೀರಿ ತನ್ನತ್ತ ಸೆಳೆದುಕೊಂಡಿದ್ದಾಳೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ಕಷ್ಟದಲ್ಲಿದ್ದಾಗ ನೆರವಾದೆ, ಕೊನೆಗೆ ದ್ರೋಹ ಎಸಗಿದರು’ “ಹಿಂದೆ ಮಾಧುರಿಗೆ ಜೀವನದಲ್ಲಿ ಬ್ರೇಕಪ್ ಆದಾಗ ನಾನೇ ಆಕೆಗೆ ಧೈರ್ಯ ತುಂಬಿ ಸಾಂತ್ವನ ಹೇಳಿದ್ದೆ. ಆಕೆಯ ಕಷ್ಟದಲ್ಲಿ ಜೊತೆಗಿದ್ದೆ. ಆದರೆ, ಆಕೆಯೇ ಇಂದು ನನ್ನ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎಬ್ಬಿಸಿ ದ್ರೋಹ ಎಸಗಿದ್ದಾಳೆ,” ಎಂದು ಪತ್ನಿ ಕಣ್ಣೀರಿಟ್ಟಿದ್ದಾರೆ.

ಜಾನಪದ ಕ್ಷೇತ್ರದಿಂದ ಬಹಿಷ್ಕಾರಕ್ಕೆ ಆಗ್ರಹ

ಘಟನೆಯಿಂದ ತೀವ್ರ ಕಂಗೆಟ್ಟಿರುವ ಪತ್ನಿ, ಇಂತಹ ನಡವಳಿಕೆ ಉಳ್ಳವರಿಗೆ ತೆಲುಗು ಜಾನಪದ ಹಾಡು ಹಾಗೂ ನೃತ್ಯ ಕ್ಷೇತ್ರದಲ್ಲಿ ಅವಕಾಶ ನೀಡಬಾರದು ಮತ್ತು ಅವರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂದು ಸಾರ್ವಜನಿಕವಾಗಿ ಆಗ್ರಹಿಸಿದ್ದಾರೆ. ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರಲ್ಲಿ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.

Share

Leave a comment

Leave a Reply

Your email address will not be published. Required fields are marked *

Related Articles